ದೇವದಾಸಿ, ದಲಿತ ಮತ್ತು ಒಂಟಿ ಮಹಿಳೆಯರ ಹಕ್ಕಿಗಾಗಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅಹೋರಾತ್ರಿ ಧರಣಿ

1 Min Read
1 Min Read

ದಲಿತ ಹಕ್ಕುಗಳ ಸಮಿತಿ, ದೇವದಾಸಿ ಮಹಿಳೆಯರ ವಿಮೋಚನಾ ಸಂಘ, ಮಸಣ ಕಾರ್ಮಿಕರ ಸಂಘ, ಒಂಟಿ ಮಹಿಳೆಯರ ಸಂಘ ಹಾಗೂ ದೇವದಾಸಿ ಮಹಿಳೆಯರ ಮಕ್ಕಳ ಸಂಘಗಳು ಜಂಟಿಯಾಗಿ ಡಿಸೆಂಬರ್ 20ರಂದು ಸ್ವಾತಂತ್ರ್ಯ ಉದ್ಯಾನವನದಲ್ಲಿ ಅಹೋರಾತ್ರಿ ಪ್ರತಿಭಟನಾ ಧರಣಿಗೆ ಚಾಲನೆ ನೀಡಿದವು.

ಈ ಪ್ರತಿಭಟನೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಸಾವಿರಕ್ಕೂ ಅಧಿಕ ಕಾರ್ಯಕರ್ತರು ಮತ್ತು ಕಾರ್ಯಕರ್ತೆಯರು ಭಾಗವಹಿಸಿ, ತಮ್ಮ ಬಹುಕಾಲದ ಬೇಡಿಕೆಗಳು ಹಾಗೂ ಸಾಮಾಜಿಕ ಅನ್ಯಾಯಗಳ ವಿರುದ್ಧ ಧ್ವನಿ ಎತ್ತಿದರು. ಧರಣಿಯನ್ನು ಡಿಎಚ್‌ಎಸ್ ರಾಜ್ಯಾಧ್ಯಕ್ಷ ಗೋಪಾಲಕೃಷ್ಣ ಹರಳಹಳ್ಳಿ ಅವರು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಸಂಘಟನೆಯ ಗೌರವಾಧ್ಯಕ್ಷ ಯು. ಬಸವರಾಜ್ ಸೇರಿದಂತೆ ಮಾಳಮ್ಮ ಎನ್. ರಾಜಣ್ಣ, ಎ. ಸ್ವಾಮಿ, ಚಂದಮ್ಮ ಗೋಳ, ಹುಲಿಗೆಮ್ಮ, ಸುಧಾಮ ಧನ್ನಿ, ಬಾಲು ರಾಥೋಡ್, ಮಂಜುನಾಥ್ ಡಗ್ಗಿ, ಮಹೇಶ್ ಪತ್ತರ್, ಶ್ರೀದೇವಿ, ರಾಜಶೇಖರ್ ಮೂರ್ತಿ, ಬಸವರಾಜ್ ಪೂಜಾರ್, ಶಿವಪ್ಪ ಸೇರಿದಂತೆ ಹಲವು ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದು, ಪ್ರತಿಭಟನೆಗೆ ತಮ್ಮ ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು.

ಪ್ರತಿಭಟನಾ ಸ್ಥಳಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ವಸತಿ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ, ಪ್ರತಿಭಟನಾಕಾರರ ಮನವಿಯನ್ನು ಸ್ವೀಕರಿಸಿದರು. ಸಮಸ್ಯೆಗಳ ಪರಿಹಾರ ಕುರಿತು ಚರ್ಚೆ ನಡೆಸಲು ಸಂಬಂಧಿಸಿದ ಸಚಿವರೊಂದಿಗೆ ನಿಯೋಗಕ್ಕೆ ಅವಕಾಶ ಕಲ್ಪಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.

Share This Article
Leave a Comment