ಸಿಕಾಸಾ ಬೆಂಗಳೂರು ವತಿಯಿಂದ “ಸಂಭ್ರಮ 2.0” ಎಂಬ ಸಿಎ ವಿದ್ಯಾರ್ಥಿಗಳಿಗಾಗಿ ಪೂರ್ಣ ದಿನದ ಸಾಂಸ್ಕೃತಿಕ ಕಾರ್ಯಕ್ರಮವನ್ನು 14 ಡಿಸೆಂಬರ್ 2025ರಂದು ಬಸವನಗುಡಿಯ ಎಪಿಎಸ್ ಆಡಿಯಟೋರಿಯಂನಲ್ಲಿ ಬೆಳಿಗ್ಗೆ 10ರಿಂದ ಸಂಜೆ 7ರವರೆಗೆ ಯಶಸ್ವಿಯಾಗಿ ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸುಮಾರು 350ಕ್ಕೂ ಹೆಚ್ಚು ಚಾರ್ಟರ್ಡ್ ಅಕೌಂಟೆನ್ಸಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮವು ಸಿಕಾಸಾ ಅಧ್ಯಕ್ಷರಾದ ಸಿಎ ನಿಶ್ಚಲ್ ಆರ್ ಬಿ ಅವರ ಮಾರ್ಗದರ್ಶನದಲ್ಲಿ, ಉಪಾಧ್ಯಕ್ಷ ಪೃಥ್ವಿ ಎಂ ದೇವ್, ಖಜಾಂಚಿ ತರುಣ್ ಬಿ ಕೆ ಹಾಗೂ ಸಿಜಿಟಿ ಕಾರ್ಯದರ್ಶಿ ಗಗನ್ ಎಂ ಅವರ ನೇತೃತ್ವದ ಸಿಕಾಸಾ ವಿದ್ಯಾರ್ಥಿ ಸಮಿತಿಯಿಂದ ಆಯೋಜಿಸಲಾಯಿತು. ಬೆಂಗಳೂರಿನ ಎಸ್.ಐ.ಆರ್.ಸಿ ಶಾಖೆಯ ಸಹಕಾರದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ಶಾಖಾ ಅಧ್ಯಕ್ಷರಾದ ಸಿಎ ಮಂಜುನಾಥ್ ಎಂ ಹಳ್ಳೂರು, ಸಮಿತಿ ಸದಸ್ಯರಾದ ಸಿಎ ವಿನೋದ್ ಗರ್ಗ್ ಮತ್ತು ಸಿಎ ಶ್ರೀ ರಕ್ಷಾ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ 30 ಮಂದಿ ಸ್ಪರ್ಧಿಗಳು ನೃತ್ಯ, ಗಾಯನ, ವಾದ್ಯ ಸಂಗೀತ, ಚಿತ್ರಕಲೆ ಮತ್ತು ನಾಟಕ ಸೇರಿದಂತೆ ವಿವಿಧ ಪ್ರತಿಭೆಗಳನ್ನು ಪ್ರದರ್ಶಿಸಿದರು. ಸ್ಪರ್ಧೆಗಳಿಗೆ ಥರಕ್ ಝೇವಿಯರ್ ಮತ್ತು ವಿನಯ್ ಚಂದ್ರ ತೀರ್ಪುಗಾರರಾಗಿದ್ದರು. ಮಜಸ್ಟಿಕ್ 2 ಚಿತ್ರದ ನಟ ಭರತ್ ಕುಮಾರ್ ಮತ್ತು ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಮುಖ್ಯ ಅತಿಥಿಗಳಾಗಿದ್ದರು. ಸ್ಪರ್ಧೆಯಲ್ಲಿ ಬೆಂಗಳೂರಿನ ಫ್ಲೂಟ್ ವಾದಕ ಕಮಲ್ ಎಸ್ ಗೌಡ ಮತ್ತು ಅಸ್ಸಾಂನ ಕಥಕ್ ನೃತ್ಯಗಾರ್ತಿ ಪ್ರಿಯಾಂಕಾ ಮಂಡಲ್ ಇಬ್ಬರೂ ಪ್ರಶಸ್ತಿ ವಿಜೇತರಾದರು.


