ಯುವರಾಜ್‌ಕುಮಾರ್ ನಟನೆಯ ‘ಎಕ್ಕ’ Sun NXT ನಲ್ಲಿ ಸರ್ವಾಧಿಕ ವೀಕ್ಷಣೆ ಪಡೆಯುತ್ತಿರುವ ಚಿತ್ರಗಳಲ್ಲಿ ಒಂದಾಗಿ ದಾಖಲೆ!

1 Min Read
1 Min Read

ಜುಲೈನಲ್ಲಿ ಬಿಡುಗಡೆಯಾದ ಯುವರಾಜ್‌ಕುಮಾರ್ ಅವರ ಎಕ್ಕ ಸಿನಿಮಾ ಬಾಕ್ಸ್‌ಆಫೀಸ್‌ನಲ್ಲಿ ಶಾಂತವಾಗಿ ಪ್ರಾರಂಭವಾದರೂ, ಪ್ರೇಕ್ಷಕರ ಮೆಚ್ಚುಗೆ ಗಳಿಸಿ ಈಗ ಡಿಜಿಟಲ್ ವೇದಿಕೆಯಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ. ರೋಹಿತ್ ಪಡಾಕಿ ನಿರ್ದೇಶನದ ಈ ಚಿತ್ರದಲ್ಲಿ ಸಂಜನಾ ಆನಂದ್, ಸಂಪದಾ ಹುಲಿವಾಣ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಕೆ.ಆರ್.ಜಿ ಸ್ಟುಡಿಯೋಸ್, ಜಯಣ್ಣ ಫಿಲ್ಮ್ಸ್ ಮತ್ತು ಪಿಆರ್‌ಕೆ ಪ್ರೊಡಕ್ಷನ್ ಸಂಸ್ಥೆಗಳು ಸಂಯುಕ್ತವಾಗಿ ನಿರ್ಮಿಸಿರುವ ಈ ಚಿತ್ರಕ್ಕೆ ಚರಣ್ ರಾಜ್ ನೀಡಿದ ಸಂಗೀತ ವಿಶೇಷವಾಗಿ ಗಮನ ಸೆಳೆದಿದೆ. ಅವರ Trend ‘ಬ್ಯಾಂಗಲ್ ಬಂಗಾರಿ’ ಹಾಡು ಚಿತ್ರದ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಎಕ್ಕ ಚಿತ್ರವು ಆಕ್ಷನ್, ಭಾವನೆ ಮತ್ತು ಗಟ್ಟಿಯಾದ ಕಥಾಹಂದರದ ಸಂಯೋಜನೆಯಾಗಿದ್ದು, ಯುವರಾಜ್‌ಕುಮಾರ್ ಅವರ ವೃತ್ತಿಜೀವನದ ಪ್ರಮುಖ ಹಂತಗಳಲ್ಲಿ ಒಂದಾಗಿ ಹೊರಹೊಮ್ಮಿದೆ.

ಚಿತ್ರವನ್ನು ಥಿಯೇಟರ್‌ನಲ್ಲಿ ತಪ್ಪಿಸಿಕೊಂಡ ಪ್ರೇಕ್ಷಕರಿಗಾಗಿ ಸನ್ NXT November 13ರಿಂದ ಚಿತ್ರವನ್ನು ಬಿಡುಗಡೆ ಮಾಡಿದ್ದು, ದಾಖಲೆ ಸಂಖ್ಯೆಯ ವೀಕ್ಷಣೆ ಪಡೆದು ಪ್ಲಾಟ್ಫಾರ್ಮ್‌ನ ಅತ್ಯಂತ ಹೆಚ್ಚು ವೀಕ್ಷಿಸಲ್ಪಟ್ಟ ಚಿತ್ರಗಳಲ್ಲಿ ಒಂದಾಗಿದೆ.

ಸನ್ NXT ಈ ಚಿತ್ರವನ್ನು ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಸೇರಿ ಹಲವು ಭಾಷೆಗಳಲ್ಲಿ ಪ್ರದರ್ಶಿಸುತ್ತಿದೆ. ದಕ್ಷಿಣ ಭಾರತದ ಪ್ರೇಕ್ಷಕರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡುವಲ್ಲಿ ಸನ್ NXT ತನ್ನ ಬದ್ಧತೆಯನ್ನು ಮತ್ತೊಮ್ಮೆ ತೋರಿಸಿದೆ.

4,000ಕ್ಕಿಂತ ಹೆಚ್ಚು ಚಲನಚಿತ್ರಗಳು, 44ಕ್ಕೂ ಹೆಚ್ಚು ಲೈವ್ ಚಾನೆಲ್‌ಗಳು, ಹಾಗೂ ವೈವಿಧ್ಯಮಯ ಧಾರಾವಾಹಿಗಳೊಂದಿಗೆ ಸನ್ NXT ಈಗಾಗಲೇ ಕೃಷ್ಣಂ ಪ್ರಣಯ ಸಾಕಿ, ಸರ್ಕಾರಿ ಹಿರೀಯ ಪ್ರಾಥಮಿಕ ಶಾಲೆ, ಅಂಜನಿಪುತ್ರ, ಟಗರು ಮುಂತಾದ ಜನಪ್ರಿಯ ಚಿತ್ರಗಳನ್ನು ಪ್ರದರ್ಶಿಸಿದೆ. ಇದರಿಂದ ದಕ್ಷಿಣ ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಸನ್ NXT ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿದೆ.

Share This Article
Leave a Comment