ಬಿಗ್ ಬಾಸ್ ವಿಜೇತ ನಟರಾಜ್ ಗಿಲ್ಲಿಗೆ ಗೃಹ ಸಚಿವ ಡಾ. ಪರಮೇಶ್ವರ ಅಭಿನಂದನೆ

1 Min Read
1 Min Read

ಬಿಗ್ ಬಾಸ್ ಕನ್ನಡದ ಇತ್ತೀಚಿನ ಸೀಸನ್ ವಿಜೇತ ನಟ ನಟರಾಜ್ ಗಿಲ್ಲಿ ಅವರನ್ನು ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಆಹ್ವಾನಿಸಿ, ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಭೇಟಿಯಾಗಿಸಿದರು.

ಈ ಸಂದರ್ಭದಲ್ಲಿ ಬಿಗ್ ಬಾಸ್ ವೇದಿಕೆಯಲ್ಲಿ ಸಾಧಿಸಿದ ಯಶಸ್ಸಿಗೆ ನಟರಾಜ್ ಗಿಲ್ಲಿಯನ್ನು ಅಭಿನಂದಿಸಿದ ಗೃಹ ಸಚಿವರು, ಅವರ ಮುಂದಿನ ಕಲಾ ಬದುಕಿಗೆ ಶುಭಾಶಯಗಳನ್ನು ಕೋರಿದರು. ಸಾಮಾನ್ಯ ಹಿನ್ನೆಲೆಯಿಂದ ಬಂದು ಜನಮನ್ನಣೆ ಗಳಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಾಂಸ್ಕೃತಿಕ ಹಾಗೂ ಮನರಂಜನಾ ಕ್ಷೇತ್ರದಲ್ಲಿ ಯುವ ಪ್ರತಿಭೆಗಳು ಮುಂದಕ್ಕೆ ಬರಬೇಕು ಎಂಬ ಆಶಯವನ್ನು ಈ ವೇಳೆ ಡಾ. ಪರಮೇಶ್ವರ ವ್ಯಕ್ತಪಡಿಸಿದರು. ಈ ಭೇಟಿಯ ಕ್ಷಣಗಳು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿವೆ.

Share This Article
Leave a Comment