IFFI 2025: ‘ಪ್ರತಿ ಜನ್ಮದಲ್ಲೂ ನಟನೇ ಆಗುತ್ತೇನೆ’ — ಜೀವನ ಸಾಧನೆ ಪ್ರಶಸ್ತಿ ಪಡೆದ ರಜನಿಕಾಂತ್ ಭಾವುಕ

2 Min Read
2 Min Read

ಪಣಜಿ, ಗೋವಾ:
ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಸಿನಿರಂಗದಲ್ಲಿ ಅಜೇಯ ನಕ್ಷತ್ರವಾಗಿ ಬೆಳಗುತ್ತಿರುವ ಸೂಪರ್‌ಸ್ಟಾರ್ ರಜನಿಕಾಂತ್ ಅವರಿಗೆ ಗೋವಾದಲ್ಲಿ ನಡೆದ 56ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (IFFI)–2025 ರ ಸಮಾರೋಪ ಸಮಾರಂಭದಲ್ಲಿ ಪ್ರತಿಷ್ಠಿತ ಜೀವನ ಸಾಧನೆ ಪ್ರಶಸ್ತಿ ಪ್ರದಾನ ಮಾಡಲಾಯಿತು. 74 ವರ್ಷದ ರಜನಿಕಾಂತ್ ಅವರು ಪತ್ನಿ ಲತಾ, ಪುತ್ರಿಯರಾದ ಐಶ್ವರ್ಯಾ ಮತ್ತು ಸೌಂದರ್ಯಾ ಜೊತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಅಭಿಮಾನಿಗಳಿಂದ ಭರ್ಜರಿ ಸ್ವಾಗತ ಪಡೆದರು.

ಕಾರ್ಯಕ್ರಮದಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೊದ್ ಸಾವಂತ್ ಅವರು ರಾಜನಿಗೆ ಶಾಲ್‌ ಹಾಗೂ ಸ್ಮಾರಕ ನೀಡಿ ಗೌರವಿಸಿದರು. ವೇದಿಕೆಯಲ್ಲಿ ಮನಮುಟ್ಟುವ ಭಾಷಣ ಮಾಡಿದ ರಜನಿಕಾಂತ್ ಅವರು ತಮ್ಮ ಯಶಸ್ಸಿನ 50 ವರ್ಷಗಳ ಪಯಣವನ್ನು ನೆನಪಿಸಿಕೊಂಡು ತುಂಬು ಮನಸ್ಸಿನಿಂದ ಮಾತನಾಡಿದರು.

ಹಿಂದೆ ತಿರುಗಿ ನೋಡಿದರೆ 10-15 ವರ್ಷಗಳಷ್ಟೇ ಅಭಿನಯ ಮಾಡಿದ್ದೇನೆ ಅನ್ನಿಸುತ್ತದೆ. ಸಿನೆಮಾಳ ಮೇಲಿನ ಪ್ರೀತಿ, ನಟನೆಯ ಮೇಲಿನ ಅಭಿಮಾನ ನನ್ನನ್ನು ಹೀಗೆ ತಾಜಾಗಿಯೇ ಇಡುತ್ತದೆ. ನೂರು ಜನ್ಮ ಬಂದರೂ ನಾನು ಮತ್ತೆ ನಟನಾಗಿಯೇ ಹುಟ್ಟುತ್ತೇನೆ, ರಜನಿಕಾಂತ್ ಆಗುತ್ತೇನೆ,” ಎಂದು ಅವರು ಭಾವುಕರಾಗಿ ಹೇಳಿದರು.

ಗೌರವ, ಮಾನ್ಯತೆಇವೆಲ್ಲವೂ ನನ್ನ ಸಿನೆಮಾ ಕುಟುಂಬದವರಿಗೂ, ಮುಖ್ಯವಾಗಿ ನನ್ನನ್ನು ಜೀವಂತವಾಗಿರಿಸಿದ ದೇವತೆಗಳಾದ ತಮಿಳು ಜನತೆಗೆ ಸಲ್ಲುತ್ತದೆ,” ಎಂದು ರಜನಿಕಾಂತ್ ಅಭಿಮಾನಿಗಳಿಗೆ ಕಣ್ಣೀರಿನ ಧ್ವನಿಯಲ್ಲಿ ಕೃತಜ್ಞತೆ ಸಲ್ಲಿಸಿದರು. ಅವರ ಭಾಷಣದ ಬಳಿಕ ಹಾಜರಿದ್ದವರೆಲ್ಲರೂ ನಿಂತು ಕೈತಟ್ಟಿದ ಕ್ಷಣ ವಿಶೇಷವಾಗಿ ಗಮನ ಸೆಳೆಯಿತು.

ಈ ಸಂದರ್ಭದಲ್ಲಿ ಮಾಹಿತಿ ಮತ್ತು ಪ್ರಸಾರ ರಾಜ್ಯ ಸಚಿವ ಡಾ. ಎಲ್. ಮುರುಗನ್, ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಸಂಜಯ್ ಜಾಜು, ನಟ ರಣವೀರ್ ಸಿಂಗ್ ಮೊದಲಾದ ಗಣ್ಯರು ವೇದಿಕೆಯಲ್ಲಿದ್ದರು.

🎬 ರಜನಿಕಾಂತ್ ಮುಂದಿನ ಚಿತ್ರಗಳುಅಭಿಮಾನಿಗಳಿಗೆ ಡಬಲ್ ಖುಷಿ

🔥 Jailor 2 — ಟೈಗರ್ ಮುತ್ತುವೇಲ್ ಪಾಂಡಿಯನ್ ಮತ್ತೆ ಸದ್ದು!

ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಬಹುನಿರೀಕ್ಷಿತ ಜೈಲರ್ 2 ಚಿತ್ರದಲ್ಲಿ ರಜನಿಕಾಂತ್ ಮತ್ತೆ ‘ಟೈಗರ್’ ಮುತ್ತುವೇಲ್ ಪಾಂಡಿಯನ್ ಆಗಿ ಮರಳುತ್ತಿದ್ದಾರೆ. ಮೊದಲ ಭಾಗದಲ್ಲಿ ಪತ್ನಿಯಾಗಿ ಕಾಣಿಸಿಕೊಂಡ ರಮ್ಯಾ ಕೃಷ್ಣನ್ ಮತ್ತೊಮ್ಮೆ ತಮ್ಮ ಪಾತ್ರಕ್ಕೆ ಜೀವ ತುಂಬುವರು.
ಶಿವರಾಜಕುಮಾರ್, ಮೊದಲ ಭಾಗದಲ್ಲಿದ್ದ ಅತಿಥಿ ಪಾತ್ರದ ಬಳಿಕ, ಸೀಕ್ವೆಲ್‌ನಲ್ಲೂ ಖಚಿತವಾಗಿ ಭಾಗಿಯಾಗಿರುವುದಾಗಿ ಪ್ರಕಟಿಸಿದ್ದಾರೆ.

ಈ ಬಾರಿ ಇನ್ನಷ್ಟು ತಾರೆಯರ ಸಾಲು ಸೇರಲಿದೆ ಎಂಬ ಊಹಾಪೋಹಗಳು ಚುರುಕು ಪಡೆದಿವೆ —
ನಂದಮೂರಿ ಬಾಲಕೃಷ್ಣ, ಸೂರಜ್ ವೆಂಜಾರಮೂಡು, ವಿದ್ಯಾ ಬಾಲನ್, ಮಿಥುನ್ ಚಕ್ರವರ್ತಿ ಮೊದಲಾದವರ ಹೆಸರುಗಳು ಈಗಾಗಲೇ ಪ್ರಚಾರದಲ್ಲಿವೆ.

🔥 Thalaivar 173 — ಹೊಸ ನಿರ್ದೇಶಕ ಹುಡುಕಾಟ ಮುಂದುವರೆದು

ಸುಂದರ್ ಸಿ ಹಿಂದೆ ಸರಿದ ಬಳಿಕ ಕಮಲ್ ಹಾಸನ್ ಅವರ ರಾಜ್ ಕಾಮಲ್ ಫಿಲ್ಮ್ಸ್ ಇಂಟರ್‌ನ್ಯಾಶನಲ್ ನಿರ್ಮಾಣದ ತಳೈವರ್ 173 ಚಿತ್ರಕ್ಕೆ ಹೊಸ ನಿರ್ದೇಶಕ ಆಯ್ಕೆ ಪ್ರಕ್ರಿಯೆ ವೇಗವಾಗಿದೆ. ಅಭಿಮಾನಿಗಳಲ್ಲಿ ಈಗಾಗಲೇ ದೊಡ್ಡ ನಿರೀಕ್ಷೆ ಮೂಡಿದೆ.

Share This Article