ಬೆಂಗಳೂರು, —
ಕರ್ನಾಟಕ ಕಾಂಗ್ರೆಸ್ ಒಳಗಿರುವ ನಾಯಕತ್ವದ ಜಂಜಾಟಗಳ ನಡುವೆ, ಈಗ ಹೊಸ ಚರ್ಚೆಗೆ ದಿಕ್ಕು ತೋರಿಸುತ್ತಿರುವ ಹೆಸರು ಒಂದೇ — ಡಾ. ಜಿ. ಪರಮೇಶ್ವರ್. ದಲಿತ ಸಮುದಾಯದ ಸಶಕ್ತ ಮುಖ, ದಶಕಗಳ ನಿರಂತರ ಹೋರಾಟ, ಹಾಗೂ ಸಂಘಟನೆಗೆ ನಿಷ್ಠಾವಂತ ಸೇವೆ—ಈ ಎಲ್ಲದರಲ್ಲಿ ಅವರು ಪಕ್ಷದ ನೈಜ ನಾಯಕತ್ವಕ್ಕೆ ಅರ್ಹ ಎನಿಸಿಕೊಳ್ಳುತ್ತಾರೆ ಎಂಬ ಅಭಿಪ್ರಾಯ ತೀವ್ರವಾಗಿದೆ.
🔹DK ಶಿವಕುಮಾರ್–ಸಿದ್ದರಾಮಯ್ಯ ವಲಯಗಳೊಳಗಿನ ನಿರಂತರ ಒಳಜಗಳ… ಸಮತೋಲನಕ್ಕೆ ಪರಮೇಶ್ವರ್?
ರಾಜ್ಯ ರಾಜಕೀಯದಲ್ಲಿ ಬಹುಕಾಲದಿಂದ ಕಾಣಿಸಿಕೊಳ್ಳುತ್ತಿರುವ ಸಮಸ್ಯೆ ಎಂದರೆ, DK ಶಿವಕುಮಾರ್ ಮತ್ತು ಸಿದ್ದರಾಮಯ್ಯ ಬಣಗಳ ಮಧ್ಯದ ಮುಸುಕು ಸಂಘರ್ಷ. ಪಕ್ಷದ ಒಳಗಿನ ಈ ಗುಂಪುಗಾರಿಕೆ, ಆಡಳಿತದಲ್ಲಿ ಸ್ಥಿರತೆಯ ಕೊರತೆ ಮೂಡಿಸುತ್ತಿದೆ ಎನ್ನುವುದು ಜನ ಸಾಮಾನ್ಯರ ಅಭಿಪ್ರಾಯ.
ಇದಕ್ಕೆ ಪರಿಹಾರವೆಂದರೆ —
“ತಟಸ್ಥ, ಅನುಭವೀ ಮತ್ತು ಎಲ್ಲಾ ಬಣಗಳಿಗೂ ಒಪ್ಪಿಗೆಯಾಗಬಲ್ಲ ನಾಯಕ”, ಅಂದರೆ ಡಾ. ಜಿ ಪರಮೇಶ್ವರ್ ಎನ್ನುವುದು ರಾಜಕೀಯ ವಲಯದ ಮಾತು.
🔹ದಲಿತರಿಗೆ ಬೆಂಬಲ ನೀಡುವೆವು ಎಂಬ ಕಾಂಗ್ರೆಸ್ ಹೈ ಕಮಾಂಡ್ ಹೇಳಿಕೆಗೆ ವ್ಯತಿರಿಕ್ತವಾಗಿ… ಪರಮೇಶ್ವರ್ ಕಡೆ ಗಮನವೇ ಇಲ್ಲ?
ಕಾಂಗ್ರೆಸ್ ಯಾವಾಗಲೂ ದಲಿತ–ಪರ, ಅಲ್ಪಸಂಖ್ಯಾತ–ಪರ ಎಂದು ಘೋಷಿಸುತ್ತ ಬಂದಿರುವುದು ಎಲ್ಲರಿಗೂ ಗೊತ್ತಿದೆ. ಆದರೆ, ಪಕ್ಷದೊಳಗೆ ಈ ವಿಚಾರವಾಗಿ
ಚರ್ಚೆ ಇಲ್ಲ
ವಿಮರ್ಷೆ ಇಲ್ಲ
ಪರಿಗಣನೆ ಕೂಡ ಇಲ್ಲ
ಎಂಬಂತೆ ಆರೋಪಗಳು ಕೇಳಿಬರುತ್ತಿವೆ.
“ದಲಿತರಿಗೆ ಬೆಂಬಲ” ಎನ್ನುವ ಘೋಷಣೆ ನಿಜವಾಗಬೇಕಾದರೆ, ದಲಿತ ಸಮುದಾಯದ ಅತ್ಯಂತ ಹಿರಿಯ ನಾಯಕ ಡಾ. ಜಿ ಪರಮೇಶ್ವರರಿಗೆ ಅವಕಾಶ ನೀಡುವುದು ಸೂಕ್ತ” ಎಂದು ರಾಜಕೀಯ ವಲಯದಲ್ಲಿ ಚರ್ಚೆ ಚಿಗುರೊಡೆಯುತ್ತಿದೆ. ವಿಶೇಷವಾಗಿ ಹೇಳಬೇಕೆಂದರೆ ಕರ್ನಾಟಕದಲ್ಲಿ ಬಹುಕಾಲ ಕಾಂಗ್ರೆಸ್ ಪಕ್ಷವನ್ನು ಪ್ರಾಮಾಣಿಕವಾಗಿ ನಿಷ್ಠೆಯಿಂದ ಮುನ್ನೆಡೆಸಿದವರಲ್ಲಿ ದಲಿತ ನಾಯಕರೇ ಮುಂಚೂಣಿಯಲ್ಲಿದ್ದಾರೆ ಉದಾರಣೆಗೆ ಈ ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ಪಕ್ಷದ ಅಧ್ಯಕ್ಷಸ್ಥಾನವನ್ನು ಅಲಂಕರಿಸಿ ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾದರು ಮುಖ್ಯಮಂತ್ರಿ ಸ್ಥಾನವನ್ನು ಕಡೆಗಣಿಸಲಾಯಿತು ಈಗ ಪರಮೇಶ್ವರವರಿಗೂ ಅದೇ ದಲಿತ ವಿರೋಧಿ ಕಾಂಗ್ರೆಸ್ ಚಾಳಿ, ಇದೇ ರೀತಿ ದಲಿತ ವಿರೋಧಿ ನೀತಿ ಮುಂದುವರೆದರೇ ರಾಜ್ಯದಲ್ಲಿ ಕಾಂಗ್ರೆಸ್ಗೇ ಬಿಹಾರದ ಪರಿಸ್ಥಿತಿ ಉಂಟಾಗುತ್ತಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತಿದ್ದಾರೆ.
🔹ಪಕ್ಷದ ಸಂಘಟನೆಯನ್ನು ನಿಲ್ಲಿಸಿ ಹಿಡಿದ ನಾಯಕ—ಪರಮೇಶ್ವರ ಯಾಕೆ ಸೂಕ್ತ?
8 ವರ್ಷಗಳ KPCC ಅಧ್ಯಕ್ಷತೆ
ಗೃಹ ಸಚಿವ, ಉಪಮುಖ್ಯಮಂತ್ರಿ ಅನುಭವ
ಎಲ್ಲ ಬಣಗಳೊಂದಿಗೆ ಸಮನ್ವಯ ಸಾಧಿಸುವ ಸ್ವಭಾವ
ದಲಿತ ಸಮುದಾಯದ ಅತಿ ಬಲವಾದ ಮುಖ
ಹೋರಾಟ, ಸಂಘಟನೆ, ನಿಷ್ಠೆ—ಮೂರು ಕ್ಷೇತ್ರಗಳಲ್ಲೂ ಸಾಬೀತಾದ ನಾಯಕತ್ವ ಇವುಗಳೆಲ್ಲ ಅವರನ್ನು ಮುಂದಿನ CM ಸ್ಥಾನಕ್ಕೆ ನೈಜ ಸ್ಪರ್ಧಿಯಾಗಿ ತೋರಿಸುತ್ತಿವೆ.


