ಸಿಬಿಎಫ್‌ಸಿಗೆ ಹೊಸ ರೂಪ: ಪ್ರೀತಿ ಜಿಂಟಾ, ಪಂಕಜ್ ತ್ರಿಪಾಠಿ ಸೇರಿ 18 ಸದಸ್ಯರ ನೇಮಕ

1 Min Read
1 Min Read

ನವದೆಹಲಿ: ಕೇಂದ್ರ ಸರ್ಕಾರವು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯನ್ನು (CBFC) ಮೂರು ವರ್ಷಗಳ ಅವಧಿಗೆ ಪುನರ್‌ರಚಿಸಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಸೆಪ್ಟೆಂಬರ್‌ 16ರಂದು ಈ ಕುರಿತು ಅಧಿಸೂಚನೆ ಹೊರಡಿಸಿದ್ದು, ಹೊಸ ಮಂಡಳಿಯ ನೇಮಕಾತಿಗಳು ತಕ್ಷಣದಿಂದಲೇ ಜಾರಿಗೆ ಬಂದಿವೆ. ಈ ಅವಧಿ ಮೂರು ವರ್ಷಗಳು ಅಥವಾ ಮುಂದಿನ ಆದೇಶದವರೆಗೆ ಇರಲಿದೆ.

ಪುನರ್‌ರಚಿಸಲಾದ ಸಿಬಿಎಫ್‌ಸಿಯಲ್ಲಿ ಒಟ್ಟು 18 ಸದಸ್ಯರಿಗೆ ಸ್ಥಾನ ನೀಡಲಾಗಿದೆ. ಬಾಲಿವುಡ್‌ ನಟಿಯರಾದ ಪ್ರೀತಿ ಜಿಂಟಾ, ರೂಪಾಲಿ ಗಾಂಗೂಲಿ, ನಟರಾದ ಪಂಕಜ್ ತ್ರಿಪಾಠಿ, ಸುನೀಲ್ ಶೆಟ್ಟಿ, ಮನೋಜ್ ಜೋಶಿ, ಪ್ರೊಸೆಂಜಿತ್ ಚಟರ್ಜಿ ಹಾಗೂ ನಿರ್ದೇಶಕ ಪ್ರಿಯದರ್ಶನ್ ಪ್ರಮುಖ ಸದಸ್ಯರಾಗಿದ್ದಾರೆ.

ಸಂಗೀತ ಸಂಯೋಜಕ ರಿಕ್ಕಿ ಕೇಜ್, ಗಾಯಕ ಹಂಸರಾಜ್ ಹಂಸ್, ನಟಿ ಪಲ್ಲವಿ ಜೋಶಿ, ಚಿತ್ರ ನಿರ್ಮಾಪಕಿ ಸುಪ್ರಿಯಾ ಯಾರ್ಲಗಡ್ಡ, ನಿರ್ದೇಶಕರಾದ ಅಭಿಷೇಕ್ ಜೈನ್ ಮತ್ತು ನೀಲ ಮಾಧವ್ ಪಾಂಡಾ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಹೊಸ ಮಂಡಳಿಯಲ್ಲಿ ಸೇರಿದ್ದಾರೆ.

18 ಸದಸ್ಯರ ಸಂಪೂರ್ಣ ಪಟ್ಟಿ

  1. ವಿನೋದ್ ಅನುಪಮ್
  2. ಮನೋಜ್ ಜೋಶಿ
  3. ಅಭಿಷೇಕ್ ಜೈನ್
  4. ರಿಕ್ಕಿ ಕೇಜ್
  5. ಪ್ರಿಯದರ್ಶನ್
  6. ಸುನೀಲ್ ಶೆಟ್ಟಿ
  7. ಹಂಸರಾಜ್ ಹಂಸ್
  8. ಸುಪ್ರಿಯಾ ಯಾರ್ಲಗಡ್ಡ
  9. ಯತೀಂದ್ರ ಮಿಶ್ರಾ
  10. ರೂಪಾಲಿ ಗಾಂಗೂಲಿ
  11. ಪ್ರೀತಿ ಜಿಂಟಾ
  12. ನೀಲ ಮಾಧವ್ ಪಾಂಡಾ
  13. ಪಂಕಜ್ ತ್ರಿಪಾಠಿ
  14. ಪ್ರೊಸೆಂಜಿತ್ ಚಟರ್ಜಿ
  15. ಪಲ್ಲವಿ ಜೋಶಿ
  16. ನಿಶಿಗಂಧಾ ವಾಡ್
  17. ವಾಮನ್ ಕೇಂದ್ರೆ
  18. ರಮೇಶ್ ಪತಂಗೆ

ಮಂಡಳಿಯ ಪುನರ್‌ರಚನೆಗೆ ಕೇಂದ್ರ ಸರ್ಕಾರವು ಸಿನಿಮಾಟೋಗ್ರಾಫ್ ಕಾಯ್ದೆ, 1952ರ ಸೆಕ್ಷನ್ 3(1) ಹಾಗೂ ಸಿನಿಮಾಟೋಗ್ರಾಫ್ (ಸರ್ಟಿಫಿಕೇಶನ್) ನಿಯಮಗಳು, 2024ರ ನಿಯಮ 3ರ ಅಡಿಯಲ್ಲಿ ದೊರೆಯುವ ಅಧಿಕಾರವನ್ನು ಬಳಸಿಕೊಂಡಿದೆ ಎಂದು ಸಚಿವಾಲಯ ತಿಳಿಸಿದೆ.

ಸಿಬಿಎಫ್‌ಸಿ ಸಾರ್ವಜನಿಕ ಪ್ರದರ್ಶನಕ್ಕೆ ಮುನ್ನ ಚಲನಚಿತ್ರಗಳ ಪ್ರಮಾಣೀಕರಣಕ್ಕೆ ಸಂಬಂಧಿಸಿದ ಪ್ರಮುಖ ಜವಾಬ್ದಾರಿಯನ್ನು ನಿರ್ವಹಿಸುತ್ತದೆ. ಹೊಸ ಮಂಡಳಿಯಲ್ಲಿ ಸಿನಿಮಾ, ದೂರದರ್ಶನ, ಸಂಗೀತ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳ ಪ್ರತಿನಿಧಿಗಳಿಗೆ ಅವಕಾಶ ನೀಡಲಾಗಿದೆ.

 

Share This Article