ಏಷ್ಯಾದ ಬಹುತೇಕ ಷೇರುಪೇಟೆಗಳು ಏರಿಕೆ; ಯುರೋಪ್ ಮಾರುಕಟ್ಟೆಯಲ್ಲಿ ಮಿಶ್ರ ವಹಿವಾಟು
ಜಾಗತಿಕ ಷೇರುಪೇಟೆಗಳಲ್ಲಿ ಇಂದು ಏಷ್ಯಾದ ಬಹುತೇಕ ಪ್ರಮುಖ ಸೂಚ್ಯಂಕಗಳು ಏರಿಕೆಯೊಂದಿಗೆ ವಹಿವಾಟು ಅಂತ್ಯಗೊಳಿಸಿವೆ. ಹೂಡಿಕೆದಾರರ ಖರೀದಿ ಆಸಕ್ತಿ ಹೆಚ್ಚಾದ ಹಿನ್ನೆಲೆಯಲ್ಲಿ ಹಲವು ಮಾರುಕಟ್ಟೆಗಳು ಲಾಭ ದಾಖಲಿಸಿವೆ.
ಹಾಂಗ್ಕಾಂಗ್ನ ಹ್ಯಾಂಗ್ಸೆಂಗ್ ಸೂಚ್ಯಂಕ ಶೇ.1.6ರಷ್ಟು ಏರಿಕೆ ಕಂಡರೆ, ಚೀನಾದ ಶಾಂಘೈ ಕಾಂಪೋಸಿಟ್ ಸೂಚ್ಯಂಕ ಸುಮಾರು ಶೇ.1.2ರಷ್ಟು ಏರಿಕೆಯಾಯಿತು. ತೈವಾನ್ನ ಟೈಎಕ್ಸ್ ಶೇ.1ರಷ್ಟು ಜಿಗಿತ ದಾಖಲಿಸಿತು. ಸಿಂಗಾಪುರದ ಸ್ಟ್ರೇಟ್ ಟೈಮ್ಸ್ ಸೂಚ್ಯಂಕ ಶೇ.0.3ಕ್ಕೂ ಹೆಚ್ಚು ಏರಿಕೆಯಾದರೆ, ಜಪಾನ್ನ ನಿಕ್ಕಿ-225 ಸೂಚ್ಯಂಕ ಶೇ.0.1ಕ್ಕೂ ಅಧಿಕ ಲಾಭದೊಂದಿಗೆ ವಹಿವಾಟು ಮುಗಿಸಿತು.
ಆದರೆ, ದಕ್ಷಿಣ ಕೊರಿಯಾದ ಕೋಸ್ಪಿ ಸೂಚ್ಯಂಕ ಶೇ.0.2ರಷ್ಟು ಇಳಿಕೆ ಕಂಡಿತು.
ಇನ್ನೊಂದೆಡೆ, ಯುರೋಪಿನ ಪ್ರಮುಖ ಷೇರುಪೇಟೆಗಳಲ್ಲಿ ಮಿಶ್ರ ಪ್ರವೃತ್ತಿ ಕಂಡುಬಂದಿದೆ. ಫ್ರಾನ್ಸ್ನ CAC 40 ಸೂಚ್ಯಂಕ ಶೇ.0.3ರಷ್ಟು ಕುಸಿದರೆ, ಬ್ರಿಟನ್ನ FTSE 100 ಶೇ.0.2ಕ್ಕೂ ಹೆಚ್ಚು ಇಳಿಕೆಯಲ್ಲಿ ವಹಿವಾಟು ನಡೆಸಿತು. ಇದೇ ವೇಳೆ, ಜರ್ಮನಿಯ DAX ಸೂಚ್ಯಂಕ ಶೇ.0.1ರಷ್ಟು ಏರಿಕೆ ದಾಖಲಿಸಿತು.


