ದೆಹಲಿ ಇವಿ ನೀತಿಗೆ ಸಚಿವ ಸಂಪುಟ ಗ್ರೀನ್ ಸಿಗ್ನಲ್; ₹30 ಲಕ್ಷದವರೆಗಿನ ಎಲೆಕ್ಟ್ರಿಕ್ ಕಾರುಗಳಿಗೆ ತೆರಿಗೆ ವಿನಾಯಿತಿ

1 Min Read
1 Min Read

ದೆಹಲಿ ಇವಿ ನೀತಿಗೆ ಸಚಿವ ಸಂಪುಟ ಗ್ರೀನ್ ಸಿಗ್ನಲ್; ₹30 ಲಕ್ಷದವರೆಗಿನ ಎಲೆಕ್ಟ್ರಿಕ್ ಕಾರುಗಳಿಗೆ ತೆರಿಗೆ ವಿನಾಯಿತಿ

ರಾಜಧಾನಿ ದೆಹಲಿಯನ್ನು 2030ರ ವೇಳೆಗೆ ಶೂನ್ಯ ಮಾಲಿನ್ಯ (Zero Emission) ಸಾರಿಗೆ ವ್ಯವಸ್ಥೆಯ ನಗರವನ್ನಾಗಿ ರೂಪಿಸುವ ಮಹತ್ವಾಕಾಂಕ್ಷಿ ಎಲೆಕ್ಟ್ರಿಕ್ ವಾಹನ (EV) ನೀತಿಗೆ ದೆಹಲಿ ಸಚಿವ ಸಂಪುಟ ಅನುಮೋದನೆ ನೀಡಿದೆ.

ಹೊಸ ನೀತಿಯಡಿ ₹30 ಲಕ್ಷದವರೆಗಿನ ಎಲೆಕ್ಟ್ರಿಕ್ ಕಾರುಗಳಿಗೆ ನೋಂದಣಿ ಶುಲ್ಕ ಹಾಗೂ ರಸ್ತೆ ತೆರಿಗೆಯಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ಅಲ್ಲದೆ, ಹಳೆಯ ವಾಹನವನ್ನು ಸ್ಕ್ರ್ಯಾಪ್ ಮಾಡಿ ಹೊಸ ಎಲೆಕ್ಟ್ರಿಕ್ ವಾಹನ ಖರೀದಿಸುವವರಿಗೆ ₹1 ಲಕ್ಷದವರೆಗೆ ಪ್ರೋತ್ಸಾಹಧನ ನೀಡಲಾಗುತ್ತದೆ.

ಇದರ ಜೊತೆಗೆ 2028ರ ಏಪ್ರಿಲ್‌ನಿಂದ ದೆಹಲಿಯಲ್ಲಿ ಹೊಸದಾಗಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ನೋಂದಣಿಗೆ ಮಾತ್ರ ಅವಕಾಶ ನೀಡುವ ಮಹತ್ವದ ನಿರ್ಧಾರವನ್ನೂ ಸರ್ಕಾರ ಕೈಗೊಂಡಿದೆ.

ಜುಲೈ 1ರಿಂದ ನಾಲ್ಕು ಹಂತಗಳಲ್ಲಿ ಜಾರಿಯಾಗಲಿರುವ ಈ ನೀತಿಗಾಗಿ ಸರ್ಕಾರ ₹15 ಸಾವಿರ ಕೋಟಿ ವೆಚ್ಚ ಮಾಡಲು ನಿರ್ಧರಿಸಿದೆ. ಇದರ ಭಾಗವಾಗಿ ಸುಮಾರು ₹8 ಸಾವಿರ ಕೋಟಿ ಮೊತ್ತವನ್ನು ಚಾರ್ಜಿಂಗ್ ಸ್ಟೇಷನ್‌ಗಳು ಸೇರಿದಂತೆ ಇವಿ ಮೂಲಸೌಕರ್ಯ ಅಭಿವೃದ್ಧಿಗೆ ಹಾಗೂ ರಸ್ತೆ ತೆರಿಗೆ ವಿನಾಯಿತಿಗೆ ಬಳಸಲಾಗುತ್ತದೆ.

ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ರೇಖಾ ಗುಪ್ತಾ, ಈ ನೀತಿಯ ಮುಖ್ಯ ಉದ್ದೇಶ ಪರಿಸರ ಸ್ನೇಹಿ, ಶೂನ್ಯ ಉತ್ಸರ್ಜನೆಯ ವಾಹನಗಳ ಬಳಕೆಯನ್ನು ಉತ್ತೇಜಿಸಿ, ದೆಹಲಿಯನ್ನು ಹಂತ ಹಂತವಾಗಿ ಮಾಲಿನ್ಯ ಮುಕ್ತ ನಗರವನ್ನಾಗಿ ರೂಪಿಸುವುದಾಗಿದೆ ಎಂದು ಹೇಳಿದರು.

ಈ ನೀತಿಯ ಮೂಲಕ ದೆಹಲಿಯ ಜನರಿಗೆ ಒಟ್ಟಾರೆ ₹15 ಸಾವಿರ ಕೋಟಿ ಮೌಲ್ಯದ ವಿವಿಧ ಸೌಲಭ್ಯಗಳು ಮತ್ತು ಪ್ರೋತ್ಸಾಹಧನಗಳು ದೊರೆಯಲಿವೆ ಎಂದು ಅವರು ತಿಳಿಸಿದರು.

Share This Article
Leave a Comment