ಕುಣಿಗಲ್ ತಾಲೂಕಿನಲ್ಲಿ ಖಾಲಿ ಇರುವ 8 ಅಂಗನವಾಡಿ ಕಾರ್ಯಕರ್ತೆ ಮತ್ತು 68 ಸಹಾಯಕಿ ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನ

2 Min Read
2 Min Read

ಕುಣಿಗಲ್ :
ಕುಣಿಗಲ್ ತಾಲೂಕಿನ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿರುವ ವಿವಿಧ ಅಂಗನವಾಡಿ ಕೇಂದ್ರಗಳಲ್ಲಿ ‘ಕಾರ್ಯಕರ್ತೆ’ ಹಾಗೂ ‘ಸಹಾಯಕಿ’ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಮಹಿಳೆಯರ ಸ್ವಾವಲಂಬನೆಗೆ ಸರ್ಕಾರ ಕೈಗೊಂಡಿರುವ ಈ ನೇಮಕಾತಿ ಪ್ರಕ್ರಿಯೆ ಸ್ಥಳೀಯ ಮಹಿಳೆಯರಿಗೆ ಮಹತ್ತರ ಅವಕಾಶ ಒದಗಿಸಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಾನ್ಯ ಉಪ ನಿರ್ದೇಶಕರು ನೀಡಿರುವ ದಿನಾಂಕ 03-12-2025ರ ಸೂಚನೆಯ ಆಧಾರದಲ್ಲಿ, ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುಗೊಂಡಿದ್ದು, ಆಸಕ್ತ ಹಾಗೂ ಅರ್ಹತಾ ಮಾನದಂಡಗಳನ್ನು ಪೂರೈಸುವ ಮಹಿಳೆಯರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಲಿಂಗತ್ವ ಅಲ್ಪಸಂಖ್ಯಾತ ಮಹಿಳೆಯರೂ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ಕುಣಿಗಲ್ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕೆ. ಕಮಲಮ್ಮ ಅವರು ತಿಳಿಸಿದ್ದಾರೆ.

ಒಟ್ಟು 68 ಹುದ್ದೆಗಳ ನೇಮಕಾತಿ

ಈ ನೇಮಕಾತಿ ಪ್ರಕ್ರಿಯೆಯಲ್ಲಿ ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 68 ಖಾಲಿ ಹುದ್ದೆಗಳು ಲಭ್ಯವಿದ್ದು, ಗೌರವ ಧನದ ಆಧಾರದ ಮೇಲೆ ಕಾರ್ಯನಿರ್ವಹಿಸಲು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸಬಹುದಾದವರು

  • ವಯಸ್ಸು: ಅರ್ಜಿದಾರರು 19 ವರ್ಷ ಪೂರೈಸಿರಬೇಕು; ಗರಿಷ್ಠ 35 ವರ್ಷ.
  • ವಿಕಲಚೇತನರಿಗೆ: ವಯೋಮಿತಿಯಲ್ಲಿ 10 ವರ್ಷದ ಸಡಿಲಿಕೆ.
  • ವಿದ್ಯಾರ್ಹತೆ:
    • ಅಂಗನವಾಡಿ ಕಾರ್ಯಕರ್ತೆ: ಕನಿಷ್ಠ ಪಿಯುಸಿ ತೇರ್ಗಡೆ.
    • ಅಂಗನವಾಡಿ ಸಹಾಯಕಿ: SSLC ಓದಿ, ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಅಧ್ಯಯನ ಮಾಡಿರಬೇಕು.
  • ಸ್ಥಳೀಯರು ಮಾತ್ರ: ಕಳೆದ ಮೂರು ವರ್ಷಗಳಿಂದ ಕುಣಿಗಲ್ ತಾಲೂಕಿನಲ್ಲೇ ವಾಸಸ್ಥಳ ಇರುವ ಸ್ಥಳೀಯ ಮಹಿಳೆಯರಿಗೆ ಆದ್ಯತೆ.

ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು

  1. ಜನನ ಪ್ರಮಾಣ ಪತ್ರ
  2. ಮಾರ್ಕ್ಸ್ ಕಾರ್ಡ್‌ಗಳು
  3. ವಿದ್ಯಾರ್ಹತೆಯ ದೃಢೀಕೃತ ಪ್ರಮಾಣ ಪತ್ರ
  4. ಮೂರು ವರ್ಷದೊಳಗಿನ ವಾಸಸ್ಥಳ ದೃಢೀಕರಣ ಪತ್ರ
  5. ರೇಷನ್ ಕಾರ್ಡ್
  6. ಜಾತಿ & ಆದಾಯ ಪ್ರಮಾಣ ಪತ್ರ

ವಿಶೇಷ ಸೂಚನೆ

ಅರ್ಜಿಯನ್ನು ಆನ್ಲೈನ್‌ನಲ್ಲಿ ಸಲ್ಲಿಸುವ ಮೊದಲು ಅರ್ಜಿಯ ಮಾರ್ಗಸೂಚಿಗಳನ್ನು ಡೌನ್‌ಲೋಡ್ ಮಾಡಿ, ಸಂಪೂರ್ಣವಾಗಿ ಓದಿ, ಅರ್ಥೈಸಿ ನಂತರವೇ ಅರ್ಜಿ ಸಲ್ಲಿಸುವಂತೆ ಇಲಾಖೆ ವಿನಂತಿಸಿದೆ.

   https://karnemakaone.kar.nic.in/abcd/

ಹೆಚ್ಚಿನ ಮಾಹಿತಿಗಾಗಿ, ಕುಣಿಗಲ್ ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಕಚೇರಿಯನ್ನು ಕಚೇರಿ ಸಮಯದಲ್ಲಿ ಸಂಪರ್ಕಿಸಬಹುದು ಎಂದು ಮಾನ್ಯ ಯೋಜನಾಧಿಕಾರಿ ಕೆ. ಕಮಲಮ್ಮವರು ತಿಳಿಸಿದರು.

Share This Article
Leave a Comment