ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ನೀಡಲು ನಿರ್ಲಕ್ಷ. ಕುಣಿಗಲ್ ತಹಶೀಲ್ದಾರ್ ಯು.ರಶ್ಮಿ ಅವರಿಗೆ ಮತ್ತೆ ಮತ್ತೆ ದಂಡ

2 Min Read
2 Min Read

ಕುಣಿಗಲ್ ತಹಶೀಲ್ದಾರ್ ಯು.ರಶ್ಮಿ ರವರಿಗೆ ಮಾಹಿತಿ ಹಕ್ಕು ಆಯೋಗ 2ನೇ ಎರಡನೇ ಬಾರಿಗೆ 10,000 ರೂಗಳ ದಂಡ ಹಾಕಿ ಮಾಹಿತಿ ಹಕ್ಕು ಅಧಿನಿಯಮ 2005 ರ ಕಲಂ (8) (ಎ) ರಂತೆ ನಿರ್ದೇಶಿಸಿದೆ. ಅರ್ಜಿದಾರರಾದ ಶ್ರೀ ನಾಗರಾಜು ಹೆಚ್. ಎಂ. ಹಂದಲಗೆರೆ ಗ್ರಾಮ ತಾವರೆಕೆರೆ ಅಂಚೆ ಹುಲಿಯೂರುದುರ್ಗ ರವರ ಅರ್ಜಿಗೆ ಸಂಬಂಧಿಸಿದಂತೆ ಪ್ರಕರಣವನ್ನು ಅವಲೋಕಿಸಿದ ಆಯೋಗವು ದಿನಾಂಕ 17.06.2025 ರ ಆದೇಶದಂತೆ ಕ್ರಮವಹಿಸಿ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ತಹಶೀಲ್ದಾರ್ ಕುಣಿಗಲ್ ತಾಲೂಕು ತುಮಕೂರು ಜಿಲ್ಲೆ ರವರಿಗೆ ಸ್ಪಷ್ಟವಾಗಿ ಎಚ್ಚರಿಕೆ ನೀಡಿದ್ದರೂ ಸಹ ಪ್ರತಿವಾದಿಯವರು ದಂಡದ ಕ್ರಮವನ್ನು ಜರುಗಿಸದೆ ಇರುವ ವಿಚಾರದಲ್ಲಿ ಯಾವುದೇ ಲಿಖಿತ ಸಮಜಾಯಿಸಿಯನ್ನು ಆಯೋಗಕ್ಕೆ ಸಲ್ಲಿಸಿಲ್ಲದಿರುವುದನ್ನು ಪರಿಶೀಲಿಸಿದ ಆಯೋಗವು ದಂಡ ವಿಧಿಸುವ ವಿಚಾರದಲ್ಲಿ ಪ್ರತಿವಾದಿಯವರ ಲಿಖಿತ ಸಮಜಾಯಿಸಿ ಏನು ಇರುವುದಿಲ್ಲವೆಂದು ಭಾವಿಸಿ ಶ್ರೀಮತಿ ರಶ್ಮಿ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ತಹಶೀಲ್ದಾರ್ ಕುಣಿಗಲ್ ತಾಲೂಕು ರವರಿಗೆ ದಂಡನಿಗೆ ಅರ್ಹರೆಂದು ಅಭಿಪ್ರಾಯಿಸಿದೆ ಎಂದು ರಾಜ್ಯ ಮಾಹಿತಿ ಆಯುಕ್ತರಾದ ಡಾ.ಹರೀಶ್ ಕುಮಾರ್ ಆದೇಶಿಸಿದ್ದಾರೆ. ಆಡಳಿತದಲ್ಲಿ ಸುಧಾರಣೆ, ಭ್ರಷ್ಟಾಚಾರ ನಿರ್ಮೂಲನೆ, ಮತ್ತು ಜನರಿಗೆ ಪಾರದರ್ಶಕತೆಯನ್ನು ನೀಡಲು ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೆ ತರಲಾಯಿತು, ಆದರೆ ಕುಣಿಗಲ್ ತಾಸಿಲ್ದಾರ್ ರಶ್ಮಿ ಅವರಂತ ಅಧಿಕಾರಿಗಳು ಸಾರ್ವಜನಿಕರು ಮಾಹಿತಿ ಕೇಳಿದಾಗ ನಿರ್ಲಕ್ಷ್ಮ ಧೋರಣೆ ಮತ್ತು ಬೇಜವಾಬ್ದಾರಿಯಿಂದ ಕಾಯ್ದೆಯನ್ನು ಉಲ್ಲಂಘಿಸಿ ಸ್ವೇಚ್ಛಾಚಾರ ತೋರುತ್ತಿರುವುದು ಕಾಯ್ದೆಗೆ ಮಾಡಿದ ಅವಮಾನ ಮತ್ತು ಜನಪರ ಕಾಯ್ದೆಗಳನ್ನು ಹತ್ತಿಕ್ಕುವ ಪೂರ್ವ ಯೋಜಿತ ಹುನ್ನಾರದಂತೆ ಕಾಣುತ್ತಿದೆ.

ಈ ಹಿಂದೆ ಇದೇ ರೀತಿಯ ಪ್ರಕರಣದಲ್ಲಿ ಮಾಹಿತಿ ಹಕ್ಕು ಆಯೋಗವು 25000ಗಳ ದಂಡ ವಿಧಿಸಿದ್ದರು ಮತ್ತೆ ಮೇಲ್ಮನವಿ ದಾರರಿಗೆ ನಿಗದಿತ ಅವಧಿಗಳಿಗೆ ಮಾಹಿತಿಯನ್ನು ಒದಗಿಸಿದೆ ಇರುವುದನ್ನು ಗಮನಿಸಿದರೆ ಆಯೋಗದ ಆದೇಶಗಳನ್ನು ಪಾಲನೆ ಮಾಡದೆ ಉದ್ದೇಶ ಪೂರ್ವಕವಾಗಿ ನಿರ್ಲಕ್ಷ್ಯ ಧೋರಣೆ ತೋರುತ್ತಿರುವುದು ಕಂಡುಬರುತ್ತದೆ. ಆದ್ದರಿಂದ ಸರ್ಕಾರ ಮತ್ತು ಕಂದಾಯ ಇಲಾಖೆ ಕಂದಾಯ ಸಚಿವರಾದ ಕೃಷ್ಣ ಭೈರೇಗೌಡರು ಇತ್ತ ಕಡೆ ಗಮನ ಹರಿಸಿ ಸಾರ್ವಜನಿಕರಿಗೆ ಸಾಂವಿಧಾನಿಕ ಹಕ್ಕು ಮತ್ತು ಕಾಯ್ದೆಗಳ ಘನತೆಯನ್ನು ಕಾಪಿರಿಸುವ ನಿಟ್ಟಿನಲ್ಲಿ ಇಂತಹ ನಿರ್ಲಕ್ಷ ಅಧಿಕಾರಿಗಳನ್ನು ಸಾರ್ವಜನಿಕ ಸೇವೆಗಳಿಂದ ವಜಾಗೊಳಿಸಿ ಆಡಳಿತ ಮತ್ತು ಜನರ ಸಾಂವಿಧಾನಿಕ ಹಕ್ಕು ಮತ್ತು ಕಾಯ್ದೆಗಳನ್ನು ರಕ್ಷಿಸುವ ಜವಾಬ್ದಾರಿ ಹೊರಬೇಕಿದೆ ಆಗ ಮಾತ್ರ ಜನರಿಗೆ ಸರ್ಕಾರದ ಮೇಲೆ ವಿಶ್ವಾಸ ಬರುತ್ತದೆ

Share This Article
Leave a Comment