ನವದೆಹಲಿ: 80ನೇ ಸ್ವಾತಂತ್ರ್ಯೋತ್ಸವದ ಮುನ್ನಾದಿನವಾದ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೇಶವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.
ರಾಷ್ಟ್ರಪತಿಯವರ ಭಾಷಣ ಇಂದು ಸಂಜೆ 7 ಗಂಟೆಗೆ ಆಕಾಶವಾಣಿಯ (ಆಲ್ ಇಂಡಿಯಾ ರೇಡಿಯೋ) ರಾಷ್ಟ್ರೀಯ ಜಾಲದಲ್ಲಿ ಪ್ರಸಾರವಾಗಲಿದೆ. ದೂರದರ್ಶನದ ಎಲ್ಲಾ ವಾಹಿನಿಗಳಲ್ಲೂ ಮೊದಲು ಹಿಂದಿ ಭಾಷೆಯಲ್ಲಿ ಭಾಷಣ ಪ್ರಸಾರವಾಗಲಿದ್ದು, ಬಳಿಕ ಇಂಗ್ಲಿಷ್ ಆವೃತ್ತಿ ಪ್ರಸಾರವಾಗಲಿದೆ.
ದೂರದರ್ಶನದಲ್ಲಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳ ಪ್ರಸಾರದ ನಂತರ, ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ರಾಷ್ಟ್ರಪತಿಯವರ ಭಾಷಣವನ್ನು ದೂರದರ್ಶನದ ಪ್ರಾದೇಶಿಕ ವಾಹಿನಿಗಳಲ್ಲಿ ಪ್ರಸಾರ ಮಾಡಲಾಗುತ್ತದೆ.
ಆಕಾಶವಾಣಿಯು ರಾಷ್ಟ್ರಪತಿಯವರ ಭಾಷಣದ ಪ್ರಾದೇಶಿಕ ಭಾಷಾ ಆವೃತ್ತಿಗಳನ್ನು ರಾತ್ರಿ 9:30ಕ್ಕೆ ಆಯಾ ಪ್ರಾದೇಶಿಕ ಜಾಲಗಳಲ್ಲಿ ಪ್ರಸಾರ ಮಾಡಲಿದೆ.
80ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ರಾಷ್ಟ್ರಪತಿಯವರ ಭಾಷಣದತ್ತ ದೇಶದ ಜನರ ಗಮನ ನೆಟ್ಟಿದೆ.


