ಭಾರತದಿಂದ ಭೂತಾನ್ ಅಭಿವೃದ್ಧಿಗೆ ₹10,000 ಕೋಟಿ ನೆರವು – ಎರಡು ರಾಷ್ಟ್ರಗಳ ಬಾಂಧವ್ಯ ಮತ್ತಷ್ಟು ಬಲಪಡಿಸಿದ ಮೋದಿ!

1 Min Read
1 Min Read

ಭೂತಾನ್, ನ.11:

ಭಾರತ ಮತ್ತು ಭೂತಾನ್ ರಾಷ್ಟ್ರಗಳ ನಡುವಿನ ಸ್ನೇಹ ಬಾಂಧವ್ಯ ಮತ್ತಷ್ಟು ಗಾಢವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭೂತಾನ್‌ನ ಐದು ವರ್ಷಗಳ ಅಭಿವೃದ್ಧಿ ಯೋಜನೆಗೆ ₹10,000 ಕೋಟಿ ರೂಪಾಯಿ ಆರ್ಥಿಕ ನೆರವನ್ನು ಘೋಷಿಸಿದ್ದಾರೆ.

ಈ ಸಂದರ್ಭ ಭೂತಾನ್‌ನ ರಾಜ ಜಿಗ್ಮೆ ಖೆಸರ್ ವಾಂಗ್ಚುಕ್, ಭಾರತದ ಸಹಕಾರಕ್ಕೆ ಧನ್ಯವಾದಗಳನ್ನು ಸಲ್ಲಿಸಿ,

“ನಾವು ಭಾರತವನ್ನು ಹೃತ್ಪೂರ್ವಕವಾಗಿ ಪ್ರೀತಿಸುತ್ತೇವೆ. ಭಾರತ ಯಾವಾಗಲೂ ಭೂತಾನ್ ಜೊತೆಗೆ ನಿಂತಿದೆ, ಹಾಗೆಯೇ ಭೂತಾನೂ ಭಾರತದೊಂದಿಗೆ ನಿಂತಿದೆ,”
ಎಂದು ಹೇಳಿದರು.

ಪ್ರಧಾನಮಂತ್ರಿ ಮೋದಿ ತಮ್ಮ ಭಾಷಣದಲ್ಲಿ, ಭೂತಾನ್‌ನ ರಾಜನೇ “Gross National Happiness Index” ಎಂಬ ಪರಿಕಲ್ಪನೆಯನ್ನು ಪ್ರಾರಂಭಿಸಿದವರು ಎಂದು ಪ್ರಶಂಸಿಸಿ,

“ರಾಷ್ಟ್ರದ ಬೆಳವಣಿಗೆಯನ್ನು ಕೇವಲ GDP ಆಧಾರದಿಂದ ಅಳೆಯಲಾಗುವುದಿಲ್ಲ; ಸುಖ ಮತ್ತು ಸಾಸ್ಥ್ಯತೆಯೂ ಸಮಾನವಾಗಿ ಮುಖ್ಯ,”
ಎಂದು ಹೇಳಿದರು.

ಭಾರತ ಸರ್ಕಾರವು ಜೊತೆಗೆ ವರಣಾಸಿಯಲ್ಲಿ ಭೂತಾನ್ ರಾಜಮನೆತನದ ದೇವಾಲಯ ಹಾಗೂ ಅತಿಥಿಗೃಹ ನಿರ್ಮಾಣಕ್ಕಾಗಿ ಭೂಮಿ ನೀಡಲು ಸಹ ಒಪ್ಪಿಗೆ ಸೂಚಿಸಿದೆ.

ಈ ಆರ್ಥಿಕ ನೆರವು ಮತ್ತು ಹೊಸ ಯೋಜನೆಗಳು ಭಾರತ-ಭೂತಾನ್ ಸಹಕಾರವನ್ನು ಹೊಸ ಎತ್ತರಕ್ಕೆ ತಂದು ನಿಲ್ಲಿಸಲಿದೆ ಎಂದು ರಾಜತಾಂತ್ರಿಕ ವಲಯಗಳು ವಿಶ್ಲೇಷಿಸುತ್ತಿವೆ.

Share This Article
Leave a Comment