ಪದ್ಮಶ್ರೀ ಪುರಸ್ಕೃತ ಗುರು ಸಂಗ್ಯುಸಾಂಗ್ ಪೊಂಗೆನರ್‌ಗೆ ನಾಗಾಲ್ಯಾಂಡ್‌ನಲ್ಲಿ ಅದ್ದೂರಿ ಸ್ವಾಗತ

1 Min Read
1 Min Read

ಡಿಮಾಪುರ: ನಾಗಾಲ್ಯಾಂಡ್‌ನ ಪದ್ಮಶ್ರೀ ಪುರಸ್ಕೃತ ಜಾನಪದ ಕಲಾವಿದ ಗುರು ಸಂಗ್ಯುಸಾಂಗ್ ಪೊಂಗೆನರ್ ಅವರಿಗೆ ನವದೆಹಲಿಯಿಂದ ಮರಳಿದ ಬಳಿಕ ಡಿಮಾಪುರ ವಿಮಾನ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ ಕೋರಲಾಯಿತು.

81 ವರ್ಷದ ಗುರು ಸಂಗ್ಯುಸಾಂಗ್ ಪೊಂಗೆನರ್ ಅವರು ಮೊಕೊಕ್‌ಚುಂಗ್ ಜಿಲ್ಲೆಯ ಉಂಗ್ಮಾ ಗ್ರಾಮದ ನಿವಾಸಿಯಾಗಿದ್ದು, ಆಓ ನಾಗಾ ಸಮುದಾಯದ ಜಾನಪದ ಕಲೆ, ಸಾಂಪ್ರದಾಯಿಕ ಹಾಡು, ನೃತ್ಯ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಿ ಬೆಳೆಸಿದ ಜೀವಮಾನ ಸಾಧನೆಗಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಜೂನ್ 23ರಂದು ರಾಷ್ಟ್ರಪತಿ ಭವನದಲ್ಲಿ ನಡೆದ ನಾಗರಿಕ ಸನ್ಮಾನ ಸಮಾರಂಭದಲ್ಲಿ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಗುರು ಸಂಗ್ಯುಸಾಂಗ್ ಪೊಂಗೆನರ್, ಈ ಅತ್ಯುನ್ನತ ಗೌರವಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಿದರು. ಜೊತೆಗೆ ಕೇಂದ್ರ ಹಾಗೂ ನಾಗಾಲ್ಯಾಂಡ್ ರಾಜ್ಯ ಸರ್ಕಾರ, ಹಾಗು ಕಲೆ ಮತ್ತು ಸಂಸ್ಕೃತಿ ಇಲಾಖೆಯ ಬೆಂಬಲಕ್ಕೆ ಧನ್ಯವಾದಗಳನ್ನು ಅರ್ಪಿಸಿದರು.

Share This Article
Leave a Comment