ಬಿಜೆಪಿ–ಜೆಡಿಎಸ್ ಸಂಸದರು ಕೇಂದ್ರದ ಅನ್ಯಾಯದ ಬಗ್ಗೆ ಮೌನ – ಸಿಎಂ ಆಕ್ರೋಶ

2 Min Read
2 Min Read

ಬೆಂಗಳೂರು, .15:
ಕೇಂದ್ರ ಸರ್ಕಾರ ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯದ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್ ಸಂಸದರು ಮೌನವಾಗಿರುವುದು ಚಿಂತಾಜನಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೀರಿನ ಹೆಜ್ಜೆ: ವಿವಾದಒಪ್ಪಂದತೀರ್ಪು ಪುಸ್ತಕವನ್ನು ಬಿಡುಗಡೆ ಮಾಡಿದ ಬಳಿಕ ಸಿಎಂ ಮಾತನಾಡಿದರು.

🔹ಪ್ರಹ್ಲಾದ್ ಜೋಶಿ ಒಂದು ದಿನವೂ ಧ್ವನಿ ಎತ್ತಿಲ್ಲ” – ಸಿಎಂ

ಸಿದ್ದರಾಮಯ್ಯ ಹೇಳಿದರು:

“ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಕೇಂದ್ರದಲ್ಲಿ ಪ್ರಹ್ಲಾದ್ ಜೋಶಿ ಒಮ್ಮೆಲಾದರೂ ಪ್ರಶ್ನಿಸಿದ್ದಾರೆಯೇ? ಬಿಜೆಪಿ–ಜೆಡಿಎಸ್ ಸಂಸದರು ಬಾಯಿ ತೆಗೆಯುವುದೇ ಇಲ್ಲ.”

ಅಂತಾರಾಜ್ಯ ಜಲ ವಿವಾದಗಳ ಕುರಿತು ಮಾತನಾಡಿದ ಅವರು — ಮಹದಾಯಿ, ಕೃಷ್ಣ ಮತ್ತು ಕಾವೇರಿ ನದಿ ವಿವಾದಗಳಲ್ಲಿ ರಾಜ್ಯಕ್ಕೆ ಪೂರ್ಣ ನ್ಯಾಯ ಇನ್ನೂ ಸಿಕ್ಕಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

🔹ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೂ ಪ್ರಯೋಜನಆದರೂ ವಿರೋಧ!”

ಮೇಕೆದಾಟು ಯೋಜನೆಯಲ್ಲಿನ 67 ಟಿಎಂಸಿ ನೀರಿನ ಸಂಗ್ರಹದಿಂದ ಕರ್ನಾಟಕಕ್ಕಿಂತ ತಮಿಳುನಾಡಿಗೇ ಹೆಚ್ಚು ಲಾಭವಿದೆ ಎಂಬುದನ್ನು ಸಿಎಂ ನೆನಪಿಸಿದರು.

“ರಾಜಕೀಯ ಕಾರಣಕ್ಕೆ ತಮಿಳುನಾಡು ವಿರೋಧಿಸುತ್ತಿದೆ. ನಾವು ಪಾದಯಾತ್ರೆ ನಡೆಸಿ ಜನರಿಗೆ ಸತ್ಯ ತಿಳಿಸಿದ್ದೇವೆ,” ಎಂದರು.

🔹 ಕೃಷ್ಣಾ ನದಿ ವಿವಾದ – “ಕೇಂದ್ರ ಗಜೆಟ್ ಹೊರಡಿಸಿಲ್ಲ

ಕೃಷ್ಣಾ ನದಿ ನೀರು ಹಂಚಿಕೆ ಕುರಿತು ಕೇಂದ್ರ ಸರ್ಕಾರ ಇನ್ನೂ ಗಜೆಟ್ ನೋಟಿಫಿಕೇಶನ್ ಹೊರಡಿಸದಿರುವುದನ್ನು ಸಿಎಂ ತೀವ್ರ ಟೀಕಿಸಿದರು.

“ಕೇಂದ್ರದ ಅನ್ಯಾಯ ಮತ್ತು ಆರ್ಥಿಕ ದ್ರೋಹದ ವಿಷಯದಲ್ಲೂ ಬಿಜೆಪಿ–ಜೆಡಿಎಸ್ ಸಂಸದರು ಮಾತೇ ಆಡುತ್ತಿಲ್ಲ,” ಎಂದು ಗರಂ ಆದರು.

🔹ಕಬ್ಬು ಬೆಳೆಗಾರರಿಗೂ ಕೇಂದ್ರ ದ್ರೋಹ

ಸಿದ್ದರಾಮಯ್ಯ ಮುಂದುವರೆದು,

“ಕಬ್ಬು ರೈತರಿಗೆ ಕೇಂದ್ರ ಸರ್ಕಾರ ದ್ರೋಹ ಮಾಡಿದೆ. ಈ ವಿಷಯದಲ್ಲೂ ಬಿಜೆಪಿ–ಜೆಡಿಎಸ್ ಸಂಸದರು ಧ್ವನಿ ಎತ್ತಿಲ್ಲ,” ಎಂದು ಹೇಳಿದರು.

🔹 ಮುದ್ದೋಳ ಕಬ್ಬು ಟ್ರಾಕ್ಟರ್ ಬೆಂಕಿ ಪ್ರಕರಣಸತ್ಯ ಬಹಿರಂಗ

ಮುದ್ದೋಳದಲ್ಲಿ ಕಬ್ಬು ಟ್ರಾಕ್ಟರ್‌ಗಳಿಗೆ ಬೆಂಕಿ ಹಚ್ಚಿದ ಪ್ರಕರಣವನ್ನು ಉಲ್ಲೇಖಿಸಿದ ಸಿಎಂ:

“ರೈತರು ಬೆಂಕಿ ಹಚ್ಚಿಲ್ಲ ಎಂದು ಹೇಳುತ್ತಿದ್ದಾರೆ. ನಿಜವಾದ ಆರೋಪಿಗಳನ್ನು ಪತ್ತೆಹಚ್ಚಲು ತನಿಖೆ ಆದೇಶಿಸಲಾಗಿದೆ. ಸತ್ಯವಾದ್ದೇ ಹೊರಬರುತ್ತದೆ,” ಎಂದು ಹೇಳಿದರು.

🔹 “2028ರಲ್ಲೂ ಕಾಂಗ್ರೆಸ್ ಸರ್ಕಾರ ಬರುವುದು ಖಚಿತ

ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ —

“ಜನರ ವಿಶ್ವಾಸ ನಮ್ಮೊಂದಿಗೆ ಇದೆ. 2028ರಲ್ಲೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರುವದು ಶತಸಿದ್ಧ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.

Share This Article
Leave a Comment