ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ದಲಿತ ಮಕ್ಕಳಿಗೆ ಪ್ರವೇಶ ನೀಡಿ: ಸರ್ಕಾರಕ್ಕೆ ಡಿ.ಎಚ್.ಎಸ್ ರಾಜ್ಯ ಕಾರ್ಯದರ್ಶಿ ರಾಜು ವೆಂಕಟಪ್ಪ ಒತ್ತಾಯ

2 Min Read
2 Min Read

ತುಮಕೂರು: ಜನವರಿ 27 2026
ಜಿಲ್ಲೆಯಲ್ಲಿರುವ ಪ್ರತಿಷ್ಠಿತ ವಸತಿ ಮತ್ತು ವಸತಿಯೇತರ ಶಾಲೆಗಳಿಗೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ಆಯ್ಕೆ ಸಮಿತಿಯನ್ನು ನೇಮಿಸಲು ದಲಿತ ಹಕ್ಕುಗಳ ಸಮಿತಿ ತುಮಕೂರು ಜಿಲ್ಲಾಧ್ಯಕ್ಷರಾದ ರಾಜು ವೆಂಕಟಪ್ಪ ಒತ್ತಾಯಿಸಿದ್ದಾರೆ.

ತಾಲೂಕಿಗೊಂದು ಪ್ರತಿಷ್ಠಿತ ಖಾಸಗಿ ಶಾಲೆಯನ್ನು ಆಯ್ಕೆ ಮಾಡಿ ಶಾಲಾ ಮತ್ತು ನಿರ್ವಹಣೆ ವೆಚ್ಚವನ್ನು ಮಂಜೂರು ಮಾಡಲು ಆದೇಶವನ್ನು ಪರಿಷ್ಕರಿಸಿ ಹೊಸ ಮಾರ್ಗಸೂಚಿಯನ್ನು ಕರ್ನಾಟಕ ಸರ್ಕಾರವು 2007ರಲ್ಲಿ ಸೇರ್ಪಡೆ ಮಾಡಿ ಆದೇಶಿಸಿದೆ. ಅದರ ಆದೇಶದ ಅನ್ವಯ 2007-2008 ನೇ ಆಯವ್ಯಯ ಭಾಷಣದ ಘೋಷಣೆಯಂತೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಸೇರಿದ 1000 ಅರ್ಹ ವಿದ್ಯಾರ್ಥಿಗಳಿಗೆ ಆಯ್ಕೆ ಸಮಿತಿಯನ್ನು ನೇಮಿಸಲು ಮತ್ತು ಆಯಾ ಜಿಲ್ಲೆಗಳಿಗೆ ಗುರಿಯನ್ನು ನಿಗದಿಪಡಿಸಲು ಆದೇಶಿಸಲಾಗಿದೆ. ಆದರೆ ಇದುವರೆಗೂ ಜಿಲ್ಲೆಯಾಗಲಿ ಅಥವಾ ಜಿಲ್ಲೆಯ ಯಾವುದೇ ತಾಲ್ಲೂಕಿನಲ್ಲಾಗಲೀ ಈ ಬಗ್ಗೆ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ ಮತ್ತು ಅದರ ಕಡೆ ಗಮನವನ್ನು ಹರಿಸಿಲ್ಲ.

ಅಧಿಕಾರಿಗಳ ಮತ್ತು ಇಲಾಖೆಯ ಈ ಬೇಜವಾಬ್ದಾರಿತನದ ನಡೆಯಿಂದ ಮತ್ತು ದಲಿತ ವಿರೋಧಿ ಧೋರಣೆಯಿಂದ ಸಮಾಜದ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಯಲ್ಲಿರುವ ಬಡವರ ಮಕ್ಕಳು ಪ್ರತಿಷ್ಠಿತ ಶಾಲೆಯಲ್ಲಿ ಓದಲು ಯಾವುದೇ ಅವಕಾಶಗಳಿಲ್ಲದೆ ವಂಚಿತರಾಗುತ್ತಿದ್ದಾರೆ. ಕೇವಲ ರಾಜಕಾರಣಿಗಳು ಮತ್ತು ಅವರ ಹಿಂಬಾಲಕರು ಹಲವಾರು ವಿದ್ಯಾಸಂಸ್ಥೆಗಳನ್ನು ಕಟ್ಟಿಕೊಂಡು ಸಾವಿರಾರು ರೂಪಾಯಿಗಳು ಡೊನೇಷನ್ ಪಡೆದು ಶ್ರೀಮಂತರಾಗುತ್ತಿದ್ದಾರೆ ಹೊರತು ಯಾವುದೇ ಬಡವರ ಮಕ್ಕಳು ಪ್ರತಿಷ್ಠಿತ ಶಾಲೆಗಳಲ್ಲಿ ಕಲಿಯುವ ಅವಕಾಶವಿಲ್ಲ.

ಕೇವಲ ಸಿರಿವಂತರೂ ಹಣವಂತರು ಬಲಾಢ್ಯರ ಮಕ್ಕಳು ಮಾತ್ರ ಸಾವಿರಾರು ರೂಪಾಯಿಗಳ ಖರ್ಚು ಮಾಡಿ ಪ್ರತಿಷ್ಠಿತ ಶಾಲೆಗಳಲ್ಲಿ ಓದುತ್ತಿದ್ದಾರೆ, ತಮ್ಮ ಮಕ್ಕಳೂ ಸಹ ಉತ್ತಮ ಸುಸಜ್ಜಿತ ಶಾಲೆಗಳಲ್ಲಿ ಓದಿ ವಿದ್ಯಾವಂತರಾಗಲಿ ಎಂದು ಕನಸು ಕಟ್ಟಿಕೊಂಡಿರುವ ಅದೆಷ್ಟೋ ಮಂದಿ ತಳ ಸಮುದಾಯದ ಕನಸು ಕಮರಿ ಹೋಗಿದೆ, ಖಾಸಗಿ ಶಾಲೆಗಳ ದುಬಾರಿ ವೆಚ್ಚ ಭರಿಸಲಾಗಿದೆ ನಲುಗುತ್ತಿದ್ದಾರೆ, ದಲಿತರನ್ನು ಉದ್ದಾರ ಮಾಡಲೇ ನಾವಿರುವುದು ಎಂದು ಉದ್ದುದ್ದ ಭಾಷಣ ಬಿಗಿಯುವ ಸರ್ಕಾರಗಳು ಮತ್ತು ರಾಜಕಾರಣಿಗಳು ಆದೇಶಗಳನ್ನು ಕೇವಲ ನಾಮಕವಸ್ತಗೆ ಆಯವ್ಯದ ಭಾಷಣಕ್ಕೆ ಸೀಮಿತವಾಗಿರಿಸದೆ ಬೇರು ಮಟ್ಟದಲ್ಲಿ ಅನುಷ್ಠಾನಗೊಳಿಸಿ ಅದನ್ನು ಊರ್ಜಿತಗೊಳಿಸಿದಾಗಲೇ ಯಾವುದೇ ಆದೇಶ ಅಥವಾ ಕಾಯ್ದೆ ಕಾರ್ಯರೂಪಕ್ಕೆ ಬಂದರೆ ಮಾತ್ರ ಅದರ ಫಲ ಸಮಾಜ ಮತ್ತೆ ದೇಶಕ್ಕೆ ದೊರೆಯುವುದು, ಹಾಗಾಗಿ ಪ್ರತಿಷ್ಠಿತ ಶಾಲೆಗಳಲ್ಲಿ ದಲಿತರ ಮಕ್ಕಳಿಗೆ ಅಥವಾ ಅವಕಾಶ ವಂಚಿತರ ಮಕ್ಕಳಿಗೆ ಪ್ರವೇಶ ಕಲ್ಪಿಸಲು ಸರ್ಕಾರ ನಡಾವಳಿಗಳನ್ನು ಕೂಡಲೇ ಅನುಷ್ಠಾನಗೊಳಿಸಬೇಕು ಮತ್ತು ಇದರ ಬಗ್ಗೆ ಸಂಬಂಧಪಟ್ಟ ಸಮಾಜ ಕಲ್ಯಾಣ ಇಲಾಖೆ ಮತ್ತು ಇತರೆ ಶಿಕ್ಷಣ ಇಲಾಖೆಗಳಿಗೆ ಸರ್ಕಾರ ಕಾನೂನು ಬದ್ಧ ಮಾರ್ಗಸೂಚಿಗಳನ್ನು ಹೊರಡಿಸಬೇಕೆಂದು ದಲಿತ ಹಕ್ಕುಗಳ ಸಮಿತಿ (ಡಿ.ಎಚ್.ಎಸ್) ಸಂಘಟನೆಯು ಈ ಮೂಲಕ ಆಗ್ರಹಿಸುತ್ತದೆ.
ಜಿಲ್ಲಾ ಸಮಿತಿ ಸದಸ್ಯರಾದ ಸತೀಶ್ ಬೆಳ್ಳಿಗೆರೆ, ಶ್ರೀನಿವಾಸ್ ಯಲಿಯೂರು, ರಾಜು ತುವ್ವೇಕೆರೆ, ಧನಂಜಯ ತೆರೇದಕುಪ್ಪೆ, ಗೋವಿಂದಪ್ಪ ಯಲಿಯೂರು, ಸಂತೋಷ್ ಉಜ್ಜನಿ, ಗಿರೀಶ್ ತರೀಕೆರೆ, ದೊಡ್ಡಮ್ಮ ತೊರೆಹಳ್ಳಿ, ಗೌರಮ್ಮ, ಶ್ರೀನಿವಾಸ್ ಉಜ್ಜನಿ, ನಾಗರಾಜು ಬಿಳಿ ದೇವಾಲಯ, ಬಾಲು ಕಾಮನಹಳ್ಳಿ, ಸೌಭಾಗ್ಯಮ್ಮ,‌ಶಾಂತಮ್ಮ‌ಬ್ಯಾಡರಹಳ್ಳಿ, ನಾಗರಾಜು ತುಮಕೂರು ಮತ್ತು ಸಮಿತಿ ಸದಸೊಯರು ಭಾಗವಹಿಸಿದ್ದರು.

Share This Article
Leave a Comment