ಮಧ್ಯಾಹ್ನದ ಕುಸಿತದ ನಂತರ ಮಾರುಕಟ್ಟೆ ಚೇತರಿಕೆ – ಸೆನ್ಸೆಕ್ಸ್ 336 ಅಂಕ ಏರಿಕೆ, ನಿಫ್ಟಿ 25,695ಕ್ಕೆ ಏರಿಳಿತದ ಬಳಿಕ ಮುಕ್ತಾಯ!

1 Min Read
1 Min Read

ಮುಂಬೈ, ನ.11:
ದೇಶೀಯ ಷೇರು ಮಾರುಕಟ್ಟೆ ಇಂದು ಅಸ್ಥಿರ ವಹಿವಾಟಿನ ಮಧ್ಯೆ ಚೇತರಿಕೆೊಂದಿಗೆ ಮುಕ್ತಾಯಗೊಂಡಿದೆ. ಬೆಳಿಗ್ಗೆ ಅಲ್ಪ ಏರಿಕೆಯಿಂದ ಆರಂಭವಾದ ಸೆನ್ಸೆಕ್ಸ್ ಮತ್ತು ನಿಫ್ಟಿ, ಮಧ್ಯಾಹ್ನದ ವೇಳೆಗೆ ಲಾಭ ಕಳೆದುಕೊಂಡು ಕೆಂಪು ವಲಯ ಪ್ರವೇಶಿಸಿತು. ಆದರೆ ನಂತರದ ಅರ್ಧದಲ್ಲೇ ಮಾರುಕಟ್ಟೆ ಪುನಃ ಚೇತರಿಸಿಕೊಂಡು ಲಾಭದೊಂದಿಗೆ ಸೆಷನ್ ಮುಗಿಸಿದೆ.

ಸೆನ್ಸೆಕ್ಸ್ 336 ಅಂಕ (0.4%) ಏರಿಕೆಯಿಂದ 83,871 ಅಂಕಗಳ ಬಳಿ ಮುಗಿದರೆ, ನಿಫ್ಟಿ 121 ಅಂಕ (0.47%) ಏರಿಕೆ ಕಂಡು 25,695 ಅಂಕಗಳಲ್ಲಿ ಸ್ಥಿರವಾಯಿತು.

ಬಾಂಬೆ ಸ್ಟಾಕ್ ಎಕ್ಸ್ಚೇಂಜ್‌ನ (BSE) ವ್ಯಾಪಕ ಸೂಚ್ಯಂಕಗಳಲ್ಲಿ ಮಿಡ್‌ಕ್ಯಾಪ್ ಸೂಚ್ಯಂಕ 0.2% ಏರಿಕೆ, ಆದರೆ ಸ್ಮಾಲ್‌ಕ್ಯಾಪ್ ಸೂಚ್ಯಂಕ 0.1% ಕುಸಿತ ಕಂಡಿತು.

ಸೆನ್ಸೆಕ್ಸ್‌ನ 30 ಕಂಪನಿಗಳ ಪೈಕಿ 24 ಷೇರುಗಳು ಏರಿಕೆ ಕಂಡಿದ್ದು, ಪ್ರಮುಖ ಲಾಭ ಗಳಿಸಿದವುಗಳಲ್ಲಿ ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (2.5%), ಮಹೀಂದ್ರಾ ಅಂಡ್ ಮಹೀಂದ್ರಾ (2.4%), ಮತ್ತು ಅದಾನಿ ಪೋರ್ಟ್ಸ್ (2.1%) ಸೇರಿವೆ.
ಮುಖ್ಯ ನಷ್ಟ ಕಂಡ ಷೇರುಗಳಲ್ಲಿ ಬಜಾಜ್ ಫೈನಾನ್ಸ್ (7.4%), ಬಜಾಜ್ ಫಿನ್ಸರ್ವ್ (6.3%), ಹಾಗೂ ಟಾಟಾ ಮೋಟರ್ಸ್ (0.7%) ಸೇರಿವೆ.

ವಿಭಾಗವಾರು ಅಂಕಿಅಂಶಗಳಲ್ಲಿ, 21 ವಿಭಾಗಗಳಲ್ಲಿ 18 ವಿಭಾಗಗಳು ಹಸಿರು ವಲಯದಲ್ಲಿ ಮುಕ್ತಾಯಗೊಂಡಿದ್ದು, ಸೇವೆಗಳು (1.7%), ದೂರಸಂಪರ್ಕ (1.6%), ಐಟಿ ಮತ್ತು ಕ್ಯಾಪಿಟಲ್ ಗೂಡ್ಸ್ (1.2%) ಹೆಚ್ಚು ಲಾಭ ಕಂಡವು.
ಆದರೆ ಆರೋಗ್ಯ (0.3%), ಫೈನಾನ್ಶಿಯಲ್ ಸರ್ವೀಸಸ್ ಮತ್ತು ರಿಯಲ್ ಎಸ್ಟೇಟ್ (0.2%) ಕುಸಿತ ಕಂಡವು.

ಬಿಎಸ್‌ಇ ಒಟ್ಟಾರೆ ವ್ಯವಹಾರಗಳಲ್ಲಿ 2,245 ಷೇರುಗಳು ಕುಸಿತ, 1,936 ಷೇರುಗಳು ಏರಿಕೆ, ಮತ್ತು 182 ಸ್ಥಿರವಾಗಿದ್ದವು.

ಮಾರುಕಟ್ಟೆ ತಜ್ಞರ ಪ್ರಕಾರ, ಜಾಗತಿಕ ಬಂಡವಾಳದ ಹರಿವು, ಡಾಲರ್ ಬಲ, ಮತ್ತು ತೈಲದ ಬೆಲೆಗಳಲ್ಲಿ ಬದಲಾವಣೆಗಳು ಮುಂದಿನ ವಾರದ ಮಾರುಕಟ್ಟೆ ಚಲನೆಯನ್ನು ನಿರ್ಧರಿಸಲಿವೆ.

Share This Article
Leave a Comment