ಉತ್ತರ ಕರ್ನಾಟಕ ಸಮಸ್ಯೆಗಳ ಪರಿಹಾರಕ್ಕೆ 20 ದಿನಗಳ ಅಧಿವೇಶನ ಅಗತ್ಯ” – ಪ್ರತಿಪಕ್ಷ ನಾಯಕ ಆರ್. ಅಶೋಕ

3 Min Read
3 Min Read

ಬೆಂಗಳೂರು, ನವೆಂಬರ್ 29:
ರಾಜ್ಯ ಸರ್ಕಾರ ಕೇವಲ 8 ದಿನಗಳ ಅಧಿವೇಶನಕ್ಕೆ ಸೀಮಿತವಾಗಬಾರದು, ಬದಲಿಗೆ ಉತ್ತರ ಕರ್ನಾಟಕದ ಗಂಭೀರ ಸಮಸ್ಯೆಗಳ ಬಗ್ಗೆ ಸವಿಸ್ತಾರ ಚರ್ಚೆ ನಡೆಸಲು ಕನಿಷ್ಠ 20 ದಿನಗಳ ಅಧಿವೇಶನ ಕಡ್ಡಾಯ ಎಂದು ಪ್ರತಿಪಕ್ಷ ನಾಯಕ ಆರ್‌. ಅಶೋಕ ಸರ್ಕಾರಕ್ಕೆ ಒತ್ತಾಯಿಸಿದರು.

ಬಿಜೆಪಿ–ಜೆಡಿಎಸ್ ಸಮನ್ವಯ ಸಮಿತಿ ಸಭೆಯ ನಂತರ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರೊಂದಿಗೆ ಮಾತನಾಡಿದ ಅವರು, ಎರಡೂ ಪಕ್ಷಗಳು ರಾಜ್ಯದ ಹಿತಕ್ಕಾಗಿ ಒಂದಾಗಿ ಕೆಲಸ ಮಾಡುತ್ತಿರುವುದನ್ನು ಸ್ಪಷ್ಟಪಡಿಸಿದರು. ಮುಡಾ ಹಗರಣದಿಂದ ಹಿಡಿದು ವಾಲ್ಮೀಕಿ ನಿಗಮ ಅಕ್ರಮ, ಕಾಲ್ತುಳಿತ ಪ್ರಕರಣಎಲ್ಲಕ್ಕೂ ಒಂದೇ ಧ್ವನಿಯಲ್ಲಿ ಹೋರಾಟ ನಡೆಸಿದ್ದೇವೆ. ಈಗ ಬೆಳಗಾವಿ ಅಧಿವೇಶನದಲ್ಲಿ ಯಾವ ವಿಷಯಗಳನ್ನು ಪ್ರಾಥಮ್ಯಕ್ಕೆ ತರಬೇಕು ಎಂಬ ಬಗ್ಗೆ ಸಲಹೆಸೂಚನೆಗಳನ್ನು ಅಂತಿಮಗೊಳಿಸಿದ್ದೇವೆ.” ಎಂದು ಹೇಳಿದರು.

🔶 ಉತ್ತರ ಕರ್ನಾಟಕದ ಕಡೆ ಸರ್ಕಾರದ ನಿರ್ಲಕ್ಷ್ಯ

ಅಶೋಕ ಅವರು ಸರ್ಕಾರದ ಮೇಲೆಯೇ ತೀವ್ರ ಟೀಕೆ ನಡೆಸಿದರು.
ಪ್ರತಿ ಬಾರಿ ಬರುವ ಭರವಸೆಗಳು ಕಾಗದದಲ್ಲೇ ಉಳಿದಿವೆ. ಕಳೆದ ಅಧಿವೇಶನದ ಕೊನೆಯ ಎರಡು ದಿನ ಮಾತ್ರ ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆಗೆ ನೀಡಿದ್ದು, ಅದರಲ್ಲಿ ಸಿಎಂ ಸಿದ್ದರಾಮಯ್ಯ ಕೊಟ್ಟ ಭರವಸೆಗಳು ಇಂದಿಗೂ ಈಡೇರಿಲ್ಲ.” ಎಂದರು.

🔶 ರೈತರ ಸಂಕಷ್ಟತುಂಗಭದ್ರಾ ಗೇಟ್ ದುರಸ್ತಿ ಬಿಲ್ ಬಾಕಿ

12 ಕೋಟಿ ರೂ. ಮೌಲ್ಯದ ತುಂಗಭದ್ರಾ ಜಲಾಶಯ ಗೇಟ್ ದುರಸ್ತಿ ಬಿಲ್‌ ಪಾವತಿಯಾಗದ ಕಾರಣ ಗುತ್ತಿಗೆದಾರರು ಕೆಲಸ ಸ್ಥಗಿತಗೊಳಿಸಿದ್ದು, ಇದು ರೈತರ ಬದುಕಿನ ಮೇಲೇ ನೇರ ಹೊಡೆತ ಎಂದು ಅಶೋಕ ಹೇಳಿದರು.
ಎರಡನೇ ಬೆಳೆ ನೀರಿಗಾಗಿ ರೈತರು ಸಂಕಷ್ಟದಲ್ಲಿ. ಎಕರೆಗೆ ₹25,000 ಪರಿಹಾರ ಘೋಷಿಸಬೇಕಿದೆ. ಮುಂದಿನ ವರ್ಷಕ್ಕೂ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ.” ಎಂದು ಆಕ್ರೋಶ ವ್ಯಕ್ತಪಡಿಸಿದರು.

🔶 ಕಬ್ಬುಮೆಕ್ಕೆಜೋಳ ಬೆಳೆಗಾರರ ಸಮಸ್ಯೆ ಬಗೆಹರಿಸದ ಸರ್ಕಾರ

ಕಬ್ಬಿನ ಬೆಲೆ, ಮೆಕ್ಕೆಜೋಳ ಖರೀದಿ ಕೇಂದ್ರಗಳ ಬಗ್ಗೆ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಹೇಳಿದ್ದಾರೆ.
ಉತ್ತರ ಕರ್ನಾಟಕದ ರೈತರನ್ನು ಸರ್ಕಾರ ಸಂಪೂರ್ಣ ಮರೆತಿದೆ.”

🔶 ಬಿಪಿಎಲ್ ಕಾರ್ಡ್ ರದ್ದತಿ – ‘ಗ್ಯಾರಂಟಿಗಳ ತಪ್ಪಿಸಿಕೊಂಡಲು ಸರ್ಕಾರದ ಆಟ

ಬಡವರ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡುತ್ತಿರುವುದು ಗ್ಯಾರಂಟಿ ಯೋಜನೆಗಳ ಹೊರೆ ತಪ್ಪಿಸಿಕೊಳ್ಳಲು ಸರ್ಕಾರದ ತಂತ್ರ ಎಂದು ಅಶೋಕ ಆರೋಪಿಸಿದರು.

🔶 ಕಾನೂನು ಸುವ್ಯವಸ್ಥೆಯ ಗಂಭೀರ ಕುಸಿತ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯ ಬಗ್ಗೆ ಅವರು ಗಂಭೀರವಾಗಿ ಎಚ್ಚರಿಕೆ ನೀಡಿದರು.
ಜೈಲಿನೊಳಗೆ ಮದ್ಯ ತಯಾರಿ, ಭಯೋತ್ಪಾದಕ ಕೈದಿಗಳ ಕೈಗೆ ಫೋನ್, ರಾಜಧಾನಿಯಲ್ಲಿ ಹಗಲ ಹೊತ್ತಿನಲ್ಲೇ ₹7 ಕೋಟಿ ದರೋಡೆಇವು ಸರ್ಕಾರದ ವೈಫಲ್ಯ.”

🔶 ಶಾಲೆಗಳ ದುಸ್ಥಿತಿ, ಗುಂಡಿ ರಸ್ತೆಪ್ರಾಣಾಪಾಯ, ಪೊಲೀಸ್ ವರ್ಗಾವಣೆ ದಂಧೆ

ಈ ಎಲ್ಲಾ ವಿಷಯಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸಿ ಸರ್ಕಾರವನ್ನು ಪ್ರಶ್ನಿಸಲಾಗುವುದು ಎಂದು ಹೇಳಿದರು.

🔥 ಸಿಎಂ ವಿಷಯದಲ್ಲಿ ತೀವ್ರ ವಾಗ್ವಾದ – ‘ಯಥಾರ್ಥ ಸಿಎಂ ಯಾರು?’

ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಒಡಕು ಮತ್ತೆ ತೆರೆ ಮೇಲೆ ಬಿದ್ದಿದೆ.
ಸರ್ಕಾರದಲ್ಲಿ ಯಾರು ಸಿಎಂ ಎಂಬುದೇ ಸ್ಪಷ್ಟವಾಗಿಲ್ಲ. ಇಬ್ಬರು ನಾಯಕರು ಪರಸ್ಪರ ಆರೋಪ ಮಾಡಿಕೊಳ್ಳುವುದರಲ್ಲಿ ತೊಡಗಿದ್ದಾರೆ. ಅಧಿಕಾರ ಹಂಚಿಕೆ ಬಗ್ಗೆ ಡಿಕೆಶಿ ಬಹಿರಂಗವಾಗಿ ಮಾತನಾಡುತ್ತಾರೆ, ಹೈಕಮಾಂಡ್ ಮೌನ. ಇದರಿಂದ ಅಧಿಕಾರಿಗಳು ಕೆಲಸ ಮಾಡುವುದಿಲ್ಲ.” ಎಂದು ಅಶೋಕ ಗುದ್ದಿದರು.

ಪ್ರತಿ ಬ್ರೇಕ್‌ಫಾಸ್ಟ್‌ ಮೀಟಿಂಗ್ ಜಗಳವಾಗುತ್ತಲೇ ಮುಗಿಯುತ್ತದೆ. ಜನರ ಸಮಸ್ಯೆಯ ಚರ್ಚೆ ಎಲ್ಲಿದೆ?” ಎಂದು ಪ್ರಶ್ನಿಸಿದರು. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ವಿದೇಶದಲ್ಲಿದ್ದಾರೆ ಎಂದು ವ್ಯಂಗ್ಯವಾಡಿದರು.

Share This Article
Leave a Comment