ಪಾಟ್ನಾ, ನ.14:
ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶಗಳು ಪ್ರಕಟವಾದ ನಂತರ ರಾಜಕೀಯ ವಾತಾವರಣ ಇನ್ನಷ್ಟು ಕಾವೇರಿದೆ. ಈ ರಾಜಕೀಯ ಹಿನ್ನಲೆಯಲ್ಲಿ, ಎಂ.ಜಿ.ಬಿ (ಮಹಾಗಠಬಂಧನ್) ನಾಯಕರೊಬ್ಬರು ಪ್ರಧಾನಮಂತ್ರಿ ನರೆಂದ್ರ ಮೋದಿಯವರ ತಾಯಿ ಕುರಿತು ನೀಡಿದ ವಿವಾದಾತ್ಮಕ ಹೇಳಿಕೆ ಬಿಹಾರದಲ್ಲೇ ದೊಡ್ಡ ಚರ್ಚೆಗೆ ಕಾರಣವಾಯಿತು.
ಈ ಹೇಳಿಕೆಗೆ ಪ್ರತಿಯಾಗಿ ಬಿಹಾರದ ತಾಯಂದಿರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ದ್ವನಿಯನ್ನು ಗಟ್ಟಿಯಾಗಿ ಹೊರಹಾಕಿದ್ದಾರೆ.
ಬಿಹಾರದ ಅನೇಕ ಮಹಿಳೆಯರು,
“ಚುನಾವಣೆ ಗೆಲ್ಲೋದಕ್ಕೆ ಯಾರ ತಾಯಿಯನ್ನೂ ಅವಮಾನಿಸುವ ಹಕ್ಕು ಯಾರಿಗೂ ಇಲ್ಲ”
ಎನ್ನುವ ಸಂದೇಶಗಳನ್ನು ಹಂಚಿಕೊಂಡಿದ್ದಾರೆ.
ಬಿಹಾರ ಚುನಾವಣಾ ಫಲಿತಾಂಶಗಳಲ್ಲಿ ಎನ್‌ಡಿಎ ಉತ್ತಮ ಪ್ರದರ್ಶನ ನೀಡಿದ್ದರೆ, ಮಹಾಗಠಬಂಧನ್ ನಿರೀಕ್ಷಿತ ಮಟ್ಟಿಗೆ ಸಾಧನೆ ಮಾಡಲು ವಿಫಲವಾಗಿದೆ. ಇದರಿಂದಾಗಿ ಮೈತ್ರಿ ಶಿಬಿರದ ಕೆಲ ನಾಯಕರ ಅಸಮಾಧಾನ ಹೊರಬಂದಿರುವುದಾಗಿ ರಾಜಕೀಯ ವೀಕ್ಷಕರು ಹೇಳುತ್ತಿದ್ದಾರೆ.
ರಾಜಕೀಯದಲ್ಲಿ ವೈಯಕ್ತಿಕ ಮತ್ತು ಕುಟುಂಬದ ವಿಷಯಗಳನ್ನು ಜಗಳಕ್ಕೆ ತರುವುದನ್ನು ಬಿಹಾರದ ಮಹಿಳೆಯರು ಗಂಭೀರವಾಗಿ ತಿರಸ್ಕರಿಸಿದ್ದು,
“ನೀತಿಯ ರಾಜಕೀಯಕ್ಕೆ ತಾಯಂದಿರ ಮೇಲೆ ಮಾತಾಡುವ ಅವಮಾನ ಬೇಡ”
ಎಂದು ಹೇಳಿದ್ದಾರೆ.
ಈ ವಿವಾದ ಮುಂದಿನ ದಿನಗಳಲ್ಲಿ ಬಿಹಾರ ರಾಜಕೀಯದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ.


