ಜೆರುಸಲೇಮ್ (Jerusalem): ಹಮಾಸ್–ಇಸ್ರೇಲ್ ನಡುವೆ ಎರಡು ವರ್ಷಗಳಿಂದ ಸತತವಾಗಿ ಯುದ್ಧ ನಡೆಯುತ್ತಿದ್ದು, ಇದೇ ಅಕ್ಟೋಬರ್ ಆರಂಭದಲ್ಲಿ ಕದನ ವಿರಾಮ ಜಾರಿಗೆ ಬಂದಿದೆ. ಆದರೂ ಇಸ್ರೇಲ್ 47 ಬಾರಿ ಕದನ ವಿರಾಮವನ್ನು ಉಲ್ಲಂಘಿಸಿ, 38 ಪ್ಯಾಲೆಸ್ಟೀನಿಯಾದವರನ್ನು ಕೊಂದಿದೆ. 143 ಮಂದಿ ಗಾಯಗೊಂಡಿದ್ದಾರೆ ಎಂದು ಗಾಜಾದ ಮಾಧ್ಯಮ ಕಚೇರಿ ಆರೋಪಿಸಿದೆ.
ಯುದ್ಧದ ಘೋಷಣೆ ಅಂತ್ಯದ ನಡುವೆಯೂ ಇಸ್ರೇಲ್ ಆಕ್ರಮಣಶೀಲತೆಯ ನೀತಿಯನ್ನು ಮುಂದುವರೆಸಿದೆ. ಉದ್ದೇಶಪೂರ್ವಕ ದಾಳಿ ನಡೆಸಿ, ಹಲವಾರು ನಾಗರಿಕರನ್ನು ಬಂಧಿಸಿದೆ. ಅಲ್ಲದೇ ನಾಗರಿಕರ ವಿರುದ್ಧ ನೇರ ಗುಂಡಿನ ದಾಳಿ ಮಾಡಿದೆ ಎಂದು ಹೇಳಿಕೆ ನೀಡಿದೆ.
“ಯುಎನ್(United Nations) ಮಧ್ಯಪ್ರದೇಶ ಮಾಡಿ, ಒಪ್ಪಂದದಂ ತೆ ಉಭಯ ದೇಶಗಳ ಆಕ್ರಮಣವನ್ನು ಕೊನೆಗೊಳಿಸಬೇಕು. ನಿರಾಯುಧ ನಾಗರಿಕ ಜನಸಂಖ್ಯೆಯನ್ನು ರಕ್ಷಿಸಲು ಆಕ್ರಮಣವನ್ನು ನಿಲ್ಲಿಸಬೇಕು ಎಂದು ಗಾಜಾದಲ್ಲಿನ ಅಧಿಕಾರಿಗಳು ಕರೆ ನೀಡಿದರು.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪ್ರತಿಕ್ರಿಯೆ ನೀಡಿದ್ದು, ರಫಾ ಕ್ರಾಸಿಂಗ್(Rafah crossing) – ಸಹಾಯಕ್ಕಾಗಿ ನಿರ್ಣಾಯಕ ಪ್ರವೇಶ ಬಿಂದುವಾಗಿದೆ. ಇನ್ನೂ ಗಾಜಾದಲ್ಲಿ ಮೃತ ಒತ್ತೆಯಾಳುಗಳ ದೇಹಗಳಿದ್ದು, ಅವುಗಳನ್ನು ಹಮಾಸ್ ಹಸ್ತಾಂತರಿಸಿದ ನಂತರ ಮಾತ್ರ ರಫಾ ಕ್ರಾಸಿಂಗ್ ಅನ್ನು ಮತ್ತೆ ತೆರೆಯಲಾಗುವುದು ಎಂದು ಹೇಳಿದರು.
ಹಮಾಸ್ ಒತ್ತೆಯಾಳುಗಳು ಮತ್ತು ಮೃತರ ದೇಹಗಳನ್ನು ಹಿಂದಿರುಗಿಸಲು ಮತ್ತು ಒಪ್ಪಿದ ನಿಯಮಗಳನ್ನು ಜಾರಿಗೆ ತರುವ ಬಗ್ಗೆ ಹೇಗೆ ಜವಾಬ್ದಾರಿಗಳನ್ನು ನಿರ್ವಹಿಸುತ್ತದೆ ಎಂಬುದರ ಆಧಾರದ ಮೇಲೆ ರಫಾ ಕ್ರಾಸಿಂಗ್ ಪುನರಾರಂಭಗೊಳ್ಳುತ್ತದೆ ಎಂದು ಇಸ್ರೇಲ್ ಹೇಳಿದೆ.
ಕದನ ವಿರಾಮ ಒಪ್ಪಂದದ ಭಾಗವಾಗಿ ಗಾಜಾದಲ್ಲಿ ಸೆರೆಹಿಡಿದ ಇಬ್ಬರು ಒತ್ತೆಯಾಳುಗಳ ಶವಗಳನ್ನು ರೆಡ್‌ಕ್ರಾಸ್ ಸ್ವೀಕರಿಸಿದೆ ಎಂದು ಇಸ್ರೇಲಿ ಮಿಲಿಟರಿ ಶನಿವಾರ ತಡರಾತ್ರಿ ಹೇಳಿದೆ.
ಶುಕ್ರವಾರ ಇಸ್ರೇಲಿ ಪಡೆಗಳಿಂದ ಫೆಲೆಸ್ತೀನ್ ಕುಟುಂಬದ ಹನ್ನೊಂದು ಸದಸ್ಯರು ಕೊಲ್ಲಲ್ಪಟ್ಟರು. ಇದು ಎಂಟು ದಿನಗಳ ಹಿಂದೆ ಜಾರಿಗೆ ಬಂದ ಕದನ ವಿರಾಮದ ಉಲ್ಲಂಘನೆ ಎಂದು ವಿವರಿಸಲಾಗಿದೆ. ಗಾಜಾ ನಗರ ಪಕ್ಕದ ಝೈಟೌನ್(Zeitoun)ನಲ್ಲಿರುವ ತಮ್ಮ ಮನೆಗಳಿಗೆ ಹೋಗುವಾಗ ಇಸ್ರೇಲಿ ಸೇನೆಯ ನಿಯಂತ್ರಣದ ಪ್ರದೇಶಗಳನ್ನು ಗುರುತಿಸುವ “ಹಳದಿ ಗೆರೆ” ದಾಟಿದ ಆರೋಪದ ಮೇಲೆ ನಾಗರಿಕರು ಇದ್ದ ಬಸ್ ಮೇಲೆ ದಾಳಿ ನಡೆಸಲಾಗಿದೆ ಎಂದು ಗಾಜಾದ ನಾಗರಿಕ ರಕ್ಷಣಾ ಸಂಸ್ಥೆ ತಿಳಿಸಿದೆ.
“ನಾಗರಿಕರು ಇಸ್ರೇಲಿ ಸೇನೆಯು ಉಲ್ಲೇಖಿಸಿರುವ ಕಾಲ್ಪನಿಕ ಗಡಿಯಾದ ‘ಹಳದಿ ಗೆರೆ‘ ಎಂದು ಕರೆಯಲ್ಪಡುವದನ್ನು ದಾಟಿದ್ದಾರೆ” ಎಂದು ಗಾಜಾ ನಾಗರಿಕ ರಕ್ಷಣಾ ವಕ್ತಾರ ಮಹಮೂದ್ ಬಸಲ್ ಹೇಳಿದ್ದಾರೆ. “ನೆಲದ ಮೇಲೆ ನಿಜವಾದ ಭೌತಿಕ ಗುರುತುಗಳಿಲ್ಲದ ಕಾರಣ ಜನರು ಹಳದಿ ಮತ್ತು ಕೆಂಪು ರೇಖೆಗಳ ನಡುವೆ ವ್ಯತ್ಯಾಸವನ್ನು ಗುರುತಿಸಲು ಸಾಧ್ಯವಿಲ್ಲ ಎಂದು ನನಗೆ ಖಚಿತವಾಗಿದೆ. ಬಲಿಯಾದವರಲ್ಲಿ ಏಳು ಮಕ್ಕಳು ಮತ್ತು ಮೂವರು ಮಹಿಳೆಯರು ಸೇರಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಅನುಮಾನಾಸ್ಪದ ವಾಹನವು ಹಳದಿ ರೇಖೆಯನ್ನು ದಾಟಿ ಉತ್ತರ ಗಾಜಾ ಪಟ್ಟಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇಸ್ರೇಲ್ ಪಡೆಗಳನ್ನು ಸಮೀಪಿಸಿತು. ಇಸ್ರೇಲ್ ಸೇನೆಯು ಅನುಮಾನಾಸ್ಪದ ವಾಹನದ ಕಡೆಗೆ ಎಚ್ಚರಿಕೆಯ ಗುಂಡುಗಳನ್ನು ಹಾರಿಸಿತು. ಆದರೂ, ವಾಹನವು ಸೈನಿಕರ ಬಳಿಗೆ ಹೋಗುವುದನ್ನು ಮುಂದುವರೆಸಿತ್ತು ಎಂದು ಇಸ್ರೇಲ್ ರಕ್ಷಣಾ ಪಡೆ(ಐಡಿಎಫ್) ತಿಳಿಸಿದೆ.
ಸತ್ತ ಒತ್ತೆಯಾಳುಗಳ ಅವಶೇಷಗಳನ್ನು ಹಿಂದಿರುಗಿಸಲು ವಿಫಲವಾದ ಮೂಲಕ ಉಗ್ರಗಾಮಿ ಗುಂಪು ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಇಸ್ರೇಲ್ ಆರೋಪಿಸಿದೆ. ಸೋಮವಾರ, ಹಮಾಸ್ ಉಳಿದಿರುವ ಕೊನೆಯ 20 ಒತ್ತೆಯಾಳುಗಳನ್ನು ಹಿಂದಿರುಗಿಸಿತು. ಆದರೆ ಶನಿವಾರ ಸಂಜೆಯ ಹೊತ್ತಿಗೆ ಸತ್ತ 28 ಸೆರೆಯಾಳುಗಳಲ್ಲಿ 12 ಜನರನ್ನು ಮಾತ್ರ ಮರಳಿ ಹಸ್ತಾಂತರಿಸಿದೆ.
ಅವಶೇಷಗಳಡಿಯಲ್ಲಿ ಮೃತದೇಹಗಳನ್ನು ಹುಡುಕಲು ಟರ್ಕಿ ಹತ್ತಾರು ವಿಪತ್ತು ಪರಿಹಾರ ತಜ್ಞರನ್ನು ನಿಯೋಜಿಸಿದೆ. ಗಾಜಾದ ಆರೋಗ್ಯ ಸಚಿವಾಲಯದ ಪ್ರಕಾರ, ಪ್ಯಾಲೇಸ್ಟಿನಿಯನ್ ಸಾವಿನ ಸಂಖ್ಯೆ ಈಗ 68,000 ಕ್ಕಿಂತ ಹೆಚ್ಚಿದೆ.
ಸುಮಾರು 10,000 ಜನರ ದೇಹಗಳು ಅವಶೇಷಗಳು ಮತ್ತು ಕುಸಿದ ಕಟ್ಟಡಗಳ ಅಡಿಯಲ್ಲಿ ಸಿಲುಕಿಕೊಂಡಿವೆ ಎಂದು ಗಾಜಾದ ನಾಗರಿಕ ರಕ್ಷಣಾ ಸಂಸ್ಥೆ ಅಂದಾಜಿಸಿದೆ. ಭೂಪ್ರದೇಶದಾದ್ಯಂತ ಅಂದಾಜು 60 ಮೀ. ಟನ್‌ನಷ್ಟು ಅವಶೇಷಗಳಿರುವುದರಿಂದ ರಕ್ಷಕರ ಕಾರ್ಯವು ಅಪಾರವಾಗಿದೆ.
ಇಸ್ರೇಲ್ ಶನಿವಾರ ಇನ್ನೂ 15 ಪ್ಯಾಲೆಸ್ಟೀನಿಯರ ಶವಗಳನ್ನು ಗಾಜಾಕ್ಕೆ ಹಿಂದಿರುಗಿಸಿದೆ, ಒಟ್ಟು ಸಂಖ್ಯೆಯನ್ನು 135 ಕ್ಕೆ ತಲುಪಿಸಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಖಾನ್ ಯೂನಿಸ್‌ನಲ್ಲಿರುವ ನಾಸರ್ ಆಸ್ಪತ್ರೆಯ ವೈದ್ಯರ ಪ್ರಕಾರ ದೇಹಗಳು ಚಿತ್ರಹಿಂಸೆ ಮತ್ತು ಮರಣದಂಡನೆಯನ್ನು ಅನುಭವಿಸಿವೆ. ಕಣ್ಣುಮುಚ್ಚಿ, ಕೈಗಳನ್ನು ಕಟ್ಟಿಹಾಕಿದ ಕೈಗಳು ಮತ್ತು ತಲೆಯಲ್ಲಿ ಗುಂಡಿನ ಗಾಯಗಳು ಸೇರಿವೆ ಎಂದು ತಿಳಿಸಿದೆ.
ಗಾಜಾಕ್ಕೆ ಮರಳಲು ಬಯಸುವ ಈಜಿಪ್ಟ್‌ನಲ್ಲಿ ವಾಸಿಸುವ ಪ್ಯಾಲೇಸ್ಟಿನಿಯನ್ ನಾಗರಿಕರು ಸೋಮವಾರದಿಂದ ಪ್ರಾರಂಭವಾಗುವ ರಫಾ ಕ್ರಾಸಿಂಗ್ ಮೂಲಕ ಪ್ರಯಾಣಿಸಲು ಸಾಧ್ಯವಾಗುತ್ತದೆ ಎಂದು ಈಜಿಪ್ಟ್‌ನಲ್ಲಿರುವ ಪ್ಯಾಲೇಸ್ಟಿನಿಯನ್ ರಾಯಭಾರ ಕಚೇರಿ ಶನಿವಾರ ಪ್ರಕಟಿಸಿದೆ.


