ಭಾರತ, ಅಮೆರಿಕಾ, ಜಪಾನ್ ಮತ್ತು ಆಸ್ಟ್ರೇಲಿಯಾ ದೇಶಗಳು ಸೇರಿ “Exercise Malabar 2025” ಹೆಸರಿನ ಮಹತ್ವದ ನೌಕಾ ಅಭ್ಯಾಸವನ್ನು ಆರಂಭಿಸಿವೆ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಭದ್ರತೆ, ಸಹಕಾರ ಮತ್ತು ಸಂಯೋಜನೆ ಬಲಪಡಿಸುವುದು ಈ ಅಭ್ಯಾಸದ ಮುಖ್ಯ ಉದ್ದೇಶವಾಗಿದೆ.
ಆಸ್ಟ್ರೇಲಿಯಾದ ಜಂಟಿ ಕಾರ್ಯಾಚರಣೆಗಳ ಮುಖ್ಯಸ್ಥ ವೈಸ್ ಅಡ್ಮಿರಲ್ ಜಸ್ಟಿನ್ ಜೋನ್ಸ್ ಅವರು,
“ಪ್ರಾದೇಶಿಕ ಭದ್ರತಾ ಸವಾಲುಗಳ ನಡುವೆಯೂ ಈ ತರಬೇತಿ ರಾಷ್ಟ್ರಗಳ ನಡುವಿನ ನಂಬಿಕೆ ಮತ್ತು ಸಿದ್ಧತೆಯನ್ನು ಬಲಪಡಿಸುತ್ತದೆ,”
ಎಂದು ತಿಳಿಸಿದ್ದಾರೆ.
ಅಭ್ಯಾಸದ ವೇಳೆ ಜಲಾಂತರ್ಗಾಮಿ ನೌಕಾ ಯುದ್ಧ (Anti-submarine warfare), ವಿಮಾನ ನಿಗ್ರಹ (Air defence) ಮತ್ತು ಸಮುದ್ರ ಮಧ್ಯೆ ಇಂಧನ ತುಂಬುವ ತರಬೇತಿ (Replenishment at sea) ಸೇರಿದಂತೆ ಹಲವಾರು ಕಠಿಣ ಕಾರ್ಯಾಚರಣೆಗಳನ್ನು ಒಳಗೊಂಡಿದೆ.
ಮಲಬಾರ್ ಅಭ್ಯಾಸ 1992ರಲ್ಲಿ ಭಾರತ ಮತ್ತು ಅಮೆರಿಕಾ ನಡುವಿನ ದ್ವಿಪಕ್ಷೀಯ ಅಭ್ಯಾಸವಾಗಿ ಪ್ರಾರಂಭಗೊಂಡಿದ್ದು, ನಂತರ ಜಪಾನ್ ಮತ್ತು ಆಸ್ಟ್ರೇಲಿಯಾ ಸೇರಿಕೆಯಿಂದ ಕ್ವಾಡ್ ರಾಷ್ಟ್ರಗಳ ಪ್ರಮುಖ ನೌಕಾ ಸಹಯೋಗ ಅಭ್ಯಾಸವಾಗಿ ಬೆಳವಣಿಗೆಯಾಗಿದೆ.
ಆಸ್ಟ್ರೇಲಿಯಾ ಈ ಅಭ್ಯಾಸವನ್ನು ಕೊನೆಯದಾಗಿ 2023ರಲ್ಲಿ ಆತಿಥ್ಯ ನೀಡಿತ್ತು.
ಯುದ್ಧ ಒಕ್ಕೂಟವಲ್ಲದಿದ್ದರೂ, ಕ್ವಾಡ್ ರಾಷ್ಟ್ರಗಳು ಈ ತರಬೇತಿಯನ್ನು ಸಮುದ್ರ ಭದ್ರತೆ ಬಲಪಡಿಸಲು ಮತ್ತು ಸ್ವತಂತ್ರ ನೌಕಾಯಾನ ಹಕ್ಕುಗಳನ್ನು ಕಾಪಾಡಲು ಬಳಸುತ್ತಿವೆ.


