ನವೆಂಬರ್ 11, 2025 ಮಂಗಳವಾರ ದಲಿತರ ಹಕ್ಕೊತ್ತಾಯಿಸಿ ರಾಜ್ಯಾದಾದ್ಯಂತ ಗ್ರಾಮ ಪಂಚಾಯಿತಿಗಳ ಮುಂದೆ ಬೇಡಿಕೆಗೆ ಆಗ್ರಹಿಸಿ ಅರ್ಜಿ ಸಲ್ಲಿಕೆಗೆ ದಲಿತ ಹಕ್ಕುಗಳ ಸಮಿತಿ – ಕರ್ನಾಟಕ (DHS) ಕರೆ.

2 Min Read
2 Min Read

ಬೆಂಗಳೂರು: ದಲಿತ ಹಕ್ಕುಗಳ ಸಮಿತಿ- ಕರ್ನಾಟಕ DHS ಸಂಘಟನೆಯು ರಾಜ್ಯದಲ್ಲಿ ದಲಿತರ ಪರಿಸ್ಥಿತಿ ಮತ್ತು ಒಳ ಮೀಸಲಾತಿ ವರ್ಗೀಕರಣ ಸಮಗ್ರ ಸಮೀಕ್ಷೆಯಲ್ಲಿ ಪರಿಶಿಷ್ಟ ಜಾತಿಗಳು ಅನುಭವಿಸಿರುವ ಸಾಮಾಜಿಕ ತಾರತಮ್ಯ ದೌರ್ಜನ್ಯಗಳಿಗೆ ಸಂಬಂಧಿಸಿದಂತೆ ಶೇಕಡ 75 ರಷ್ಟು ಜನರು ಇಂದಿಗೂ ಅನುಭವಿಸುತ್ತಿರುವ ಹಲವಾರು ಬಗೆಯ ಅಸ್ಪೃಶ್ಯತೆ ಮತ್ತು ಸಾಮಾಜಿಕ ಆರ್ಥಿಕ ತಾರತಮ್ಯಗಳನ್ನು ಗುರುತಿಸಿ ದಲಿತರ ಶ್ರೇಯೋಭಿವೃದ್ಧಿಗಾಗಿ ಬೇರು ಮಟ್ಟದಲ್ಲಿ ಅಂದರೆ ಗ್ರಾಮ ಪಂಚಾಯಿತಿ ಮಟ್ಟದಿಂದ ಹೋರಾಟ ರೂಪಿಸಲು ಮುಂದಾಗಿದೆ.

ಉದಾಹರಣೆಗೆ ದಲಿತರು ಸಾಗುವಳಿ ಮಾಡುತ್ತಿರುವ ದರಖಾಸ್ತು ಭೂಮಿ, ಬಗರ್ ಹುಕುಂ ಮಂಜೂರಾತಿ, ಸರ್ಕಾರಿ ಭೂಮಿ, ಗೋಮಾಳ, ಅರಣ್ಯ ಭೂಮಿ ಸಾಗುವಳಿದಾರರಿಗೆ ಹಕ್ಕು ಪತ್ರ, ಪಡ ಭೂಮಿ ಸಕ್ರಮಗೊಳಿಸುವುದು, ಅರ್ಜಿ ಹಾಕಿದ ಎಲ್ಲರಿಗೂ ಕೊಳವೆ ಬಾವಿ ಮಂಜೂರು ಮಾಡುವುದು ಸೇರಿದಂತೆ ಅಗತ್ಯವಿರುವ ಗ್ರಾಮಗಳಿಗೆ ಸ್ಮಶಾನ ಭೂಮಿ ಮಂಜೂರು ಮಾಡುವುದು ಮತ್ತು ಅಭಿವೃದ್ಧಿಗೊಳಿಸುವುದು, ಎಸ್ಸಿ ಎಸ್ ಪಿ/ಟಿ ಎಸ್ ಪಿ ಉಪ ಯೋಜನೆ ಸಮರ್ಪಕ ಜಾರಿಗಾಗಿ, ಪರಿಶಿಷ್ಟ ಜಾತಿಯ ಜನರ ಮೇಲಿನ ದೌರ್ಜನ್ಯ ತಡೆಯುವುದಕ್ಕಾಗಿ ಜಿಲ್ಲೆಗೊಂದು ವಿಶೇಷ ನ್ಯಾಯಾಲಯ ಸೇರಿದಂತೆ ಇವತ್ತಿನ ಪ್ರಸ್ತುತ ಜಾತಿಗ್ರಸ್ತ ಸಮಾಜದ ಮನಸ್ಥಿತಿಯ ದುಸ್ಥಿತಿಯಲ್ಲಿ ದಲಿತರ ಸಮಗ್ರ ಸಬಲೀಕರಣಕ್ಕಾಗಿ ದಲಿತ ಹಕ್ಕುಗಳ ಸಮಿತಿ-ಕರ್ನಾಟಕ, ದಲಿತ ಮತ್ತು ದಲಿತೇತರನ್ನು ಒಗ್ಗೂಡಿಸಿ ದಲಿತ ಚಳುವಳಿಯನ್ನು ಐಕ್ಯ ಹೋರಾಟವನ್ನಾಗಿ ರೂಪಿಸುತ್ತಿದೆ. 

ಅಷ್ಟೇ ಅಲ್ಲ ದಲಿತರ ದೈನಂದಿನ ಸಮಸ್ಯೆ ಸವಾಲುಗಳ ವಿರುದ್ಧ ನಿರಂತರವಾಗಿ ಸೆಣಸುತ್ತಿದೆ. ಪ್ರಮುಖವಾಗಿ ದಲಿತರ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಸ್ಥಳೀಯವಾಗಿ ಸಂಘಟನಾತ್ಮಕವಾಗಿ ಬೇಡಿಕೆಗಳ ಈಡೇರಿಕೆಗಾಗಿ ಶ್ರಮಿಸುತ್ತಿದೆ. ಈ ಹಿನ್ನೆಲೆಯಲ್ಲಿ ನವಂಬರ್ 11 ರಂದು ಮಂಗಳವಾರ ರಾಜ್ಯದಾದ್ಯಂತ ದಲಿತ ಹಕ್ಕುಗಳ ಸಮಿತಿ – ಕರ್ನಾಟಕದ ಗ್ರಾಮ ಘಟಕಗಳಲ್ಲಿ ನಿವೇಶನ, ವಸತಿ, ಗಂಗಾ ಕಲ್ಯಾಣ ಯೋಜನೆ ಹಾಗೂ ಉದ್ಯೋಗ ಆಧಾರಿತ ಆರ್ಥಿಕ ಸಹಾಯಕ್ಕಾಗಿ ಗ್ರಾಮ ಪಂಚಾಯಿತಿಗಳಿಗೆ ಅರ್ಜಿ ಹಾಕುವ ಮುಖಾಂತರ ಗ್ರಾಮ ಪಂಚಾಯಿತಿಗಳಿಗೆ ಮನವಿ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಪಂಚಾಯಿತಿ ಅಧ್ಯಕ್ಷರು ಹಾಗೂ ಪಿಡಿಒಗಳು ಸ್ವೀಕರಿಸಿದ ಅರ್ಜಿಗಳನ್ನು ಸೂಕ್ತವಾಗಿ ಪರಿಶೀಲಿಸಿ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ದಲಿತ ಹಕ್ಕುಗಳ ಸಮಿತಿ ರಾಜ್ಯಾಧ್ಯಕ್ಷರಾದ ಗೋಪಾಲಕೃಷ್ಣ ಹರಳಹಳ್ಳಿ ನೇತೃತ್ವದಲ್ಲಿ ಸಂಘಟನೆಯು ಎಲ್ಲಾ ಜಿಲ್ಲಾ ತಾಲ್ಲೂಕು ಹಾಗೂ ಗ್ರಾಮ ಘಟಕಗಳಿಗೆ ಕರೆ ನೀಡಲಾಗಿದೆ. ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಅದರ ಜೊತೆ ಆಧಾರ್ ಮತ್ತು ಪಡಿತರ ಚೀಟಿ ಜೆರಾಕ್ಸ್ ನಕಲು ಕಾಫಿಯನ್ನು ಲಗತ್ತಿಸಿ ಪಂಚಾಯಿತಿಗೆ ಅರ್ಜಿ ಸಲ್ಲಿಸಿ ಪ್ರತಿಯನ್ನು ಸಂಘಟನೆಯ ರಾಜ್ಯ ಸಮಿತಿಗೆ ತಲುಪಿಸಲು ಡಿ.ಹೆಚ್.ಎಸ್ ನ ಗ್ರಾಮ ಘಟಕಗಳ ಎಲ್ಲಾ ಕಾರ್ಯಕರ್ತರುಗಳಿಗೆ ಈ ಮೂಲಕ ತಿಳಿಸಲಾಗುತ್ತಿದೆ.

Share This Article
Leave a Comment