ಸೈನಿಕರಿಗೆ ರಕ್ಷಣಾ ಸಚಿವರ ವಿಶೇಷ ಸಂದೇಶ: ಇಂದು ಸಂಜೆ 5:10ಕ್ಕೆ ರಾಜನಾಥ್ ಸಿಂಗ್ ಭಾಷಣ

0 Min Read
0 Min Read

ನವದೆಹಲಿ: 80ನೇ ಸ್ವಾತಂತ್ರ್ಯೋತ್ಸವದ ಮುನ್ನಾದಿನವಾದ ಇಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ದೇಶದ ಸೈನಿಕರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.

ರಾಜನಾಥ್ ಸಿಂಗ್ ಅವರ ಭಾಷಣ ಇಂದು ಸಂಜೆ 5:10ಕ್ಕೆ ಪ್ರಸಾರವಾಗಲಿದೆ. ಆಕಾಶವಾಣಿಯ ಎಫ್‌ಎಂ ಗೋಲ್ಡ್ (100.1 ಮೆಗಾಹರ್ಟ್ಸ್) ಹಾಗೂ ಇಂದ್ರಪ್ರಸ್ಥ ಚಾನೆಲ್ (366.3 ಮೀಟರ್/819 ಕಿಲೋಹೆರ್ಟ್ಜ್) ಮೂಲಕ ಭಾಷಣವನ್ನು ಪ್ರಸಾರ ಮಾಡಲಾಗುತ್ತದೆ.

ದೇಶದ ಗಡಿಗಳನ್ನು ಕಾಯುವ ಸಶಸ್ತ್ರ ಪಡೆಗಳ ಸಿಬ್ಬಂದಿಯನ್ನುದ್ದೇಶಿಸಿ ರಕ್ಷಣಾ ಸಚಿವರು ನೀಡಲಿರುವ ಈ ಸಂದೇಶವು 80ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಮಹತ್ವ ಪಡೆದುಕೊಂಡಿದೆ.

Share This Article