ಚಲನಚಿತ್ರ ಲೋಕದ ಬಹುಕಾಲದ ನಿರೀಕ್ಷೆಯಾಗಿದ್ದ ‘ಅಖಂಡ 2’ ಬಿಡುಗಡೆ ಕೊನೆಯ ಕ್ಷಣದಲ್ಲಿ ಮುಂದೂಡಲಾಗಿದೆ. ನಿರ್ಮಾಪಕ ಸಂಸ್ಥೆ 14 ರೀಲ್ಸ್ ಎಂಟರ್‌ಟೈನ್‌ಮೆಂಟ್ ಮತ್ತು ಇತರ ಪಕ್ಷಗಳ ನಡುವಿನ ಕಾನೂನು ವಿವಾದ ಹಿನ್ನೆಲೆ, ಮದ್ರಾಸ್ ಹೈಕೋರ್ಟ್ ಚಿತ್ರ ಬಿಡುಗಡೆಗೆ ತಾತ್ಕಾಲಿಕ ತಡೆ ನೀಡಿತ್ತು. ಭಾರತದಲ್ಲಿ ಬಿಡುಗಡೆಗೆ ಕೆಲವೇ ಗಂಟೆಗಳು ಬಾಕಿ ಇದ್ದಾಗಲೇ ಚಿತ್ರ ತಂಡ ಅಧಿಕೃತವಾಗಿ ಪ್ರಕಟಣೆ ಹೊರಡಿಸಿದೆ.
ಅಧಿಕೃತ X (Twitter)ನಲ್ಲಿ ಚಿತ್ರ ತಂಡ ಹೀಗೆ ತಿಳಿಸಿದೆ:
“ನಮ್ಮ ಮನಸ್ಸಿಗೆ ನೋವುಂಟುಮಾಡುವ ಈ ನಿರ್ಧಾರವನ್ನು ತಿಳಿಸಲು ವಿಷಾಧಿಸುತ್ತೇವೆ. ಅನಿವಾರ್ಯ ಕಾರಣಗಳಿಂದಾಗಿ ‘ಅಖಂಡ 2’ ನಿಗದಿತ ದಿನಾಂಕದಲ್ಲಿ ಬಿಡುಗಡೆಯಾಗುವುದಿಲ್ಲ. ಈ ಸುದ್ದಿ ಅಭಿಮಾನಿಗಳು ಮತ್ತು ಚಿತ್ರಪ್ರೇಮಿಗಳಿಗೆ ನಿರಾಶೆ ತರಲಿದೆ ಎಂಬುದು ನಮಗೆ ತಿಳಿದಿದೆ. ಸಮಸ್ಯೆಯನ್ನು ಶೀಘ್ರದಲ್ಲಿ ಬಗೆಹರಿಸಲು ನಾವು ಶ್ರಮಿಸುತ್ತಿದ್ದೇವೆ. ಅನಾನುಕೂಲಕ್ಕೆ ಕ್ಷಮೆಯಿರಲಿ.”
ಹೊಸ ಬಿಡುಗಡೆಯ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ. ಆದರೆ “ತ್ವರಿತದಲ್ಲೇ ಉತ್ತಮ ಸುದ್ದಿ ನೀಡುತ್ತೇವೆ, ನಿಮ್ಮ ಬೆಂಬಲವೇ ನಮ್ಮ ಶಕ್ತಿ” ಎಂದು ತಂಡ ಅಭಿಮಾನಿಗಳಿಗೆ ಭರವಸೆ ನೀಡಿದೆ.
ಈ ಮುಂದೂಡಿಕೆ ಮುಂದಿನ ಕೆಲವು ವಾರಗಳಲ್ಲಿ ಬಿಡುಗಡೆಯಾಗಲು ಕಾಯುತ್ತಿರುವ ದೊಡ್ಡ ಚಿತ್ರಗಳ ವೇಳಾಪಟ್ಟಿಗೂ ಪರಿಣಾಮ ಬೀರಲಿದೆ ಎಂದು ಟ್ರೇಡ್ ವಲಯ ಅಂದಾಜು ಮಾಡುತ್ತಿದೆ.


