ವಾರದ ಕೊನೆಯ ದಿನ ಷೇರುಪೇಟೆಗೆ ಸಣ್ಣ ಹೊಡೆತ: ಸೆನ್ಸೆಕ್ಸ್ 71, ನಿಫ್ಟಿ 30 ಅಂಕ ಕುಸಿತ

0 Min Read
0 Min Read

ಮುಂಬೈ: ವಾರದ ಕೊನೆಯ ವಹಿವಾಟಿನ ದಿನವಾದ ಇಂದು ದೇಶೀಯ ಷೇರು ಮಾರುಕಟ್ಟೆ ಸೂಚ್ಯಂಕಗಳು ಸಣ್ಣ ಪ್ರಮಾಣದ ಕುಸಿತದೊಂದಿಗೆ ವಹಿವಾಟು ಅಂತ್ಯಗೊಳಿಸಿವೆ.

ಬಿಎಸ್‌ಇ ಸೆನ್ಸೆಕ್ಸ್ 71 ಅಂಕ ಕುಸಿದು 78,009ಕ್ಕೆ ತಲುಪಿ ದಿನದ ವಹಿವಾಟು ಮುಗಿಸಿತು. ಇದೇ ವೇಳೆ ಎನ್‌ಎಸ್‌ಇ ನಿಫ್ಟಿ 30 ಅಂಕ ಇಳಿದು 24,366ಕ್ಕೆ ಸ್ಥಿರವಾಯಿತು.

ವಿಶಾಲ ಮಾರುಕಟ್ಟೆಯಲ್ಲಿಯೂ ಮಾರಾಟದ ಒತ್ತಡ ಮುಂದುವರಿಯಿತು. ನಿಫ್ಟಿ ಮಿಡ್‌ಕ್ಯಾಪ್ 100 ಸೂಚ್ಯಂಕ ಶೇ.0.5ರಷ್ಟು ಕುಸಿದರೆ, ನಿಫ್ಟಿ ಸ್ಮಾಲ್‌ಕ್ಯಾಪ್ 100 ಸೂಚ್ಯಂಕ ಶೇ.0.7ರಷ್ಟು ಇಳಿಕೆ ಕಂಡಿತು.

Share This Article