ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಬಂಪರ್ ಮುನ್ನಡೆ; “ಪುನಃ ಮತಗಳ್ಳತನವೇ ನಡೆದಿದೆಯಾ?” – ಸಿದ್ದರಾಮಯ್ಯ ಪ್ರಶ್ನೆ

1 Min Read
1 Min Read

ಬೆಂಗಳೂರು, ನ.14:
2025ರ ಬಿಹಾರ ವಿಧಾನಸಭೆ ಚುನಾವಣಾ ಫಲಿತಾಂಶಗಳು ಹೊರಬರುವ ತುದಿಗಾಲದಲ್ಲಿವೆ. ಆರಂಭಿಕ ಎಣಿಕೆಯಲ್ಲೇ ಎನ್‌ಡಿಎ ಭಾರೀ ಮುನ್ನಡೆ ಸಾಧಿಸಿದ್ದು, ಆರ್‌ಜೆಡಿ ಮತ್ತು ಕಾಂಗ್ರೆಸ್ ಎದುರು ಕಠಿಣ ಹಿನ್ನಡೆ ಕಂಡು ಬಂದಿದೆ.

ಇದೇ ವೇಳೆ, ಸಂಪೂರ್ಣ ಫಲಿತಾಂಶ ಹೊರಬರುವ ಮೊದಲುಲೇ ಕಾಂಗ್ರೆಸ್ ನಾಯಕರು ಮತಗಳ್ಳತನದ ಆರೋಪ ಮೂಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಬಿಹಾರದಲ್ಲಿ ಮತಚಲಾವಣೆಯಲ್ಲಿ ಅನಿಯಮಿತತೆ ನಡೆದಿದೆ ಎಂದು ಹೇಳಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಅವರು,

“ಬಿಹಾರದಲ್ಲಿ ಯಾಕೆ ಹಿನ್ನಡೆ ಆಗಿದೆ ಎಂಬುದು ಮತ್ತಷ್ಟು ಮಾಹಿತಿ ಸಿಕ್ಕ ನಂತರ ಹೇಳುತ್ತೇನೆ. ಜನರು NDAಗೆ ಯಾಕೆ ಇಷ್ಟು ದೊಡ್ಡ ಬಹುಮತ ನೀಡಿದ್ದಾರೆ ಗೊತ್ತಿಲ್ಲ. ಇಲ್ಲೂ ಮತಗಳ್ಳತನ ನಡೆದಿರುವ ಸೂಚನೆಗಳಿವೆ. ಆದರೂ ಜನರ ತೀರ್ಪನ್ನು ಗೌರವಿಸಲೇಬೇಕು,”
ಎಂದು ಹೇಳಿದರು.

ಕಾಂಗ್ರೆಸ್‌ನ OBC ಅಜೆಂಡಾ ಬಿಹಾರದಲ್ಲಿ ಕೈ ಹಿಡಿಯಲಿಲ್ಲವೆ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ,

“ನೀತೀಶ್ ಕುಮಾರ್ ಯಾರು? ಅವರು OBC ಅಲ್ಲವೇ?”
ಎಂದು ಪ್ರಶ್ನೆ ಎತ್ತಿ ಅಸಮಾಧಾನ ವ್ಯಕ್ತಪಡಿಸಿದರು.

ಮುಧೋಳದಲ್ಲಿ ನಡೆದ ರೈತರ ಪ್ರತಿಭಟನೆಯ ವಿಚಾರದಲ್ಲೂ ಅವರು ಪ್ರತಿಕ್ರಿಯಿಸಿ,

“ರಾಜ್ಯದ ಬಹುತೇಕ ರೈತರು ₹3,300 ಕಬ್ಬು ದರಕ್ಕೆ ಒಪ್ಪಿಕೊಂಡಿದ್ದಾರೆ. ಆದರೆ ಮುಧೋಳ ರೈತರು ಮಾತ್ರ ಒಪ್ಪಿಕೊಂಡಿಲ್ಲ. ಅವರೊಂದಿಗೆ ಮಾತುಕತೆ ನಡೆಯುತ್ತಿದೆ. ಟ್ರಾಕ್ಟರ್‌ಗಳು, ಟ್ರಾಲಿಗಳು ಯಾರು ಸುಟ್ಟಿದ್ದಾರೆ ಎಂದು ನಿರ್ದೇಶನ ನೀಡಿ ಪರಿಶೀಲನೆ ಮಾಡಿಸಲಾಗುತ್ತದೆ. ರೈತರು ‘ನಾವು ಸುಟ್ಟಿಲ್ಲ’ ಎಂದು ಹೇಳುತ್ತಿದ್ದಾರೆ. ಹೀಗಾಗಿ ನ್ಯಾಯಸಮ್ಮತ ತನಿಖೆ ನಡೆಯಲಿದೆ,”
ಎಂದು ಹೇಳಿದರು.

Share This Article
Leave a Comment