ನವದೆಹಲಿ: ಮಾರಿಷಸ್ನ ಅಟಲ್ ಬಿಹಾರಿ ವಾಜಪೇಯಿ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಸರ್ವಿಸ್ ಆ್ಯಂಡ್ ಇನ್ನೋವೇಶನ್ (AIPSI) ಸಂಸ್ಥೆಯ ಉಪಕುಲಪತಿ ಹುದ್ದೆಗೆ ಡಾ. ಭೂಮಾ ವಿ.ಜಿ. (IRPS ನಿವೃತ್ತ) ಅವರನ್ನು ಆಯ್ಕೆ ಮಾಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ತಿಳಿಸಿದೆ.
ಸಚಿವಾಲಯದ ಪ್ರಕಟಣೆಯ ಪ್ರಕಾರ, ಮಾರಿಷಸ್ನ ಹಿಂದಿನ ಸಿವಿಲ್ ಸರ್ವಿಸ್ ಕಾಲೇಜು ಆಗಿದ್ದ AIPSI ಸಂಸ್ಥೆಯನ್ನು 2025ರ ಮಾರ್ಚ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾರಿಷಸ್ ಪ್ರಧಾನಿ ನವೀನ್ಚಂದ್ರ ರಾಮಗೂಲಂ ಅವರು ಜಂಟಿಯಾಗಿ ಉದ್ಘಾಟಿಸಿದ್ದರು.
ಆಫ್ರಿಕಾ ಪ್ರದೇಶದ ಪ್ರಮುಖ ತರಬೇತಿ ಸಂಸ್ಥೆಯಾಗಿ AIPSI
AIPSI ಅನ್ನು ಆಫ್ರಿಕಾ ಪ್ರದೇಶದ ಪ್ರಮುಖ ತರಬೇತಿ ಸಂಸ್ಥೆ ಹಾಗೂ ಶ್ರೇಷ್ಠತಾ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಉದ್ದೇಶ ಹೊಂದಲಾಗಿದೆ. ಮುಂದಿನ ದಿನಗಳಲ್ಲಿ ಸಂಸ್ಥೆಯು ವಿವಿಧ ಶೈಕ್ಷಣಿಕ ಹಾಗೂ ತರಬೇತಿ ಕಾರ್ಯಕ್ರಮಗಳಿಗೆ ಪ್ರಮಾಣಪತ್ರ ಅಥವಾ ಪದವಿ ನೀಡುವ ಸಂಸ್ಥೆಯಾಗಿಯೂ ರೂಪುಗೊಳ್ಳಲಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.


