ಭಾರತ–ಜೆಕ್ ರಕ್ಷಣಾ ಸಹಕಾರ ವಿಸ್ತರಣೆಗೆ ಒಪ್ಪಿಗೆ: ರಾಜನಾಥ್ ಸಿಂಗ್–ಕಾರೇಲ್ ಹಾವ್ಲಿಚೆಕ್ ಭೇಟಿ

1 Min Read
1 Min Read

ನವದೆಹಲಿ: ಭಾರತದ ರಕ್ಷಣಾ ಕೈಗಾರಿಕಾ ಸಹಕಾರವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಜೆಕ್ ಗಣರಾಜ್ಯದ ಉಪಪ್ರಧಾನಿ ಹಾಗೂ ಕೈಗಾರಿಕೆ ಮತ್ತು ವ್ಯಾಪಾರ ಸಚಿವ ಕಾರೇಲ್ ಹಾವ್ಲಿಚೆಕ್ ಅವರನ್ನು ನವದೆಹಲಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು.

ಭೇಟಿಯ ವೇಳೆ ಭಾರತ ಮತ್ತು ಜೆಕ್ ಗಣರಾಜ್ಯದ ನಡುವಿನ ರಕ್ಷಣಾ ಕೈಗಾರಿಕಾ ಸಹಕಾರದ ವಿವಿಧ ಆಯಾಮಗಳನ್ನು ಇಬ್ಬರೂ ನಾಯಕರು ಪರಿಶೀಲಿಸಿದರು. ದ್ವಿಪಕ್ಷೀಯ ಸಹಭಾಗಿತ್ವವನ್ನು ಮತ್ತಷ್ಟು ವಿಸ್ತರಿಸುವ ಕುರಿತು ಚರ್ಚೆ ನಡೆಸಲಾಯಿತು.

ಭಾರತ–ಜೆಕ್ ಜಂಟಿ ರಕ್ಷಣಾ ಸಮಿತಿಯ ಚೌಕಟ್ಟಿನಡಿ ಸಹಕಾರವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಎರಡೂ ದೇಶಗಳು ಒಪ್ಪಿಕೊಂಡಿವೆ ಎಂದು ರಾಜನಾಥ್ ಸಿಂಗ್ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ದೇಶೀಯ ರಕ್ಷಣಾ ಉತ್ಪಾದನೆಗೆ ಉತ್ತೇಜನ ನೀಡುವ ಮತ್ತು ‘ಆತ್ಮನಿರ್ಭರ ಭಾರತ’ ಅಭಿಯಾನಕ್ಕೆ ಬಲ ತುಂಬುವ ಉದ್ದೇಶದಿಂದ ಉಭಯ ದೇಶಗಳ ನಡುವಿನ ಸಹಯೋಗವನ್ನು ಹೆಚ್ಚಿಸುವುದು ಸಭೆಯ ಪ್ರಮುಖ ಆಶಯವಾಗಿತ್ತು.

Share This Article