ಮುಂಬೈ: ಭಾರತಕ್ಕೆ ಮೊದಲ ಅಧಿಕೃತ ಪ್ರವಾಸ ಕೈಗೊಂಡಿರುವ ಜಪಾನ್ ರಕ್ಷಣಾ ಸಚಿವ ಶಿಂಜಿರೊ ಕೊಯಿಜುಮಿ ಅವರು ನಿನ್ನೆ ಮುಂಬೈನಲ್ಲಿರುವ ಪಶ್ಚಿಮ ನೌಕಾ ಕಮಾಂಡ್‌ಗೆ ಭೇಟಿ ನೀಡಿದರು.
ಭೇಟಿಯ ಸಂದರ್ಭದಲ್ಲಿ ಅವರು ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಹಾಗೂ ಪಶ್ಚಿಮ ನೌಕಾ ಕಮಾಂಡ್‌ನ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ವೈಸ್ ಅಡ್ಮಿರಲ್ ಸಂಜಯ್ ವಾತ್ಸಾಯನ್ ಅವರೊಂದಿಗೆ ಮಹತ್ವದ ಚರ್ಚೆ ನಡೆಸಿದರು.
ಭಾರತೀಯ ನೌಕಾಪಡೆಯ ಸಾಮರ್ಥ್ಯದ ಮಾಹಿತಿ
ಕೊಯಿಜುಮಿ ಅವರಿಗೆ ಭಾರತೀಯ ನೌಕಾಪಡೆಯ ಪಾತ್ರ, ಜವಾಬ್ದಾರಿಗಳು ಹಾಗೂ ಕಾರ್ಯಾಚರಣಾ ಸಾಮರ್ಥ್ಯಗಳ ಕುರಿತು ವಿವರವಾದ ಮಾಹಿತಿ ನೀಡಲಾಯಿತು.
ಬಳಿಕ ಜಪಾನ್ ರಕ್ಷಣಾ ಸಚಿವರು ಗೌರವ ವಂದನೆ ಸ್ವೀಕರಿಸಿದರು. ಅವರು ಗೌರವ ಸ್ತಂಭದಲ್ಲಿ ಪುಷ್ಪಗುಚ್ಛ ಅರ್ಪಿಸಿ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದರು.
ಸ್ವದೇಶಿ ಯುದ್ಧನೌಕೆ INS ಚೆನ್ನೈ ವೀಕ್ಷಣೆ
ಭೇಟಿಯ ವೇಳೆ ಕೊಯಿಜುಮಿ ಅವರು ಭಾರತದ ಸ್ವದೇಶಿ ಯುದ್ಧನೌಕೆ INS ಚೆನ್ನೈಯನ್ನೂ ವೀಕ್ಷಿಸಿದರು.
ಭಾರತ–ಜಪಾನ್ ನಡುವಿನ ರಕ್ಷಣಾ ಸಹಕಾರ ಮತ್ತಷ್ಟು ಬಲಗೊಳ್ಳುತ್ತಿರುವ ಸಂದರ್ಭದಲ್ಲಿ ಜಪಾನ್ ರಕ್ಷಣಾ ಸಚಿವರ ಈ ಭೇಟಿ ಮಹತ್ವ ಪಡೆದುಕೊಂಡಿದೆ.


