ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ನಿಗದಿಗಾಗಿ, ಕಾರ್ಮಿಕರ ಹಕ್ಕುಗಳ ರಕ್ಷಣೆಗಾಗಿ, ಹಾಗೂ ಸಾಮಾಜಿಕ ಭದ್ರತೆ ಜಾರಿಗಾಗಿ, CPI(M) ವತಿಯಿಂದ ರಾಜ್ಯದ್ಯಂತ ಜನಾಂದೋಲನವನ್ನು ಉದ್ದೇಶಿಸಿ ಸಿಪಿಐ(ಎಮ್) ರಾಜ್ಯ ಕಾರ್ಯದರ್ಶಿಗಳಾದ ಡಾ. ಕೆ. ಪ್ರಕಾಶ್ ಮಾತನಾಡಿದರು.

1 Min Read
1 Min Read

ತುಮಕೂರು: ಮಾಸಿಕ ವೇತನ 36,000 ನಿಗದಿಗಾಗಿ, ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ, ಶಿಕ್ಷಣದ ಖಾಸಗೀಕರಣ, ವ್ಯಾಪಾರರೀಕರಣ ವಿರೋಧಿಸಿ ಎಲ್ಲರಿಗೂ ಉಚಿತ ಆರೋಗ್ಯ ವ್ಯವಸ್ಥೆ ಮತ್ತು ಸಾರ್ವತ್ರಿಕ ಪಡಿತರ ವ್ಯವಸ್ಥೆ ಜಾರಿಗಾಗಿ ಎಲ್ಲರಿಗೂ ವಸತಿ ನಿವೇಶನಕ್ಕಾಗಿ ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷ ಮಾರ್ಕ್ಸ್ ವಾದಿ, CPI(M) ವತಿಯಿಂದ ರಾಜ್ಯದ್ಯಂತ ಜನಾಂದೋಲನವನ್ನು ಉದ್ದೇಶಿಸಿ ಸಿಪಿಐ(ಎಮ್) ರಾಜ್ಯ ಕಾರ್ಯದರ್ಶಿಗಳಾದ ಡಾ. ಕೆ. ಪ್ರಕಾಶ್ ಮಾತನಾಡಿದರು.

ಪ್ರಸ್ತುತ ರಾಜಕಾರಣ ಹಣ,ಜಾತಿ ಮತ್ತು ಧರ್ಮದ ಆಧಾರದ ಮೇಲೆ ನಡೆಯುತ್ತಿದ್ದು ಬಿಜೆಪಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಬಂಡವಾಳ ಶಾಹಿ ಪರವಾದ ಪಕ್ಷಗಳಾಗಿದ್ದು ಜನರಿಗೆ  ಜನಪರವಾದ ಪರ್ಯಾಯ ರಾಜಕೀಯ ಪಕ್ಷದ ಅವಶ್ಯಕತೆ ಇದೆ. ಭಾರತ ಕಮ್ಯುನಿಸ್ಟ್ ಪಕ್ಷ ಮಾರ್ಕ್ಸ್ ವಾದಿ CPI(M) ಸದಾ ದುಡಿಯುವ ಜನರ ಪರವಾದ ದನಿಯಾಗಿ ನಿರಂತರ ಹೋರಾಟ ರೂಪಿಸುತ್ತಿದೆ, ಹಾಗೂ ಆ ಮೂಲಕ ಜನರಿಗೆ ವಿಶ್ವಾಸಾರ್ಹ ರಾಜಕೀಯ ಶಕ್ತಿಯಾಗಿ ಹೊರಹೊಮ್ಮುತ್ತಿದೆ, ಜನರ ಸಮಸ್ಯೆಗಳಾದ ವಿದ್ಯುತ್ ಬಾರಿ ವೆಚ್ಚ, ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ, ಉದ್ಯೋಗ ಭದ್ರತೆ, ಆರ್ಥಿಕ ಭದ್ರತೆ, ತಲಾ ಆದಾಯ, ರೈತರ ಬೆಳೆಗಳಿಗೆ ಬೆಂಬಲ ಬೆಲೆ, ನಿರುದ್ಯೋಗ ಸಮಸ್ಯೆ, ಶಿಕ್ಷಣದ ಖಾಸಗಿಕರಣ, ವ್ಯಾಪಾರಿಕರಣ ಉಚಿತ ಆರೋಗ್ಯ ವ್ಯವಸ್ಥೆ, ಸಾರ್ವತ್ರಿಕ ಪಡಿತರ ವ್ಯವಸ್ಥೆ , ವಸತಿ, ನಿವೇಶನ ಹೀಗೆ ದಿನನಿತ್ಯದ ಜನರ ಬದುಕಿನ ಬವಣೆಯ ಭಾಗವಾಗಿ ಹೋರಾಟ ರೂಪಿಸಲು ಮನೆ ಮನೆಗೆ ತೆರಳಿ ಡಿಸೆಂಬರ್ 21 ನೇ ತಾರೀಕು  ಬೆಂಗಳೂರಿನಲ್ಲಿ ನಡೆಯುವ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಬೇಕೆಂದು ಸಿಪಿಐಎಂ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ  ಡಾ.ಕೆ.ಪ್ರಕಾಶ್ ಅವರು ತುಮಕೂರಿನ ಜನ ಚಳುವಳಿ ಕೇಂದ್ರದಲ್ಲಿ ನಡೆದ ಜನಂದೋಲನ ಸಭೆಯಲ್ಲಿ ಮಾತನಾಡಿದರು.

 

Share This Article
Leave a Comment