ಮಹಿಳಾ ಕ್ರಿಕೆಟ್‌ನಲ್ಲಿ ಇಂದು (ಗುರುವಾರ) ಕೇರಳದ ತಿರುವನಂತಪುರಂನ ಗ್ರೀನ್‌ಫೀಲ್ಡ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಹಾಗೂ ಶ್ರೀಲಂಕಾ ತಂಡಗಳು ಐದನೇ ಹಾಗೂ ಅಂತಿಮ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಪಂದ್ಯವು ಸಂಜೆ 7 ಗಂಟೆಗೆ ಆರಂಭವಾಗಲಿದೆ.
ಹರ್ಮನ್‌ಪ್ರೀತ್ ಕೌರ್ ನಾಯಕತ್ವದ India women cricket team ಈಗಾಗಲೇ ಐದು ಪಂದ್ಯಗಳ ಸರಣಿಯಲ್ಲಿ 4–0 ಅಜೇಯ ಮುನ್ನಡೆ ಸಾಧಿಸಿದೆ. ಅಂತಿಮ ಪಂದ್ಯದಲ್ಲೂ ಜಯ ಸಾಧಿಸಿ ಸರಣಿಯನ್ನು ಸಂಪೂರ್ಣವಾಗಿ ಕ್ಲೀನ್‌ಸ್ವೀಪ್ ಮಾಡುವ ಗುರಿಯೊಂದಿಗೆ ತಂಡ ಮೈದಾನಕ್ಕಿಳಿಯಲಿದೆ.
ಭಾನುವಾರ ನಡೆದ ನಾಲ್ಕನೇ ಪಂದ್ಯದಲ್ಲಿ ಭಾರತ 222 ರನ್‌ಗಳ ಭಾರೀ ಗುರಿಯನ್ನು ಯಶಸ್ವಿಯಾಗಿ ರಕ್ಷಿಸಿಕೊಂಡು 30 ರನ್‌ಗಳ ಜಯ ದಾಖಲಿಸಿತ್ತು. ಆ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲೂ ಶಕ್ತಿಯುತ ಪ್ರದರ್ಶನ ಕಂಡುಬಂದಿತ್ತು.
ಇದಕ್ಕೂ ಮುನ್ನ ಸರಣಿಯ ಮೊದಲ ಮೂರು ಪಂದ್ಯಗಳಲ್ಲಿಯೂ ಭಾರತ ಆಲ್‌ರೌಂಡ್ ಆಟದ ಮೂಲಕ ಸ್ಪಷ್ಟ ಮೇಲುಗೈ ಸಾಧಿಸಿತ್ತು. ಆತಿಥೇಯರ ಎದುರು ಸಂಕಷ್ಟದಲ್ಲಿರುವ Sri Lanka women cricket team ಗೌರವಕ್ಕಾಗಿ ಈ ಪಂದ್ಯದಲ್ಲಿ ಗೆಲುವಿನ ಯತ್ನ ನಡೆಸಲಿದೆ.
ಕ್ರಿಕೆಟ್ ಅಭಿಮಾನಿಗಳ ದೃಷ್ಟಿ ಈಗ ಅಂತಿಮ ಟಿ20 ಪಂದ್ಯದ ಮೇಲೆ ನೆಟ್ಟಿದ್ದು, ಸರಣಿಗೆ ಭರ್ಜರಿ ತೆರೆ ಬೀಳುವ ನಿರೀಕ್ಷೆಯಿದೆ.


