ಫಿಫಾ ವಿಶ್ವಕಪ್: ಬೆಲ್ಜಿಯಂ-ಸ್ಪೇನ್ ಕ್ವಾರ್ಟರ್‌ಫೈನಲ್‌ಗೆ; ರೊನಾಲ್ಡೊ ವಿಶ್ವಕಪ್‌ಗೆ ಗುಡ್‌ಬೈ

1 Min Read
1 Min Read

ಫಿಫಾ ವಿಶ್ವಕಪ್: ಬೆಲ್ಜಿಯಂ-ಸ್ಪೇನ್ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ; ರೊನಾಲ್ಡೊ ವಿಶ್ವಕಪ್‌ಗೆ ವಿದಾಯ ಘೋಷಣೆ

ಫಿಫಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ ಪ್ರೀ-ಕ್ವಾರ್ಟರ್‌ಫೈನಲ್ ಪಂದ್ಯಗಳಲ್ಲಿ ಬೆಲ್ಜಿಯಂ ಮತ್ತು ಸ್ಪೇನ್ ಜಯ ಸಾಧಿಸಿ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿವೆ.

ಸಿಯಾಟಲ್‌ನಲ್ಲಿ ನಡೆದ ಪಂದ್ಯದಲ್ಲಿ ಬೆಲ್ಜಿಯಂ ತಂಡ ಅಮೆರಿಕವನ್ನು 4-1 ಗೋಲುಗಳಿಂದ ಮಣಿಸಿ ಭರ್ಜರಿ ಗೆಲುವು ದಾಖಲಿಸಿತು. ಬೆಲ್ಜಿಯಂ ಪರ ಚಾರ್ಲ್ಸ್ ಡಿ ಕೆಟೆಲಾರೆ ಮತ್ತು ಹಾನ್ಸ್ ವನಾಕೆನ್ ಆರಂಭದಲ್ಲೇ ಗೋಲು ಬಾರಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಇಂಜುರಿ ಸಮಯದಲ್ಲಿ ರೊಮೆಲು ಲುಕಾಕು ಮತ್ತೊಂದು ಗೋಲು ದಾಖಲಿಸಿ ಗೆಲುವಿಗೆ ಮುದ್ರೆ ಒತ್ತಿದರು. ಅಮೆರಿಕ ಪರ ಮೊದಲಾರ್ಧದಲ್ಲಿ ಮಾಲಿಕ್ ಟಿಲ್‌ಮನ್ ಏಕೈಕ ಗೋಲು ಗಳಿಸಿದರು.

ಈ ಗೆಲುವಿನೊಂದಿಗೆ ಬೆಲ್ಜಿಯಂ, ಶುಕ್ರವಾರ ಲಾಸ್ ಏಂಜಲೀಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ಕ್ವಾರ್ಟರ್‌ಫೈನಲ್‌ನಲ್ಲಿ ಸ್ಪೇನ್ ತಂಡವನ್ನು ಎದುರಿಸಲಿದೆ.

ಇದಕ್ಕೂ ಮುನ್ನ ಡಲ್ಲಾಸ್‌ನಲ್ಲಿ ನಡೆದ ಮತ್ತೊಂದು ಪ್ರೀ-ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸ್ಪೇನ್ ತಂಡ ಪೋರ್ಚುಗಲ್ ವಿರುದ್ಧ 1-0 ಗೋಲುಗಳ ಅಂತರದ ರೋಚಕ ಗೆಲುವು ಸಾಧಿಸಿತು. ಪಂದ್ಯದ ದ್ವಿತೀಯಾರ್ಧದ ಹೆಚ್ಚುವರಿ ಸಮಯದ ಮೊದಲ ನಿಮಿಷದಲ್ಲೇ ಮಿಕೇಲ್ ಮೆರಿನೊ ನಿರ್ಣಾಯಕ ಗೋಲು ದಾಖಲಿಸಿ ಸ್ಪೇನ್‌ಗೆ ಜಯ ತಂದುಕೊಟ್ಟರು.

ಪೋರ್ಚುಗಲ್ ಟೂರ್ನಿಯಿಂದ ಹೊರಬಿದ್ದ ಬೆನ್ನಲ್ಲೇ ತಂಡದ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ, ಮುಂದಿನ ಫಿಫಾ ವಿಶ್ವಕಪ್‌ನಲ್ಲಿ ತಾನು ಭಾಗವಹಿಸುವುದಿಲ್ಲ ಎಂದು ಘೋಷಿಸಿದ್ದಾರೆ.

ಇದೇ ವೇಳೆ, 2010ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ವಿಶ್ವಕಪ್ ಗೆದ್ದ ಬಳಿಕ ಮೊದಲ ಬಾರಿಗೆ ಸ್ಪೇನ್ ತಂಡ ಕ್ವಾರ್ಟರ್‌ಫೈನಲ್ ಪ್ರವೇಶಿಸಿರುವುದು ವಿಶೇಷವಾಗಿದೆ.

ಇಂದು ನಡೆಯಲಿರುವ ಮತ್ತೊಂದು ಪ್ರೀ-ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡ ಈಜಿಪ್ಟ್ ವಿರುದ್ಧ ಸೆಣಸಲಿದೆ. ಈ ಪಂದ್ಯ ಭಾರತೀಯ ಕಾಲಮಾನ ರಾತ್ರಿ 9.30ಕ್ಕೆ ಆರಂಭವಾಗಲಿದೆ.

Share This Article