ವಿಶ್ವದ ಚೆಸ್ ಕಣವನ್ನು ಮಿರಿದ ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್ ಅರ್ಜುನ್ ಎರಿಗೈಸಿ, ಯೆರೂಸಲೇಮ್ ಮಾಸ್ಟರ್ಸ್ 2025ರ ಚಾಂಪಿಯನ್ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ಮಾಜಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಅನಂದ್ ಅವರನ್ನು ಅಂತಿಮ ಪಂದ್ಯದಲ್ಲಿ ಮಣಿಸಿ ಅರ್ಜುನ್ ಇತಿಹಾಸ ನಿರ್ಮಿಸಿದ್ದಾರೆ.
ವೇಗದ ಚೆಸ್ ಪಂದ್ಯಗಳಲ್ಲಿ ಬಿಗಿಯಾಗಿ ಹೋರಾಟ ನಡೆದಿದ್ದು, ರ್ಯಾಪಿಡ್ ಗೇಮ್ಸ್ ಸಮಬಲವಾಗಿ ಅಂತ್ಯವಾಯಿತು. ನಂತರ ಟೈ-ಬ್ರೇಕ್ ಬ್ಲಿಟ್ಜ್ ಪಂದ್ಯದಲ್ಲಿ ಅದ್ಭುತ ಆಟ ಪ್ರದರ್ಶಿಸಿದ ಅರ್ಜುನ್ ಜಯಶಾಲಿಯಾಗಿದರು.
ಇದಕ್ಕೂ ಮೊದಲು, ಅರ್ಜುನ್ ರಷ್ಯಾದ ಪೀಟರ್ ಸ್ವಿಡ್‌ಲರ್ ಅವರನ್ನು ಸೆಮಿಫೈನಲ್‌ನಲ್ಲಿ ಪರಾಭವಗೊಳಿಸಿದ್ದರು. ಇನ್ನೊಂದೆಡೆ, ಅನಂದ್ ಪ್ರಸ್ತುತ ವಿಶ್ವ ಬ್ಲಿಟ್ಜ್ ಚಾಂಪಿಯನ್ ಇಯಾನ್ ನೆಪೋಮ್ನ್ಯಾಶ್ಚಿ ವಿರುದ್ಧ ಗೆಲುವು ದಾಖಲಿಸಿದ್ದರು.
ಭಾರತದ ಎರಡು ತಲೆಮಾರುಗಳು ಮುಖಾಮುಖಿಯಾದ ಈ ಫೈನಲ್ ಚೆಸ್ ಅಭಿಮಾನಿಗಳಿಗೆ ಅಪಾರ ರೋಚಕತೆಯನ್ನು ನೀಡಿತು.


