ಆತ್ಮನಿರ್ಭರ ರಕ್ಷಣಾ ಉತ್ಪಾದನೆಗೆ ವೇಗ; ನಾಳೆ ನಾಗ್ಪುರದಲ್ಲಿ ರಾಜನಾಥ್ ಸಿಂಗ್ ಮಹತ್ವದ ಕಾರ್ಯಕ್ರಮ

1 Min Read
1 Min Read

ಭಾರತದ ರಕ್ಷಣಾ ಉತ್ಪಾದನಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ಮಹತ್ವದ ಹೆಜ್ಜೆಯಾಗಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ನಾಳೆ ನಾಗ್ಪುರದ ಅಂಬಾಜರಿ ಆರ್ಡಿನೆನ್ಸ್ ಫ್ಯಾಕ್ಟರಿಯ ಯಂತ್ರ ಇಂಡಿಯಾ ಲಿಮಿಟೆಡ್‌ನಲ್ಲಿ 10 ಸಾವಿರ ಟನ್ ಸಾಮರ್ಥ್ಯದ ಅಲ್ಯೂಮಿನಿಯಂ ಎಕ್ಸ್‌ಟ್ರೂಷನ್ ಪ್ರೆಸ್ ಘಟಕಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ.

ದೇಶದ ರಕ್ಷಣಾ ಮತ್ತು ಏರೋಸ್ಪೇಸ್ ಕ್ಷೇತ್ರಗಳ ಅಗತ್ಯಗಳಿಗೆ ಅನುಗುಣವಾಗಿ ಉನ್ನತ ಗುಣಮಟ್ಟದ, ಹೆಚ್ಚಿನ ಬಲ ಹೊಂದಿರುವ ಹಾಗೂ ನಿಖರ ಅಲ್ಯೂಮಿನಿಯಂ ಮಿಶ್ರಲೋಹ (ಅಲಾಯ್) ಉತ್ಪನ್ನಗಳ ತಯಾರಿಕೆಗೆ ಈ ಯೋಜನೆ ನೆರವಾಗಲಿದೆ.

ಈ ಅತ್ಯಾಧುನಿಕ ಎಕ್ಸ್‌ಟ್ರೂಷನ್ ಪ್ರೆಸ್ ದೇಶದ ರಕ್ಷಣಾ ಉತ್ಪಾದನಾ ಕ್ಷೇತ್ರಕ್ಕೆ ಪ್ರಮುಖ ರಾಷ್ಟ್ರೀಯ ಆಸ್ತಿಯಾಗಿ ರೂಪುಗೊಳ್ಳಲಿದ್ದು, ಸ್ವದೇಶಿ ಉತ್ಪಾದನಾ ಸಾಮರ್ಥ್ಯವನ್ನು ವೃದ್ಧಿಸುವ ಜೊತೆಗೆ ‘ಆತ್ಮನಿರ್ಭರ ಭಾರತ’ ಅಭಿಯಾನಕ್ಕೂ ಹೊಸ ಬಲ ನೀಡಲಿದೆ.

ರಕ್ಷಣಾ ಉಪಕರಣಗಳು, ವಿಮಾನೋದ್ಯಮ ಹಾಗೂ ಅಂತರಿಕ್ಷ ತಂತ್ರಜ್ಞಾನ ಕ್ಷೇತ್ರಗಳಿಗೆ ಅಗತ್ಯವಿರುವ ವಿಶೇಷ ಅಲ್ಯೂಮಿನಿಯಂ ಘಟಕಗಳ ಉತ್ಪಾದನೆಯಲ್ಲಿ ಈ ಯೋಜನೆ ಮಹತ್ವದ ಪಾತ್ರ ವಹಿಸುವ ನಿರೀಕ್ಷೆಯಿದೆ. ಇದರ ಮೂಲಕ ಭಾರತವು ಉನ್ನತ ತಂತ್ರಜ್ಞಾನ ಆಧಾರಿತ ರಕ್ಷಣಾ ಉತ್ಪಾದನೆಯಲ್ಲಿ ಮತ್ತಷ್ಟು ಸ್ವಾವಲಂಬನೆ ಸಾಧಿಸುವ ಗುರಿಯನ್ನು ಹೊಂದಿದೆ.

Share This Article
Leave a Comment