ವಿಜಯವಾಡದಲ್ಲಿ ಇಂದಿನಿಂದ ‘ಸರಸ್ ಮೇಳ 2026’ ಆರಂಭ: 1,500ಕ್ಕೂ ಹೆಚ್ಚು ಮಹಿಳೆಯರಿಗೆ ವೇದಿಕೆ

1 Min Read
1 Min Read

ವಿಜಯವಾಡ: ಗ್ರಾಮೀಣ ಮಹಿಳಾ ಉದ್ಯಮಿಗಳಿಗೆ ಮಾರುಕಟ್ಟೆ ಅವಕಾಶಗಳನ್ನು ಕಲ್ಪಿಸುವ ಹಾಗೂ ಸಾಂಪ್ರದಾಯಿಕ ಕಲೆ, ಕರಕುಶಲ ವಸ್ತುಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು ವಿಜಯವಾಡದಲ್ಲಿ ಇಂದಿನಿಂದ ‘ರಾಷ್ಟ್ರೀಯ ಸರಸ್ ಮೇಳ 2026’ ಆಯೋಜಿಸುತ್ತಿದೆ.

ಆಂಧ್ರಪ್ರದೇಶ ಸರ್ಕಾರ ಮತ್ತು ಸೊಸೈಟಿ ಫಾರ್ ಎಲಿಮಿನೇಷನ್ ಆಫ್ ರೂರಲ್ ಪಾವರ್ಟಿ (SERP) ಸಹಯೋಗದಲ್ಲಿ ಈ ಮೇಳ ನಡೆಯಲಿದೆ. ವಿಜಯವಾಡದಲ್ಲಿ ಆಯೋಜನೆಯಾಗುತ್ತಿರುವ ಮೊದಲ ರಾಷ್ಟ್ರೀಯ ಸರಸ್ ಮೇಳ ಇದಾಗಿದೆ.

ದೇಶದ 30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸ್ವಸಹಾಯ ಗುಂಪುಗಳಿಗೆ ಸೇರಿದ 1,500ಕ್ಕೂ ಹೆಚ್ಚು ಮಹಿಳೆಯರು ಮೇಳದಲ್ಲಿ ಭಾಗವಹಿಸಲಿದ್ದಾರೆ. ಗ್ರಾಮೀಣ ಉದ್ಯಮಗಳ ಉತ್ಪನ್ನಗಳು, ಸಾಂಪ್ರದಾಯಿಕ ಕರಕುಶಲ ವಸ್ತುಗಳು, ವಿವಿಧ ಪ್ರದೇಶಗಳ ವಿಶಿಷ್ಟ ಆಹಾರ ಪದಾರ್ಥಗಳು ಹಾಗೂ ಮಹಿಳಾ ಉದ್ಯಮಿಗಳ ಯಶೋಗಾಥೆಗಳನ್ನು ಪರಿಚಯಿಸಲು ಈ ಮೇಳ ವೇದಿಕೆಯಾಗಲಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೇಳವನ್ನು ಉದ್ಘಾಟಿಸಲಿದ್ದಾರೆ. ಈ ತಿಂಗಳ 31ರವರೆಗೆ ನಡೆಯಲಿರುವ ಮೇಳವು ಗ್ರಾಮೀಣ ಮಹಿಳೆಯರ ಉತ್ಪನ್ನಗಳಿಗೆ ಹೆಚ್ಚಿನ ಮಾರುಕಟ್ಟೆ ಸಂಪರ್ಕ ಕಲ್ಪಿಸುವುದರ ಜೊತೆಗೆ, ಅವರ ಉದ್ಯಮಶೀಲತೆಯನ್ನು ಉತ್ತೇಜಿಸುವ ಗುರಿ ಹೊಂದಿದೆ.

 

Share This Article