ಅಸಾನ್: ಬ್ಯಾಡ್ಮಿಂಟನ್ ಕೊರಿಯಾ ಮಾಸ್ಟರ್ಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ಕ್ವಾರ್ಟರ್ಫೈನಲ್ನಲ್ಲಿ ಭಾರತದ ಇಬ್ಬರು ಆಟಗಾರ್ತಿಯರಾದ ತಾನ್ವಿ ಶರ್ಮಾ ಮತ್ತು ರಕ್ಷಿತಾ ರಾಮರಾಜ್ ಇಂದು ಮುಖಾಮುಖಿಯಾಗಲಿದ್ದಾರೆ.
ಕ್ವಾರ್ಟರ್ಫೈನಲ್ ಪ್ರವೇಶಿಸಿರುವ ತಾನ್ವಿ ಶರ್ಮಾ, ಪ್ರೀ-ಕ್ವಾರ್ಟರ್ಫೈನಲ್ನಲ್ಲಿ ಭಾರತದ ಮತ್ತೊಬ್ಬ ಆಟಗಾರ್ತಿ ಶ್ರಿಯಾಂಶಿ ವಾಲಿಶೆಟ್ಟಿ ಅವರನ್ನು ಮಣಿಸಿ ಮುನ್ನಡೆದಿದ್ದಾರೆ. ಮತ್ತೊಂದೆಡೆ, ರಕ್ಷಿತಾ ರಾಮರಾಜ್ ಅವರು ಜಪಾನ್ನ ಮನಾಮಿ ಸುಯಿಜು ಅವರನ್ನು ಸೋಲಿಸಿ ಅಂತಿಮ ಎಂಟರ ಘಟ್ಟ ತಲುಪಿದ್ದಾರೆ.
ಅಶ್ಮಿತಾಗೆ ಜಪಾನ್ನ ಅಗ್ರ ಶ್ರೇಯಾಂಕಿತೆ ಸವಾಲು
ಮಹಿಳಾ ಸಿಂಗಲ್ಸ್ನ ಮತ್ತೊಂದು ಕ್ವಾರ್ಟರ್ಫೈನಲ್ನಲ್ಲಿ ಭಾರತದ ಅಶ್ಮಿತಾ ಚಾಲಿಹಾ ಅವರು ಜಪಾನ್ನ ಅಗ್ರ ಶ್ರೇಯಾಂಕಿತ ಆಟಗಾರ್ತಿ ಹಿನಾ ಅಕೆಚಿ ಅವರನ್ನು ಎದುರಿಸಲಿದ್ದಾರೆ.
ಅಶ್ಮಿತಾ ಅವರು ಪ್ರೀ-ಕ್ವಾರ್ಟರ್ಫೈನಲ್ನಲ್ಲಿ ದಕ್ಷಿಣ ಕೊರಿಯಾದ ಕಿಮ್ ಮಿನ್ ಜಿ ವಿರುದ್ಧ ಪ್ರಭಾವಿ ಗೆಲುವು ದಾಖಲಿಸಿ ಅಂತಿಮ ಎಂಟರ ಘಟ್ಟಕ್ಕೆ ಪ್ರವೇಶಿಸಿದ್ದಾರೆ.
ಪುರುಷರ ಡಬಲ್ಸ್ನಲ್ಲೂ ಭಾರತದ ಸವಾಲು
ಪುರುಷರ ಡಬಲ್ಸ್ ಕ್ವಾರ್ಟರ್ಫೈನಲ್ನಲ್ಲಿ ಭಾರತದ ಪೃಥ್ವಿ ಕೃಷ್ಣಮೂರ್ತಿ ರಾಯ್ ಮತ್ತು ಕೃಷ್ಣ ಪ್ರಸಾದ್ ಗರಗ ಜೋಡಿ ಮಲೇಷ್ಯಾದ ಮ್ಯಾನ್ ವೇಯ್ ಚಾಂಗ್ ಮತ್ತು ಸೊಹ್ ವೂಯಿ ಯಿಕ್ ಜೋಡಿಯನ್ನು ಎದುರಿಸಲಿದೆ.
ಸೆಮಿಫೈನಲ್ ಸ್ಥಾನಕ್ಕಾಗಿ ನಡೆಯಲಿರುವ ಈ ಪಂದ್ಯದಲ್ಲಿ ಭಾರತದ ಜೋಡಿ ಗೆಲುವಿನ ನಿರೀಕ್ಷೆಯಲ್ಲಿದೆ.


