ಹೈಕಮಾಂಡ್ ಕರೆ ಮಾಡಿದರೆ ತಕ್ಷಣ ದೆಹಲಿಗೆ ಹೋಗುತ್ತೇನೆ” — ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

1 Min Read
1 Min Read

ಬೆಂಗಳೂರು, ನವೆಂಬರ್ 27:
ರಾಜಕೀಯ ವಲಯದಲ್ಲಿ ಹೆಚ್ಚುತ್ತಿರುವ ಊಹಾಪೋಹಗಳ ನಡುವೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೈಕಮಾಂಡ್ ಸೂಚನೆ ಬಂದರೆ ನಾವು ಯಾವಾಗ ಬೇಕಾದರೂ ದೆಹಲಿಗೆ ತೆರಳಲು ಸಿದ್ಧ ಎಂದು ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿದ — ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳನ್ನು ದೆಹಲಿಗೆ ಕರೆಸಿ ಚರ್ಚೆ ಮಾಡಲಾಗುವುದು ಎಂಬ ಹೇಳಿಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ನನ್ನನ್ನೂ, ಸಿಎಂನ್ನೂ ಕರೆದರೆ ಇಬ್ಬರೂ ಸೇರಿ ತೆರಳುತ್ತೇವೆ

“ಹೈಕಮಾಂಡ್ ನನ್ನನ್ನಾಗಲಿ, ಮುಖ್ಯಮಂತ್ರಿಯನ್ನಾಗಲಿ ಕರೆದರೆ, ನಾವು ಮಾತುಕತೆ ನಡೆಸಿಕೊಂಡು ದೆಹಲಿಗೆ ಹೋಗುತ್ತೇವೆ. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ” ಎಂದು ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.

ಇದುವರೆಗೂ ಕರೆ ಬಂದಿಲ್ಲ: ಡಿಕೆಶಿ ಸ್ಪಷ್ಟನೆ

ಅವರು ಮತ್ತಷ್ಟು ವಿವರಿಸಿ,
ಇದುವರೆಗೂ ಯಾರೂ ನನ್ನನ್ನು ದೆಹಲಿಗೆ ಕರೆದಿಲ್ಲ. ಇಂದು ಮುಂಬೈನಲ್ಲಿ ನನ್ನ ಖಾಸಗಿ ಕಾರ್ಯಕ್ರಮವಿದೆ. ಇಂದಿರಾ ಗಾಂಧಿ ಪ್ರಾರಂಭಿಸಿದ ಅಂಗನವಾಡಿ ಯೋಜನೆಗೆ 50 ವರ್ಷ ಪೂರ್ಣಗೊಂಡ ಸಂದರ್ಭದ ಕಾರ್ಯಕ್ರಮವನ್ನೂ ಹಾಜರಾಗಬೇಕಿದೆ. ಮುಂಬೈ ಕಾರ್ಯಕ್ರಮ ಮುಗಿಸಿ ಇಂದು ಗುರುವಾರವೇ ಮರಳಿ ಬರುತ್ತೇನೆ” ಎಂದು ಹೇಳಿದರು.

ರಾಜಕೀಯ ಚರ್ಚೆಗಳಿಗೆ ಬ್ರೇಕ್ ಹಾಕಿದ ಹೇಳಿಕೆ?

ಕಾಂಗ್ರೆಸ್ ಆಂತರಿಕ ಬೆಳವಣಿಗೆಗಳ ಬಗ್ಗೆ ಹಲವು ಊಹಾಪೋಹಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಡಿಕೆಶಿಯ ಈ ಹೇಳಿಕೆ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಹೈಕಮಾಂಡ್ ಕರೆ ಬಾರದಿದ್ದರೂ, ಕರೆ ಬಂದರೆ ತಕ್ಷಣ ತೆರಳಲು ಸಿದ್ಧ ಎಂದು ತಿಳಿಸಿದ್ದಾರೆ.

 

Share This Article
Leave a Comment