ನವದೆಹಲಿ: 2026-27ನೇ ಹಣಕಾಸು ವರ್ಷದಲ್ಲಿ ಇದುವರೆಗೆ ದೇಶದ ನೇರ ತೆರಿಗೆ ಸಂಗ್ರಹ ₹8.11 ಲಕ್ಷ ಕೋಟಿಗೂ ಅಧಿಕವಾಗಿದೆ. ಕಳೆದ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದರೆ ನೇರ ತೆರಿಗೆ ಸಂಗ್ರಹದಲ್ಲಿ ಶೇ.23.09ರಷ್ಟು ಏರಿಕೆ ದಾಖಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.
ಈ ಅಂಕಿಅಂಶಗಳು ಆಗಸ್ಟ್ 10ರವರೆಗಿನ ತೆರಿಗೆ ಸಂಗ್ರಹವನ್ನು ಒಳಗೊಂಡಿವೆ.
₹2.70 ಲಕ್ಷ ಕೋಟಿ ಕಾರ್ಪೊರೇಟ್ ತೆರಿಗೆ
ಒಟ್ಟು ನಿವ್ವಳ ನೇರ ತೆರಿಗೆ ಸಂಗ್ರಹದಲ್ಲಿ ₹2.70 ಲಕ್ಷ ಕೋಟಿಗೂ ಅಧಿಕ ಕಾರ್ಪೊರೇಟ್ ತೆರಿಗೆ ಸೇರಿದೆ. ಇದೇ ವೇಳೆ, ₹5.07 ಲಕ್ಷ ಕೋಟಿಗೂ ಅಧಿಕ ನಾನ್-ಕಾರ್ಪೊರೇಟ್ ತೆರಿಗೆ ಸಂಗ್ರಹವಾಗಿದೆ.
ತೆರಿಗೆ ಸಂಗ್ರಹದ ನಿರಂತರ ಏರಿಕೆಯು ದೇಶದ ಆದಾಯ ಸಂಗ್ರಹ ವ್ಯವಸ್ಥೆಯಲ್ಲಿನ ಉತ್ತಮ ಬೆಳವಣಿಗೆಯನ್ನು ಪ್ರತಿಬಿಂಬಿಸಿದೆ.
₹1.43 ಲಕ್ಷ ಕೋಟಿಗೂ ಅಧಿಕ ಮರುಪಾವತಿ
ತೆರಿಗೆದಾರರಿಗೆ ಆದಾಯ ತೆರಿಗೆ ಇಲಾಖೆ ಈ ಅವಧಿಯಲ್ಲಿ ₹1.43 ಲಕ್ಷ ಕೋಟಿಗೂ ಅಧಿಕ ಮೊತ್ತವನ್ನು ಮರುಪಾವತಿ (Refund) ಮಾಡಿದೆ.
ಇದೇ ವೇಳೆ, ಒಟ್ಟು (Gross) ನೇರ ತೆರಿಗೆ ಸಂಗ್ರಹದಲ್ಲೂ ಗಮನಾರ್ಹ ಬೆಳವಣಿಗೆ ದಾಖಲಾಗಿದ್ದು, ಶೇ.19ಕ್ಕೂ ಅಧಿಕ ಏರಿಕೆಯೊಂದಿಗೆ ₹9.54 ಲಕ್ಷ ಕೋಟಿಗೂ ಮೀರಿದೆ.


