ಸೆನ್ಸೆಕ್ಸ್‌ 715 ಅಂಕ ಕುಸಿತ, ನಿಫ್ಟಿ 24 ಸಾವಿರಕ್ಕಿಂತ ಕೆಳಗೆ; ಹೂಡಿಕೆದಾರರಿಗೆ ಭಾರಿ ನಷ್ಟ

0 Min Read
0 Min Read

ಜಾಗತಿಕ ಭೌಗೋಳಿಕ ಉದ್ವಿಗ್ನತೆ (Geopolitical Tensions) ಹಾಗೂ ಕಚ್ಚಾ ತೈಲದ ಬೆಲೆ ಏರಿಕೆ ನಡುವೆಯೇ ದೇಶೀಯ ಷೇರುಪೇಟೆಗಳು ಗುರುವಾರ ತೀವ್ರ ಕುಸಿತ ಕಂಡಿವೆ. ಪ್ರಮುಖ ಸೂಚ್ಯಂಕಗಳಾದ ಬಿಎಸ್‌ಇ ಸೆನ್ಸೆಕ್ಸ್ ಮತ್ತು ಎನ್‌ಎಸ್‌ಇ ನಿಫ್ಟಿ ಸುಮಾರು ಶೇ.1ರಷ್ಟು ಇಳಿಕೆ ದಾಖಲಿಸಿವೆ.

ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್ 715 ಅಂಕಗಳ ಕುಸಿತದೊಂದಿಗೆ 76,755 ಅಂಕಗಳಿಗೆ ತಲುಪಿದರೆ, ನಿಫ್ಟಿ 191 ಅಂಕಗಳ ಇಳಿಕೆಯಿಂದ 23,996 ಅಂಕಗಳಲ್ಲಿ ವಹಿವಾಟು ಮುಗಿಸಿತು.

ಜಾಗತಿಕ ಮಟ್ಟದಲ್ಲಿ ಮುಂದುವರಿದಿರುವ ಅನಿಶ್ಚಿತತೆ, ಹೂಡಿಕೆದಾರರ ಎಚ್ಚರಿಕೆಯ ನಡೆ ಹಾಗೂ ಕಚ್ಚಾ ತೈಲದ ದರ ಏರಿಕೆಯು ಮಾರುಕಟ್ಟೆಯ ಮೇಲೆ ಒತ್ತಡವನ್ನು ಹೆಚ್ಚಿಸಿತು ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Share This Article