ಕುರುಕ್ಷೇತ್ರದಲ್ಲಿ ಮೋದಿ ಭವ್ಯ ಸಮಾರಂಭ – ವಿಶೇಷ ನಾಣ್ಯ, ಅಂಚೆ ಚೀಟಿ ಹಾಗೂ ಸ್ಮಾರಕ ಉದ್ಘಾಟನೆ

1 Min Read
1 Min Read

ಕುರುಕ್ಷೇತ್ರ, ನವೆಂಬರ್ 25 – ಪವಿತ್ರ ಭೂಮಿಯಾದ ಹರಿಯಾಣದ ಕುರುಕ್ಷೇತ್ರದಲ್ಲಿ ಇಂದು ಸಂಜೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಐತಿಹಾಸಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಜ್ಯೋತಿಸರ್‌ನಲ್ಲಿ ನಡೆಯುತ್ತಿರುವ ವಿಶೇಷ ಸಮಾರಂಭದಲ್ಲಿ ಗುರು ತೇ ಬಹಾದೂರ್ ಜೀ ಅವರ 350ನೇ ಹಾಗೂ ಶಹೀದ ದಿನವನ್ನು ಸ್ಮರಿಸಿ ವಿಶೇಷ ನಾಣ್ಯ ಅಂಚೆ ಚೀಟಿಯನ್ನು ಬಿಡುಗಡೆ ಮಾಡುವ ಮೂಲಕ ರಾಷ್ಟ್ರಕ್ಕೆ ಮಹತ್ವದ ಸಂದೇಶ ನೀಡಲಿದ್ದಾರೆ.

ಗುರು ತೇಗ್ ಬಹಾದೂರ್ ಜೀ ಅವರು ಧರ್ಮ, ಮಾನವೀಯತೆ ಮತ್ತು ಸ್ವಾತಂತ್ರ್ಯದ ರಕ್ಷಣೆಗೆ ತಮ್ಮ ಪ್ರಾಣವನ್ನೇ ಬಲಿದಾನ ಮಾಡಿ ಇತಿಹಾಸದಲ್ಲಿ ಅನನ್ಯ ಗುರುತು ಬರೆದಿದ್ದಾರೆ. ಅವರ ತ್ಯಾಗದ ಮಹತ್ವವನ್ನು ಹೊಸ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಈ ವಿಶೇಷ ನಾಣ್ಯ ಮತ್ತು ಅಂಚೆ ಚೀಟಿ ಹೊರಬರುತ್ತಿದೆ.

ಇದಕ್ಕೂ ಮುನ್ನ, ಶ್ರೀಮೋದಿ ಜ್ಯೋತಿಸರ್‌ನಲ್ಲಿ ನಿರ್ಮಿಸಲಾದ ‘ಪಾಂಡವ ಪಂಚಜನ್ಯ’ ಸ್ಮಾರಕವನ್ನು ಉದ್ಘಾಟಿಸಿದರು. ಭಗವಾನ್ ಶ್ರೀಕೃಷ್ಣನ ದಿವ್ಯ ಶಂಖವಾದ ಪಂಚಜನ್ಯಕ್ಕೆ ಸಮರ್ಪಿತ ಈ ಸ್ಮಾರಕವನ್ನು ಸುಂದರವಾಗಿ ಅಲಂಕರಿಸಿದೆ, ಇದು ಮಹಾಭಾರತದ ಇತಿಹಾಸ ಮತ್ತು ಭಾವನೆಯನ್ನು ಮೂಡಿಸುತ್ತದೆ. ಈ ಉದ್ಘಾಟನಾ ಕಾರ್ಯಕ್ರಮಕ್ಕೆ ಹರಿಯಾಣ ರಾಜ್ಯಪಾಲ ಪ್ರೊ. ಅಸಿಮ್ ಕುಮಾರ್ ಘೋಷ ಅಧ್ಯಕ್ಷತೆ ವಹಿಸಲಿದ್ದಾರೆ. ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರು ಕೂಡ ಉಪಸ್ಥಿತರಿರಲಿದ್ದಾರೆ.

ಈ ಭೇಟಿಯ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಜ್ಯೋತಿಸರ್‌ನಲ್ಲಿರುವ ‘ಮಹಾಭಾರತ ಅನುಭವ ಕೇಂದ್ರ’ಕ್ಕೂ ಭೇಟಿ ನೀಡಿ ಭಾರತದ ಆತ್ಮವಾಗಿರುವ ಮಹಾಕಾವ್ಯದ ಪರಂಪರೆ ಕುರಿತು ವೀಕ್ಷಣೆ ಮಾಡುವವರು.

ಕಾರ್ಯಕ್ರಮದ ಅಂತ್ಯದಲ್ಲಿ ಪ್ರಧಾನಿ ಪವಿತ್ರ ಬ್ರಹ್ಮ ಸರೋವರದಲ್ಲಿ ಪೂಜೆ ಸಲ್ಲಿಸಿ, ದೇಶದ ಸುಖ ಶಾಂತಿಯ ಪರ ಪ್ರಾರ್ಥನೆ ಮಾಡುತ್ತಾರೆ. ದೇಶದ ಸಂಸ್ಕೃತಿ, ಪರಂಪರೆ ಮತ್ತು ಭಕ್ತಿಗೆ ಮಹತ್ವ ನೀಡುವ ಈ ಕಾರ್ಯಕ್ರಮ ಕುರುಕ್ಷೇತ್ರದ ಇತಿಹಾಸಕ್ಕೆ ಹೊಸ ಅಧ್ಯಾಯವಾಗಿ ದಾಖಲಾಗಿದೆ.

Share This Article