ಡ್ಯೂಡ್ ಮೇಲೆ ಇಳಯರಾಜ ದೃಷ್ಟಿ, ಪ್ರಕರಣ ದಾಖಲು

1 Min Read
1 Min Read

ಪ್ರದೀಪ್ ರಂಗನಾಥನ್ ನಟನೆಯ ಡ್ಯೂಡ್ ಚಿತ್ರದಲ್ಲಿ ಇಳಯರಾಜ ಅವರ ಹಾಡು ಬಳಸಿದ ಕಾರಣ, ಮದ್ರಾಸ್ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಲು ಅನುಮತಿ ಸಿಕ್ಕಿದೆ. 19ರಂದು ಮುಂದಿನ ವಿಚಾರಣೆ ನಡೆಯಲಿದೆ. 

ಇತ್ತೀಚಿಗೆ ಅಜಿತ್ (Ajith) ನಟನೆಯ ಗುಡ್ ಬ್ಯಾಡ್ ಅಗ್ಲಿ ಸಿನಿಮಾವನ್ನ ಕಾಪಿರೈಟ್ ಕಾರಣಕ್ಕೆ ನೆಟ್ ಫ್ಲಿಕ್ಸ್ ರಿಮೂವ್ ಮಾಡಿತ್ತು. ಇದೀಗ 100 ಕೋಟಿ ಗಳಿಸಿ ಅಬ್ಬರಿಸುತ್ತಿರೋ ಪ್ರದೀಪ್ ರಂಗನಾಥ್  ನಟನೆಯ ಡ್ಯೂಡ್ ಮೇಲೆ ಇಳಯರಾಜ ಕಣ್ಣು ಬಿದ್ದಿದೆ. ತಮ್ಮ ಅನುಮತಿಯಿಲ್ಲದೆ ತಮ್ಮ ಸಾಂಗ್ ಬಳಸಿಕೊಂಡಿರೋದಕ್ಕೆ ನೋಟಿಸ್ ಕೊಡಲು ಸಜ್ಜಾಗಿದ್ದಾರೆ ಎನ್ನಲಾಗ್ತಿದೆ. 

ಇನ್ನು ಪ್ರದೀಪ್ ಅಂತೂ ಗೆಲುವಿನ ಅಲೆಯಲ್ಲಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಿಟ್ ಕೊಡ್ತಿದ್ದಾರೆ. ಲವ್ ಟುಡೇ, ಡ್ರ್ಯಾಗನ್ ನಂತರ ಡ್ಯೂಡ್ ಮೂಲಕ ಸತತ ಮೂರನೇ ಬಾರಿಗೆ 100 ಕ್ರೋರ್ ಕ್ಲಬ್ ಸೇರಿದ್ದಾರೆ. ಮೂಲಕ ತಮಿಳು ಸಿನಿರಂಗದ ನೆಕ್ಸ್ಟ್ ಸೂಪರ್ ಸ್ಟಾರ್ ಆಗುವತ್ತ ಹೆಜ್ಜೆ ಇಟ್ಟಿದ್ದಾರೆ. 

ಪ್ರದೀಪ್ ರಂಗನಾಥನ್ ಅವರಡ್ಯೂಡ್ಚಿತ್ರದ ವಿರುದ್ಧ ಮೊಕದ್ದಮೆ ಹೂಡಲು ಸಂಗೀತ ಸಂಯೋಜಕ ಇಳಯರಾಜ ಅವರಿಗೆ ಮದ್ರಾಸ್ ಹೈಕೋರ್ಟ್ ಅನುಮತಿ ನೀಡಿದೆ. 

ಇಳಯರಾಜಾ ತಮ್ಮ ಹಾಡುಗಳನ್ನು ಅನುಮತಿಯಿಲ್ಲದೆ ಇತರ ಚಿತ್ರಗಳಲ್ಲಿ ಬಳಸಿಕೊಂಡಿದ್ದಕ್ಕಾಗಿ ಸೋನಿ ಮ್ಯೂಸಿಕ್, ಎಕೋ ರೆಕಾರ್ಡಿಂಗ್ ಮತ್ತು ಅಮೆರಿಕದ ಓರಿಯಂಟಲ್ ರೆಕಾರ್ಡ್ಸ್ ವಿರುದ್ಧ ಮದ್ರಾಸ್ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದಾರೆ. 

ಬುಧವಾರ ನ್ಯಾಯಾಧೀಶ ಎನ್. ಸೆಂಥಿಲ್‌ಕುಮಾರ್ ಅವರ ಮುಂದೆ ಪ್ರಕರಣ ವಿಚಾರಣೆಗೆ ಬಂದಾಗ, ಇಳಯರಾಜ ಪರವಾಗಿ ಹಿರಿಯ ವಕೀಲ ಎಸ್. ಪ್ರಭಾಕರನ್ ಹಾಜರಾಗಿ, ಸೋನಿ ಪ್ರಕರಣದಲ್ಲಿ ಇನ್ನೂ ಯಾವುದೇ ಪ್ರತಿಕ್ರಿಯೆಯನ್ನು ಸಲ್ಲಿಸಿಲ್ಲ ಮತ್ತು ಇತ್ತೀಚೆಗೆ ಬಿಡುಗಡೆಯಾದಡ್ಯೂಡ್ಚಿತ್ರದಲ್ಲಿ ಇಳಯರಾಜ ಅವರ ಎರಡು ಹಾಡುಗಳನ್ನು ಬಳಸಲಾಗಿದೆ ಎಂದು ಹೇಳಿದರು. 

ಸೋನಿ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ವಿಜಯ್ ನಾರಾಯಣನ್, ಸೋನಿ ಗಳಿಸಿದ ಆದಾಯವನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದರು. 

Share This Article
Leave a Comment