ಎಫ್‌ಐಎಚ್ ಪ್ರೊ ಲೀಗ್: ಪೆನಾಲ್ಟಿ ಶೂಟ್‌ಔಟ್‌ನಲ್ಲಿ ಇಂಗ್ಲೆಂಡ್ ಮಣಿಸಿದ ಭಾರತ

1 Min Read
1 Min Read

ಎಫ್‌ಐಎಚ್ ಪ್ರೊ ಲೀಗ್: ಪೆನಾಲ್ಟಿ ಶೂಟ್‌ಔಟ್‌ನಲ್ಲಿ ಇಂಗ್ಲೆಂಡ್ ಮಣಿಸಿದ ಭಾರತ

ಎಫ್‌ಐಎಚ್ ಹಾಕಿ ಪ್ರೊ ಲೀಗ್‌ನಲ್ಲಿ ಭಾರತೀಯ ಪುರುಷರ ಹಾಕಿ ತಂಡ ರೋಚಕ ಪೈಪೋಟಿಯಲ್ಲಿ ಆತಿಥೇಯ ಇಂಗ್ಲೆಂಡ್ ತಂಡವನ್ನು ಪೆನಾಲ್ಟಿ ಶೂಟ್‌ಔಟ್‌ನಲ್ಲಿ 3-2 ಗೋಲುಗಳ ಅಂತರದಿಂದ ಮಣಿಸಿ ಅಮೋಘ ಗೆಲುವು ಸಾಧಿಸಿದೆ. ಲಂಡನ್‌ನ ಲೀ ವ್ಯಾಲಿ ಹಾಕಿ ಮತ್ತು ಟೆನಿಸ್ ಕೇಂದ್ರದಲ್ಲಿ ನಡೆದ ಪಂದ್ಯ ನಿಗದಿತ ಸಮಯದಲ್ಲಿ ಉಭಯ ತಂಡಗಳು ಗೋಲು ಗಳಿಸಲು ವಿಫಲವಾದ ಕಾರಣ 0-0 ಸಮಬಲದಲ್ಲಿ ಅಂತ್ಯಗೊಂಡಿತ್ತು.

ಬಳಿಕ ನಡೆದ ಪೆನಾಲ್ಟಿ ಶೂಟ್‌ಔಟ್‌ನಲ್ಲಿ ಭಾರತದ ಪರ ಅಭಿಷೇಕ್, ಶಿಲಾನಂದ್ ಲಕ್ರಾ ಹಾಗೂ ಹಾರ್ದಿಕ್ ಸಿಂಗ್ ಯಶಸ್ವಿಯಾಗಿ ಗೋಲು ದಾಖಲಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

ಪಂದ್ಯದುದ್ದಕ್ಕೂ ಭಾರತದ ರಕ್ಷಣಾ ವಿಭಾಗ ಅತ್ಯುತ್ತಮ ಪ್ರದರ್ಶನ ನೀಡಿತು. ‘ಪ್ಲೇಯರ್ ಆಫ್ ದಿ ಮ್ಯಾಚ್’ ಪ್ರಶಸ್ತಿ ಪಡೆದ ರಕ್ಷಣಾ ಆಟಗಾರ ಸಂಜಯ್ ತಂಡದ ರಕ್ಷಣಾ ಕೋಟೆಯನ್ನು ಬಲಪಡಿಸಿದರೆ, ಗೋಲ್‌ಕೀಪರ್‌ಗಳೂ ಹಲವು ಮಹತ್ವದ ಸೇವ್‌ಗಳ ಮೂಲಕ ಕ್ಲೀನ್‌ಶೀಟ್ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸಿದರು.

ಹಾಕಿ ವಿಶ್ವಕಪ್‌ಗೆ ಮುನ್ನ ಭಾರತ ಆಡಿದ ಕೊನೆಯ ಎಫ್‌ಐಎಚ್ ಪ್ರೊ ಲೀಗ್ ಪಂದ್ಯ ಇದಾಗಿದ್ದು, ಈ ಗೆಲುವು ತಂಡದ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ.

Share This Article