ಟ್ರಂಪ್ ಭಾಷಣದ ತಪ್ಪು ಸಂಪಾದನೆ: ಬಿಬಿಸಿಯಿಂದ ಕ್ಷಮೆ — ಆದರೆ ಪರಿಹಾರ ಬೇಡಿಕೆಗೆ ನಿಷೇಧ!

1 Min Read
1 Min Read

ಲಂಡನ್:
ಬಿಬಿಸಿ ಸಂಸ್ಥೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಪನೋರಮಾ ಡಾಕ್ಯುಮೆಂಟರಿಯಲ್ಲಿ ಅವರ ಭಾಷಣವನ್ನು ತಪ್ಪಾಗಿ ಎಡಿಟ್ ಮಾಡಿದಕ್ಕೆ ಅಧಿಕೃತ ಕ್ಷಮೆಯಾಚನೆ ನೀಡಿದೆ. ಈ ವಿವಾದದ ಪರಿಣಾಮವಾಗಿ ಬಿಬಿಸಿಯ ನಿರ್ದೇಶಕ ಜನರಲ್ ಟಿಮ್ ಡೇವಿ ಹಾಗೂ ಬಿಬಿಸಿ ನ್ಯೂಸ್ ಮುಖ್ಯಸ್ಥೆ ಡೆಬೋರಾ ಟರ್ನೆಸ್ ರಾಜೀನಾಮೆ ನೀಡಿದ್ದರು.

ಆದರೆ, ಟ್ರಂಪ್ ಪರ ವಕೀಲರು ಕೇಳಿದ್ದ 1 ಬಿಲಿಯನ್ ಡಾಲರ್ (ಸುಮಾರು ₹8,300 ಕೋಟಿ) ಪರಿಹಾರ ಬೇಡಿಕೆಯನ್ನು ಬಿಬಿಸಿ ಸ್ಪಷ್ಟವಾಗಿ ತಿರಸ್ಕರಿಸಿದೆ. ಟ್ರಂಪ್ ಕ್ಷಮೆಯಾಚನೆ, ಸಂಪೂರ್ಣ ಹಿಂಪಡೆಯುವುದು ಮತ್ತು ಪರಿಹಾರ ನೀಡದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಬೆದರಿಸಿದ್ದರು.

ಬಿಬಿಸಿ ಪ್ರಕಟಿಸಿದ ಹೇಳಿಕೆಯಲ್ಲಿ,

“ಟ್ರಂಪ್ ಅವರ ಭಾಷಣದ ತಪ್ಪು ಎಡಿಟ್ ನಮ್ಮ ತಪ್ಪು. ಇದಕ್ಕಾಗಿ ವಿಷಾದಿಸುತ್ತೇವೆ. ಆದರೆ ಇದು ಮಾನಹಾನಿಗೆ ಕಾರಣವಾಗುತ್ತದೆ ಎಂಬ ಟ್ರಂಪ್ ಅವರ ಆರೋಪಕ್ಕೆ ಯಾವುದೇ ಕಾನೂನು ಆಧಾರವಿಲ್ಲ,”
ಎಂದು ತಿಳಿಸಿದೆ.

ಬಿಬಿಸಿ ಅಧ್ಯಕ್ಷ ಸಮೀರ್ ಶಾ ಅವರು ವೈಟ್ ಹೌಸ್‌ಗೆ ವೈಯಕ್ತಿಕ ಪತ್ರ ಬರೆದು ಟ್ರಂಪ್ ಅವರಿಗೆ ಕ್ಷಮೆಯಾಚಿಸಿದ್ದಾರೆ. ಜೊತೆಗೆ Trump: A Second Chance? ಎಂಬ ಪನೋರಮಾ ಕಂತನ್ನು ಮತ್ತೆ ಪ್ರಸಾರ ಮಾಡುವುದಿಲ್ಲ ಎಂದು ಸಂಸ್ಥೆ ಘೋಷಿಸಿದೆ.

ಈ ಬೆಳವಣಿಗೆಯ ನಂತರವೂ, ಬಿಬಿಸಿಗೆ ಕಾನೂನು ಹೋರಾಟದಲ್ಲಿ ಬಲವಾದ ನೆಲೆವಿದೆ ಎಂಬ ಅಭಿಪ್ರಾಯ ಕಾನೂನು ಸಲಹೆಗಾರರಿಂದ ವ್ಯಕ್ತವಾಗಿದೆ. ಈಗ ಟ್ರಂಪ್ ಮತ್ತೇನು ಕ್ರಮ ಕೈಗೊಳ್ಳುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

ಟ್ರಂಪ್ ಭಾಷಣದ ವೀಡಿಯೊವನ್ನು ತಪ್ಪಾಗಿ ಜೋಡಿಸಿದ್ದರಿಂದ ಬಿಬಿಸಿಯ ಉನ್ನತ ಅಧಿಕಾರಿಗಳ ರಾಜೀನಾಮೆ ಈಗಾಗಲೇ ಸಂಸ್ಥೆಗೂ ದೊಡ್ಡ ಹೊಡೆತ ನೀಡಿದೆ. ಈ ಘಟನೆಯು ಜಾಗತಿಕ ಮಾಧ್ಯಮ ಜಗತ್ತಿನಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

Share This Article
Leave a Comment