ಡೆಲ್ ಟೆಕ್ನಾಲಜೀಸ್ ಮತ್ತು ಯೂತ್ ಫಾರ್ ಸೇವಾ – ಸರ್ಕಾರಿ ಶಾಲೆಗಳಲ್ಲಿ ಸಿಎಸ್ಆರ್ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಿಗೆ ಹೊಸ ಉಜ್ವಲ ಭವಿಷ್ಯದ ದಾರಿ!

1 Min Read
1 Min Read

ಚಾಮರಾಜನಗರ, ನ.13:
ಡೆಲ್ ಟೆಕ್ನಾಲಜೀಸ್ (Dell Technologies) ಸಂಸ್ಥೆಯು ಯೂತ್ ಫಾರ್ ಸೇವಾ (Youth For Seva) ಸಂಘಟನೆಯೊಂದಿಗೆ ಕೈಜೋಡಿಸಿ ಸಾಮಾಜಿಕ ಹೊಣೆಗಾರಿಕೆಯ (CSR) ಭಾಗವಾಗಿ ಶೈಕ್ಷಣಿಕ ಬೆಂಬಲ ಕಾರ್ಯಕ್ರಮವನ್ನು ಆಯೋಜಿಸಿದೆ.

ಈ ಅಭಿಯಾನದ ಅಂಗವಾಗಿ, ಡೆಲ್ ಟೆಕ್ನಾಲಜೀಸ್‌ನ ಉದ್ಯೋಗಿಗಳಾದ ಶ್ರೀ ಪ್ರಶಾಂತ, ಶ್ರೀ ವಿನಯ್ ಕುಮಾರ್ ಎಲ್.ಜಿ, ಶ್ರೀ ಮಧುಸೂಧನ್ ರಾವ್ ಹಾಗೂ ಶ್ರೀ ಇಮ್ರಾನ್ ಪಾಷಾ ಅವರು ಚಾಮರಾಜನಗರ ಜಿಲ್ಲೆಯ ಕುಣಗಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಶಾಲೆ ಮತ್ತು ಬನ್ನಿಸರಿಗೆಯ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಭೇಟಿ ನೀಡಿದರು.

ಕಾರ್ಯಕ್ರಮದಲ್ಲಿ ಶಾಲಾ ನಿರ್ವಹಣಾ ಸಮಿತಿ (SDMC) ಸದಸ್ಯರು ಮತ್ತು ಶಿಕ್ಷಕರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಶಾಲಾ ಕಿಟ್‌ಗಳು – ಚೀಲ, ಪುಸ್ತಕಗಳು ಮತ್ತು ಅಗತ್ಯ ಶಿಕ್ಷಣ ಸಾಮಗ್ರಿಗಳು ವಿತರಿಸಲಾಯಿತು.

ಡೆಲ್ ಸಂಸ್ಥೆಯ ಪ್ರತಿನಿಧಿಗಳು, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶಿಕ್ಷಣದ ಪ್ರೋತ್ಸಾಹ ನೀಡುವುದು ಕಂಪನಿಯ ಸಾಮಾಜಿಕ ಹೊಣೆಗಾರಿಕೆಯ ಭಾಗವಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಿಂದ ಶಾಲಾ ವಿದ್ಯಾರ್ಥಿಗಳಲ್ಲಿ ಸಂತೋಷ ಹಾಗೂ ಹೊಸ ಉತ್ಸಾಹ ತುಂಬಿಕೊಂಡಿತು.

Share This Article
Leave a Comment