ಒಂದು ‘ಹಾಯ್’ ಸಂದೇಶದಲ್ಲೇ ಸರ್ಕಾರಿ ಸೇವೆಗಳು – ವಾಟ್ಸಪ್‌ನಲ್ಲಿ ಮೀಸೇವಾ ಆರಂಭಿಸಿದ ತೆಲಂಗಾಣ ಸರ್ಕಾರ

1 Min Read
1 Min Read

ತೆಲಂಗಾಣ, ನವೆಂಬರ್ 19:

ತೆಲಂಗಾಣ ಸರ್ಕಾರ ಸಾರ್ವಜನಿಕರಿಗೆ ಸರ್ಕಾರದಿಂದ ನಾಗರಿಕರಿಗೆ (G2C) ನೀಡಲಾಗುವ ವಿವಿಧ ಸೇವೆಗಳ ಪ್ರವೇಶವನ್ನು ಇನ್ನಷ್ಟು ಸುಲಭಗೊಳಿಸಲು ವಾಟ್ಸಪ್ನಲ್ಲಿ ಮೀಸೇವಾ ಸೇವೆಯನ್ನು ಅಧಿಕೃತವಾಗಿ ಆರಂಭಿಸಿದೆ.

ಸುಮಾರು 40 ಕ್ಕೂ ಹೆಚ್ಚು ಇಲಾಖೆಗಳ ಸೇವೆಗಳನ್ನು ಒಂದೇ ಚಾಟ್ ಪ್ಲ್ಯಾಟ್‌ಫಾರ್ಮ್‌ನಲ್ಲಿ ಒದಗಿಸುವ ನವೀನ ಸಂವಾದಾತ್ಮಕ ಮತ್ತು ಕೃತಕ ಬುದ್ಧಿವಂತಿಕೆ (AI) ಆಧಾರಿತ ವ್ಯವಸ್ಥೆಯನ್ನು ಈ ಸೇವೆಯೊಂದಿಗೆ ಪರಿಚಯಿಸಲಾಗಿದೆ.

ಸೇವೆಯನ್ನು ಚಾಲನೆ ನೀಡಿದ ರಾಜ್ಯದ ಐಟಿ ಮತ್ತು ಕೈಗಾರಿಕೆ ಸಚಿವ ಡಿ. ಶ್ರೀಧರ್ ಬಾಬು, “580 ಕ್ಕೂ ಹೆಚ್ಚು ಸರ್ಕಾರದಿಂದ ನಾಗರಿಕರಿಗೆ ನೀಡುವ ಸೇವೆಗಳನ್ನು ಒಂದೇ ಚಾಟ್ ಇಂಟರ್‌ಫೇಸ್ ಮೂಲಕ ಜನರಿಗೆ ತಲುಪಿಸುವುದು ನಮ್ಮ ಉದ್ದೇಶ. ತಂತ್ರಜ್ಞಾನವನ್ನೇ ಸೇತುವೆಯಾಗಿ ಬಳಸಿ ಸರ್ಕಾರಿ ಸೇವೆಗಳನ್ನು ಜನರಿಗೆ ನೇರವಾಗಿ ತಲುಪಿಸುವ ಕ್ರಮದ ಭಾಗವಾಗಿ ಈ ಹೆಜ್ಜೆಯನ್ನು ತೆಗೆದುಕೊಂಡಿದ್ದೇವೆ” ಎಂದು ಹೇಳಿದರು.

ಪ್ರಸ್ತುತ ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ 5,000ಕ್ಕೂ ಹೆಚ್ಚು ಮೀಸೇವಾ ಕೇಂದ್ರಗಳ ಜೊತೆಗೆ, ವಾಟ್ಸಪ್ ಸೇವೆ ಪೂರಕವಾಗಲಿದೆ.

✉️ ಸೇವೆ ಬಳಸುವುದು ಹೇಗೆ?

ನಾಗರಿಕರು 80969 58096 ಸಂಖ್ಯೆಗೆ ವಾಟ್ಸಪ್‌ನಲ್ಲಿ ‘Hi’ ಎಂದು ಸಂದೇಶ ಕಳುಹಿಸಿದರೆ ಸೇವೆಗೆ ಪ್ರವೇಶ ಸಿಗುತ್ತದೆ.

ಈ ಮೂಲಕ ನಾಗರಿಕರು:

  • ಜನನ, ಮರಣ, ಜಾತಿ ಪ್ರಮಾಣಪತ್ರಗಳಿಗೆ ಅರ್ಜಿ ಸಲ್ಲಿಕೆ
  • ವಿದ್ಯುತ್, ನೀರು ಸೇರಿದಂತೆ ವಿವಿಧ ಸಮಿತಿಗಳ ಬಿಲ್ ಪಾವತಿ
  • ಆಸ್ತಿ ತೆರಿಗೆ ಪಾವತಿ
  • ಪೊಲೀಸ್ ಚಾಲನ್ ದಂಡ ಪಾವತಿ
  • ಅರ್ಜಿಯ ಸ್ಥಿತಿ ಪರಿಶೀಲನೆ
  • ದಾಖಲೆಗಳನ್ನು ಡೌನ್‌ಲೋಡ್

ಹೀಗೆ ಅನೇಕ ಸರ್ಕಾರಿ ಸೇವೆಗಳನ್ನು ಮನೆಬಿಟ್ಟೇ ವಾಟ್ಸಪ್ ಚಾಟ್ ಮೂಲಕ ಪಡೆಯಬಹುದಾಗಿದೆ.

 

Share This Article
Leave a Comment